‘ಸಿಟಾಡೆಲ್‌ ಹನಿಬನಿ’ ವೆಬ್‌ ಸೀರೀಸ್ ಟೀಸರ್‌ ಲಾಂಚ್‌: ಗಾಥಿಕ್‌ ಬಸ್ಟಿಯರ್‌ ಟ್ರೆಂಡಿ ಡ್ರೆಸ್‌ನಲ್ಲಿ ಸಮಂತಾ

KannadaprabhaNewsNetwork |  
Published : Aug 03, 2024, 12:36 AM ISTUpdated : Aug 03, 2024, 06:06 AM IST
ಸಮಂತ | Kannada Prabha

ಸಾರಾಂಶ

ಸಮಂತಾ ಸ್ವೀಟ್‌ ಸ್ಮೈಲ್‌ ನೀಡಿ ಫೋಸ್ ನೀಡಿದ ಮರುಕ್ಷಣವೇ ಬಾಂಬ್‌ ಸಿಡಿಸಿದರು. ಬಾಲಿವುಡ್‌ನ ಸೋ ಕಾಲ್ಡ್‌ ಡಿಸೈನರ್‌ಗಳು ದಕ್ಷಿಣ ಭಾರತೀಯ ನಟಿಯರನ್ನು ಕೇವಲವಾಗಿ ಕಾಣುತ್ತಾರೆ ಎಂಬುದು ಅವರ ಸಿಟ್ಟಿಗೆ ಕಾರಣ.

 ಸಿನಿವಾರ್ತೆ

‘ಸಿಟಾಡೆಲ್‌ ಹನಿಬನಿ’ ವೆಬ್‌ ಸೀರೀಸ್ ಟೀಸರ್‌ ಲಾಂಚ್‌ನಲ್ಲಿ ಎಲ್ಲರ ಕಣ್ಣು ಸಮಂತಾ ಮೇಲೆ. ಅದಕ್ಕೆ ಕಾರಣ ಈಕೆ ಧರಿಸಿದ್ದ ಡ್ರೆಸ್‌. ಅಲ್ಲಿ ಸಮಂತಾ ಕಡುಗಪ್ಪು ಬಣ್ಣದ ಗಾಥಿಕ್‌ ಬಸ್ಟಿಯರ್‌ ಟ್ರೆಂಡಿ ಉಡುಗೆಯಲ್ಲಿ ಮಿಂಚಿದರು.

ಈ ಡ್ರೆಸ್‌ನ ವಿಶೇಷತೆ ಏನು ಅಂದರೆ ಇದು ಕವಚದ ಹಾಗೆ ಮೈಯನ್ನು ಒತ್ತಿ ನಿಲ್ಲುವ ಉಡುಗೆ. ಆರಂಭದಿಂದಲೂ ವಿದೇಶಗಳಲ್ಲಿ ಹೆಣ್ಮಕ್ಕಳ ಗೌನ್‌ ಈ ಮಾದರಿಯಲ್ಲಿತ್ತು.

ಸಮಂತಾ ಸ್ವೀಟ್‌ ಸ್ಮೈಲ್‌ ನೀಡಿ ಫೋಸ್ ನೀಡಿದ ಮರುಕ್ಷಣವೇ ಬಾಂಬ್‌ ಸಿಡಿಸಿದರು. ಬಾಲಿವುಡ್‌ನ ಸೋ ಕಾಲ್ಡ್‌ ಡಿಸೈನರ್‌ಗಳು ದಕ್ಷಿಣ ಭಾರತೀಯ ನಟಿಯರನ್ನು ಕೇವಲವಾಗಿ ಕಾಣುತ್ತಾರೆ ಎಂಬುದು ಅವರ ಸಿಟ್ಟಿಗೆ ಕಾರಣ. ‘ಯಾರು ನೀವು? ಸೌತ್‌ ಆ್ಯಕ್ಟರಾ?’ ಅಂತ ಹೀನಾಯವಾಗಿ ಕಾಣುವ ಡಿಸೈನರ್‌ಗಳ ಮನಸ್ಥಿತಿ ಬಹಳ ಕೆಟ್ಟದ್ದು ಎಂದು ಅವರು ಜಿಗುಪ್ಸೆ ವ್ಯಕ್ತಪಡಿಸಿದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಲಯಾಳಂನ ಸಿನಿಮಾ ನಿರ್ದೇಶಿಸುತ್ತಾರಾ ರಿಷಬ್‌? ಬಿಗ್‌ ಬಜೆಟ್‌ ಪ್ರಾಜೆಕ್ಟ್‌ಗೆ ಮರುಜೀವ
ಪಾಕ್‌ನ ಚಿತ್ರಮಂದಿರದಲ್ಲಿ ಬ್ಯಾನ್‌ ಆಗಿದ್ದ ಧುರಂಧರ್‌, ನೆಟ್‌ಫ್ಲಿಕ್ಸ್‌ ಒಟಿಟೀಲಿ ನಂ.1