;Resize=(412,232))
ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳು ನಿರ್ಮಾಪಕ ಸುಧನ್ ಸುಂದರಮ್ ಅವರ ಕೈ ಹಿಡಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 25ಕ್ಕೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಮ್ ಅವರ ನಿಶ್ಚಿತಾರ್ಥ ನಡೆಯಲಿದೆ.
ಪ್ಯಾಷನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿರುವ ಸುಧನ್ ಅವರು ಕೆಲ ವರ್ಷಗಳ ಹಿಂದೆ ಬಿಡುಗಡೆ ಆದ ಬ್ಲಾಕ್ ಬಸ್ಟರ್ ಸಿನಿಮಾ ವಿಜಯ್ ಸೇತುಪತಿ ನಟನೆ ‘ಮಹಾರಾಜ’ ಚಿತ್ರದ ಜೊತೆಗೆ ‘ಬೆಂಜ್’, ‘ಇರೈವನ್’ ಸೇರಿದಂತೆ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಇನ್ನೂ ಕನ್ನಡದಲ್ಲಿ ‘ಅದೃಷ್ಟಶಾಲಿ’ ಹಾಗೂ ‘ದಸರಾ’ ಚಿತ್ರಗಳನ್ನು ನಿರ್ಮಿಸುವ ಜೊತೆಗೆ ನಟಿಸುತ್ತಿರುವ ಶರ್ಮಿಳಾ ಮಾಂಡ್ರೆ, ತಮಿಳಿನಲ್ಲಿ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದಾರೆ. ಸದ್ಯ ‘ಕಾದಲ್ ಕೊಂಜಂ ತೂಕಲಾ’ ಸಹ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.