ಧುರಂಧರ್‌ 2 ಪ್ರೀಮಿಯರ್‌ ಶೋಗೆ ಟಿಕೆಟ್‌ ದರ ರು.2900

Published : Mar 11, 2026, 01:46 PM IST
dhurandhar 2

ಸಾರಾಂಶ

ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಸಿನಿಮಾಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶಾದ್ಯಂತ ಮಾ.18ರಂದು ಪ್ರೀಮಿಯರ್‌ ಶೋಗಳು ಆಯೋಜನಗೊಂಡಿದ್ದು, 2.8 ಲಕ್ಷ ಟಿಕೆಟ್‌ ಮಾರಾಟಗೊಂಡಿವೆ.

 ಸಿನಿವಾರ್ತೆ :  ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಸಿನಿಮಾಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶಾದ್ಯಂತ ಮಾ.18ರಂದು ಪ್ರೀಮಿಯರ್‌ ಶೋಗಳು ಆಯೋಜನಗೊಂಡಿದ್ದು, 2.8 ಲಕ್ಷ ಟಿಕೆಟ್‌ ಮಾರಾಟಗೊಂಡಿವೆ.

ಟಿಕೆಟ್‌ ದರ  ಏರಿಕೆ

ಟಿಕೆಟ್‌ ದರ ಕೂಡ ಏರಿಕೆಯಾಗಿದ್ದು, ಮುಂಬೈಯಲ್ಲಿ ಅತ್ಯಧಿಕ 3100 ರು. ಟಿಕೆಟ್‌ ದರ ನಿಗದಿಯಾಗಿದೆ. ಬೆಂಗಳೂರಿನಲ್ಲಿ 2900 ರು.ವರೆಗೂ ಟಿಕೆಟ್‌ ರೇಟ್‌ ಏರಿಕೆಯಾಗಿದೆ. ದೇಶದ ವಿವಿಧೆಡೆ ಟಿಕೆಟ್‌ ದರ 2000 ರು. ದಾಟಿದೆ. ಬೆಂಗಳೂರಿನಲ್ಲಿ ಮಾ.18ರ ಬಹುತೇಕ ಟಿಕೆಟ್‌ಗಳು ಸೋಲ್ಡೌಟ್‌ ಆಗಿವೆ. ಅನೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ 1500, 1200 ರಷ್ಟು ಟಿಕೆಟ್‌ ದರವಿದ್ದರೆ, ಹಲವೆಡೆ ರು.700 ರಷ್ಟು ದರವಿದೆ.

ಮಾ.19ರಂದು ಸಿನಿಮಾ ಬಿಡುಗಡೆ

ಮಾ.19ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಆ ದಿನದ ಟಿಕೆಟ್‌ ಬುಕಿಂಗ್‌ ಇನ್ನೂ ಶುರುವಾಗಿಲ್ಲ. ಪೇಯ್ಡ್‌ ಪ್ರೀಮಿಯರ್‌ಗೆ ಈವರೆಗೆ ಭಾರತದಲ್ಲಿ 3ಲಕ್ಷಕ್ಕೂ ಅಧಿಕ ಟಿಕೆಟ್‌ ಬುಕಿಂಗ್‌ ಆಗಿದೆ. ಪ್ರೀಮಿಯರ್‌ ಶೋಗಳಿಂದಲೇ ಚಿತ್ರತಂಡ 16 ಕೋಟಿ ರು.ಗೂ ಅಧಿಕ ಗಳಿಕ ಮಾಡುವ ನಿರೀಕ್ಷೆ ಇದೆ.

ಆದಿತ್ಯ ಧರ್‌ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್‌ ಸಿಂಗ್‌, ಅರ್ಜುನ್‌ ರಾಂಪಾಲ್‌, ಸಂಜಯ್‌ದತ್‌ ನಟಿಸಿದ್ದಾರೆ. ಯಶ್‌ ‘ಟಾಕ್ಸಿಕ್‌’ ರಿಲೀಸ್‌ ಮುಂದಕ್ಕೆ ಹೋಗಿರುವುದರಿಂದ ‘ಧುರಂಧರ್‌ 2’ಗೆ ಸ್ಪರ್ಧೆಯೇ ಇಲ್ಲದಂತಾಗಿದ್ದು, ಸಿನಿಮಾ ದಾಖಲೆಯ ಗಳಿಕೆ ಮಾಡುವ ನಿರೀಕ್ಷೆ ಇದೆ.

3 ಗಂಟೆ 55 ನಿಮಿಷಗಳ ಸುದೀರ್ಘ ಚಿತ್ರ ಇದಾಗಿದ್ದು, ಸೆನ್ಸಾರ್‌ನಿಂದ ‘ಎ’ ಸರ್ಟಿಫಿಕೇಟ್‌ ಪಡೆದಿದೆ. ಚಿತ್ರದ ಟ್ರೇಲರ್‌ಗೆ ಭಾರಿ ಮೆಚ್ಚುಗೆ ದೊರೆತಿದೆ. ರಣವೀರ್‌ ಸಿಂಗ್‌ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಉತ್ಸುಕರಾಗಿ ಕಾಯುತ್ತಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ವಿಷ್ಣು ಸರ್ ಥರ ನಾನೂ ಕೈಗೆ ಕಡಗ ಹಾಕಿಕೊಳ್ಳುತ್ತೇನೆ : ಗಣೇಶ್‌
ಶಿವಮೊಗ್ಗ : ಹೊಸನಗರದಲ್ಲಿ ಪತಿ ಜೊತೆ ಹೋಳಿ ಆಚರಿಸಿದ ಸಮಂತಾ