ಶರಣ್ ಅಭಿನಯದ ಹಾರರ್ ಸಿನಿಮಾ ‘ಛೂ ಮಂತರ್’ ಮೇ 10ರಂದು ಬಿಡುಗಡೆ ಆಗಲಿದೆ. ಈ ಚಿತ್ರ ಏಪ್ರಿಲ್ 5ರಂದು ಬಿಡುಗಡೆ ಆಗಬೇಕಿತ್ತು. ಆದರೆ ನಾನಾ ಕಾರಣಗಳಿಂದ ಬಿಡುಗಡೆ ಮುಂದಕ್ಕೆ ಹೋಗಿ ಈಗ ಅಂತಿಮವಾಗಿ ಮೇ 10ರಂದು ತೆರೆ ಕಾಣಲಿದೆ.
ಇದೊಂದು ಹೈಪರ್‌ಲಿಂಕ್ ಕಥಾ ವಸ್ತು ಇರುವ ಹಾರರ್ ಸಿನಿಮಾ ಆಗಿದೆ. ಶರಣ್ ವಿಶಿಷ್ಟ ವಸ್ತುಗಳುಳ್ಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾ ಮೂಲಕ ಹಾರರ್ ವಸ್ತು ಇರುವ ಕತೆಯಲ್ಲಿ ನಟಿಸಿದ್ದಾರೆ. ಈ ಕುರಿತು ನಿರ್ಮಾಪಕ ತರುಣ್ ಶಿವಪ್ಪ, ‘ಹಲವಾರು ಕತೆಗಳನ್ನು ಕೇಳಿದ ಬಳಿಕ ಈ ವಿಶಿಷ್ಟ ಕತೆಯುಳ್ಳ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ.