ಚಿತ್ರದಲ್ಲಿ ನಾನು ಮಾಸ್ ಹೀರೋ, ರಿಯಲ್‌ನಲ್ಲಿ ನಾನು ತುಂಬಾ ಸೈಲೆಂಟ್‌ : ಸಮರ್‌ಜಿತ್ ಲಂಕೇಶ್

KannadaprabhaNewsNetwork |  
Published : Aug 15, 2024, 01:57 AM ISTUpdated : Aug 15, 2024, 03:53 AM IST
ಸಮರಜಿತ್‌ | Kannada Prabha

ಸಾರಾಂಶ

ಸಿನಿಮಾದಲ್ಲಿ ಗೌರಿ ಸಖತ್ ವೈಬ್ರೆಂಟ್‌. ಆತನ ಹಾವ ಭಾವ ಎಲ್ಲವೂ ಮಾಸ್‌. ಆದರೆ ರಿಯಲ್‌ನಲ್ಲಿ ನಾನು ತುಂಬಾ ಸೈಲೆಂಟ್‌ ಹುಡುಗ ಅಂತಿದ್ದಾರೆ ಸಮರಜಿತ್‌ ಲಂಕೇಶ್‌.

ಪ್ರಿಯಾ ಕೆರ್ವಾಶೆ

- ಚಿಕ್ಕವನಿದ್ದಾಗಿನಿಂದಲೂ ನಾನು ಯಾವುದಾದ್ರೂ ಸಿನಿಮಾ ನೋಡಿದರೆ ಅದರಲ್ಲಿ ಇಷ್ಟವಾಗಿರುವ ಪಾತ್ರವನ್ನು ಮನೆಗೆ ಬಂದು ಎನಾಕ್ಟ್‌ ಮಾಡುವ ಅಭ್ಯಾಸ. ಅಪ್ಪು ಸರ್, ಸುದೀಪ್ ಸೇರಿ ಎಲ್ಲರನ್ನೂ ಅನುಕರಿಸುತ್ತಿದ್ದೆ. ನನ್ನ ಸಿನಿಮಾ ಕನಸು ಕುಡಿಯೊಡೆದದ್ದು ಅಲ್ಲೇ. ಆಗೆಲ್ಲ ನಾನೇ ಹೀರೋ ಅನ್ನೋ ಫೀಲ್ ಇರ್ತಿತ್ತು. ಈಗ ರಿಯಲ್ಲಾಗಿ ಹೀರೋ ಆಗಿದ್ದೇನೆ. ಕನಸು ನನಸಾದ ಖುಷಿ, ರೆಸ್ಪಾನ್ಸ್‌ ಬಗ್ಗೆ ಆತಂಕ, ಏನಾಗುತ್ತೋ ಅನ್ನೋ ಭಯ ಎಲ್ಲಾ ಇದೆ.

- ಇಂದ್ರಜಿತ್‌ ಅವರಂಥಾ ನಿರ್ದೇಶಕರ ಮಗನಾಗಿರುವ ಕಾರಣ ಇಂಡಸ್ಟ್ರಿಗೆ ಎಂಟ್ರಿಗೆ ಸ್ಟ್ರಗಲ್‌ಗಳಿರಲಿಲ್ಲ ನಿಜ, ಆದರೆ ಅಷ್ಟಕ್ಕೇ ಎಲ್ಲವೂ ಮುಗಿಯೋದಿಲ್ವಲ್ಲ.. 

ಸಿನಿಮಾ ರಂಗದಲ್ಲಿ ನೆಲೆಯೂರುವುದು ಪ್ರತೀ ನಟನ ಮುಂದಿರುವ ಸವಾಲು. - ಗೌರಿ ಸಿನಿಮಾದಲ್ಲಿ ನನ್ನ ಮೊದಲ ಶಾಟ್‌ ಬೈಕ್‌ನಲ್ಲಿ ಎಂಟ್ರಿ ಕೊಡೋದಾಗಿತ್ತು. ಆಗ ಗೆರೆ ದಾಟಿ ಮುಂದೆ ಹೋಗಿ ಬಿಟ್ಟೆ. ಎರಡನೇ ಶಾಟ್‌ ಓಕೆ ಆಯ್ತು. ಆದರೂ ಫಸ್ಟ್ ಮೂವಿ, ಫಸ್ಟ್ ಶಾಟ್‌ ಯಾವತ್ತೂ ಮನಸ್ಸಲ್ಲಿರುತ್ತೆ. 

- ಸಿನಿಮಾದಲ್ಲಿ ಗೌರಿ ಸಖತ್ ವೈಬ್ರೆಂಟ್‌. 

