ರಾಮನ ಅವತಾರ ಚಿತ್ರದ ಟಿಕೆಟ್‌ ಬೆಲೆ ರು.99

KannadaprabhaNewsNetwork |  
Published : May 10, 2024, 01:34 AM ISTUpdated : May 10, 2024, 07:45 AM IST
ರಾಮನ ಅವತಾರ | Kannada Prabha

ಸಾರಾಂಶ

ಇದೇ ಮೇ.10ಕ್ಕೆ ರಾಮನ ಅವತಾರ ಸಿನಿಮಾ ತೆರೆಗೆ ಬರುತ್ತಿದೆ. ಟಿಕೆಟ್ ರೇಟು ಕಡಿಮೆ ಮಾಡಲಾಗಿದೆ.

 ಸಿನಿವಾರ್ತೆ

ರಿಷಿ ನಟನೆಯ ‘ರಾಮನ ಅವತಾರ’ ಸಿನಿಮಾ ಮೇ 10ಕ್ಕೆ ತೆರೆಗೆ ಬರುತ್ತಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸುವುದು ಅಪರೂಪವಾಗಿರುವ ಕಾರಣ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯಲು ಚಿತ್ರತಂಡ ಹೊಸ ತಂತ್ರ ಮಾಡಿದೆ. ಆ ಪ್ರಕಾರ ಚಿತ್ರದ ಟಿಕೆಟ್‌ ಬೆಲೆಯನ್ನು ರು.99ಕ್ಕೆ ನಿಗದಿ ಪಡಿಸಿದೆ.

ಈ ರಿಯಾಯಿತಿ ಮೇ 9ರಂದು ನಡೆಯಲಿರುವ ಪ್ರೀಮಿಯರ್ ಶೋ ಮತ್ತು ಸಿನಿಮಾ ಬಿಡುಗಡೆ ದಿನವಾದ ಮೇ 10ರಂದು ಮಾತ್ರ ಲಭ್ಯವಾಗಲಿದೆ. ಮಲ್ಟಿಪ್ಲೆಕ್ಸ್‌ ಹಾಗೂ ಸಿಂಗಲ್‌ ಸ್ಕ್ರೀನ್‌ ಎರಡರಲ್ಲೂ ಈ ಆಫರ್‌ ದೊರೆಯಲಿದೆ ಎಂದು ಚಿತ್ರತಂಡ ತಿಳಿಸಿದೆ. ಇದರಿಂದ ಆರಂಭದಲ್ಲಿ ಹೆಚ್ಚು ಮಂದಿ ಪ್ರೇಕ್ಷಕರು ಸಿನಿಮಾ ನೋಡಲು ಬರುವ ನಂಬಿಕೆ ಚಿತ್ರತಂಡಕ್ಕಿದ್ದು, ಮರುದಿನದಿಂದ ಬಾಯಿ ಮಾತಿನ ಪ್ರಚಾರದಿಂದ ಚಿತ್ರಕ್ಕೆ ಲಾಭವಾಗುವ ಭರವಸೆಯನ್ನು ಸಿನಿಮಾ ತಂಡ ಹೊಂದಿದೆ. ಈ ತಂತ್ರದ ಫಲಿತಾಂಶಕ್ಕೆ ಚಿತ್ರರಂಗವೂ ಕುತೂಹಲದಿಂದ ಎದುರು ನೋಡುತ್ತಿದೆ. ಪ್ರೇಕ್ಷಕರು ಈ ಕೊಡುಗೆಗೆ ಆಕರ್ಷಿತರಾದರೆ ಬೇರೆ ಸಿನಿಮಾ ತಂಡಗಳೂ ಈ ರೀತಿ ಆಲೋಚನೆ ಮಾಡಬಹುದಾಗಿದೆ.

ವಿಕಾಸ್‌ ಪಂಪಾಪತಿ ನಿರ್ದೇಶನದ, ಅಮರೇಜ್ ಸೂರ್ಯವಂಶಿ ನಿರ್ಮಾಣದ ಈ ಚಿತ್ರದಲ್ಲಿ ಪ್ರಣೀತಾ ಸುಭಾಷ್, ಶುಭ್ರಾ ಅಯ್ಯಪ್ಪ, ಅರುಣ್‌ ಸಾಗರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು
ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್