ಟಾಕ್ಸಿಕ್ ಟೀಸರ್ ಮೆಚ್ಚಿಕೊಂಡ ಶಿವಣ್ಣ

KannadaprabhaNewsNetwork |  
Published : Dec 16, 2023, 02:00 AM IST
ಶಿವರಾಜ್ ಕುಮಾರ್  | Kannada Prabha

ಸಾರಾಂಶ

ಯಶ್ ನಟನೆಯ ‘ಟಾಕ್ಸಿಕ್‌’ ಸಿನಿಮಾದ ಟೀಸರನ್ನು ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಯಶ್ ಬೆಳವಣಿಗೆಯನ್ನು ಕೊಂಡಾಡಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ಯಶ್ ನಟನೆಯ ‘ಟಾಕ್ಸಿಕ್‌’ ಸಿನಿಮಾದ ಟೀಸರನ್ನು ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಯಶ್ ಬೆಳವಣಿಗೆಯನ್ನು ಕೊಂಡಾಡಿದ್ದಾರೆ.

‘ಟಾಕ್ಸಿಕ್ ಅನ್ನೋದರಲ್ಲೇ ಒಂದು ನಶೆ, ಕಿಕ್ ಇದೆ. ನಾವೂ ಈ ಸಿನಿಮಾಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ. ಟಾಕ್ಸಿಕ್ ಅದ್ಭುತವಾಗಿ ತಯಾರಾಗುತ್ತಿರುವುದು ಹೆಮ್ಮೆ. ನಮ್ಮ ಕರ್ನಾಟಕದವರು ದೇಶದ ತುಂಬಾ ಮೆರೆಯುತ್ತಾರೆ ಅಂದರೆ ಅದು ನಾವೇ ಮೆರೆದಂತೆ. ನನ್ನ ಮತ್ತೊಬ್ಬ ಸಹೋದರನ ಥರ ಯಶ್. ನಾನು, ಅಪ್ಪು, ಯಶ್ ಕೊನೆ ಕಾರ್ಯಕ್ರಮದಲ್ಲಿ ಜೊತೆಯಲ್ಲಿದ್ದೆವು. ನನಗೆ ಯಶ್ ಬೇರೆ ಅಲ್ಲ, ಅಪ್ಪು ಬೇರೆ ಅಲ್ಲ. ಯಶ್ ಈ ರೀತಿ ಬೆಳೆಯುತ್ತಿರುವುದು ನನ್ನ ತಮ್ಮನೇ ಬೆಳೆಯುತ್ತಿರುವಂತೆ ಅನಿಸುತ್ತದೆ’ ಎಂದು ಅವರು ಹೇಳಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಾರ್ಚ್‌ 8ಕ್ಕೆ ಯಶ್ ಟಾಕ್ಸಿಕ್ ಟ್ರೇಲರ್
ನಟಿಯರ ಮಾನಕ್ಕೆ ಧಕ್ಕೆಯಾಗುತ್ತಿದೆ : ಸಪ್ತಮಿ ಗೌಡ