ಆತನ ಹಾವ ಭಾವ ಎಲ್ಲವೂ ಮಾಸ್‌. ಆದರೆ ರಿಯಲ್‌ನಲ್ಲಿ ನಾನು ತುಂಬಾ ಸೈಲೆಂಟ್‌ ಹುಡುಗ. ಅಂತರ್ಮುಖಿ. ಜಾಸ್ತಿ ಮಾತಾಡಲ್ಲ. ಮಾತಾಡೋದಕ್ಕಿಂತಲೂ ಇನ್ನೊಬ್ಬರ ಮಾತು ಕೇಳೋದು ಇಷ್ಟ. ನನ್ನ ವಿರುದ್ಧ ಸ್ವಭಾವದ ಪಾತ್ರ ಮಾಡೋದು ಎಷ್ಟು ಚಾಲೆಂಜಿಂಗೋ ಅಷ್ಟೇ ಥ್ರಿಲ್ಲಿಂಗ್‌. ನಮ್ಮಿಬ್ಬರ ನಡುವೆ ಇರುವ ಸಾಮ್ಯತೆ ಅಂದರೆ ಫ್ರೆಂಡ್ಲೀ ಸ್ವಭಾವ. ಒಟ್ಟಾರೆ ಪಾತ್ರವನ್ನು ಬಹಳ ಎನ್‌ಜಾಯ್‌ ಮಾಡಿದ್ದೀನಿ. 

- ಟ್ರೇಲರ್‌ ಲಾಂಚ್‌ನಲ್ಲಿ ಸುದೀಪ್‌ ನನ್ನ ಇನ್ನೋಸೆಂಟ್‌ ಅಂದಿದ್ದು ಸ್ವಲ್ಪ ಸೌಂಡ್‌ ಮಾಡಿತು. 

ಸಾಮಾನ್ಯವಾಗಿ ಜೆನ್‌ ಝೀ ಹುಡುಗರು ಇನ್ನೋಸೆಂಟ್‌ ಇರಲ್ಲ ಅನ್ನೋ ಮಾತಿದೆ. ನನ್ನನ್ನೇ ನಾನು ಚೆಕ್‌ ಮಾಡ್ತಾ ಇದ್ದೀನಿ, ನಾನು ಇನ್ನೋಸೆಂಟ್‌ ಹೌದೋ ಅಲ್ವೋ ಅಂತ.

 - ನನಗೆ ಸಿನಿಮಾಗೆ ಬರಬೇಕು ಅನ್ನೋದು ಮನಸ್ಸಲ್ಲಿದ್ದರೂ ಅಪ್ಪನ ನಿರ್ದೇಶನದಲ್ಲಿ ಮೊದಲ ಸಿನಿಮಾ ಮಾಡ್ತೀನಿ ಅಂತ ಖಂಡಿತಾ ಅಂದುಕೊಂಡಿರಲಿಲ್ಲ. ನಾವಿಬ್ಬರೂ ಮನೆಯಲ್ಲಿ ಬಹಳ ಫ್ರೆಂಡ್ಲಿ ಆಗಿರ್ತೀವಿ. ಸೆಟ್‌ಗೆ ಬಂದರೆ ಅವರು ಪಳಗಿದ ನಿರ್ದೇಶಕ, ನಾನು ಈಗಷ್ಟೇ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ನಟ. ಅಲ್ಲಿ ಅಪ್ಪ, ಮಗನ ಸಂಬಂಧ ಕೌಂಟ್‌ ಆಗಿಲ್ಲ. 

- ಈಗಾಗಲೇ ರಿಲೀಸ್‌ ಆಗಿರೋ ಹಾಡು, ಸಿನಿಮಾ ತುಣುಕು ನೋಡಿ ಅನೇಕ ಜನ ಸಾನ್ಯಾ ಹಾಗೂ ನನ್ನ ಕೆಮಿಸ್ಟ್ರಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ, ಅದರಲ್ಲಿ ನಮ್ಮಿಬ್ಬರ ನಟನೆಯನ್ನು ಪೂರ್ತಿ ಸವಿಯಬಹುದು. - ನನ್ನ ಪ್ರಕಾರ ಗೌರಿ ಸಿನಿಮಾದಲ್ಲಿರೋ ಐದು ಅದ್ಭುತಗಳು -

1. ಸ್ಫೂರ್ತಿ ನೀಡುವ, ಎಮೋಶನಲ್‌ ಆಗಿ ಕನೆಕ್ಟ್‌ ಆಗುವ ಕನ್ನಡ ಜನರ ಅದ್ಭುತ ಕಥೆ.

2. ಸೊಗಸಾದ ಹಾಡುಗಳು.

3. ಸ್ಟಾರ್‌ ನಿರ್ದೇಶಕ ಇಂದ್ರಜಿತ್‌ ಅವರ ಸ್ಟೈಲಿಶ್‌ ಮೇಕಿಂಗ್‌.

4. ಸಾನ್ಯಾ ಮತ್ತು ನನ್ನ ತಾಜಾ ನಟನೆ.

5. ಆ್ಯಕ್ಷನ್, ಮಾಸ್‌ ಎಲಿಮೆಂಟ್‌, ಮಾಸ್ತಿ ಅವರ ಖಡಕ್‌ ಡೈಲಾಗ್‌.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