ಶೈನ್ ಶೆಟ್ಟಿಯ ಹಲವು ವರ್ಷಗಳ ತಪಸ್ಸು ಶಂಕರಾಭರಣ

Published : Sep 07, 2026, 12:00 PM IST
Shine Shetty

ಸಾರಾಂಶ

‘ನಮಗೆ ಅನ್ನಿಸುವುದನ್ನು ಮಾಡಬೇಕಾದರೆ ವೇದಿಕೆ ನಮ್ಮದೇ ಆಗಿರಬೇಕು. ಹಾಗಾಗಿ ನಾನೇ ನಿರ್ಮಾಣ ಸಂಸ್ಥೆ ಕಟ್ಟಿ ಮಾಡಿದ ಸಿನಿಮಾ ಇದು. ಹಲವು ವರ್ಷಗಳ ಶ್ರಮದ, ಕನಸಿನ ಫಲ ಈ ಶಂಕರಾಭರಣ’. - ಶೈನ್ ಶೆಟ್ಟಿ ಹೇಳಿದ ಮಾತಿದು.

ಸಿನಿವಾರ್ತೆ

‘ನಮಗೆ ಅನ್ನಿಸುವುದನ್ನು ಮಾಡಬೇಕಾದರೆ ವೇದಿಕೆ ನಮ್ಮದೇ ಆಗಿರಬೇಕು. ಹಾಗಾಗಿ ನಾನೇ ನಿರ್ಮಾಣ ಸಂಸ್ಥೆ ಕಟ್ಟಿ ಮಾಡಿದ ಸಿನಿಮಾ ಇದು. ಹಲವು ವರ್ಷಗಳ ಶ್ರಮದ, ಕನಸಿನ ಫಲ ಈ ಶಂಕರಾಭರಣ’.

- ಶೈನ್ ಶೆಟ್ಟಿ ಹೇಳಿದ ಮಾತಿದು. ಸಾಮಾನ್ಯವಾಗಿ ಪ್ರತಿಯೊಬ್ಬ ಕಲಾವಿದರೂ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಕೆಲವರು ಆ ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಶೈನ್ ಎರಡರೇ ದಾರಿ ಆರಿಸಿಕೊಂಡಿದ್ದಾರೆ. ಅವರ ತಂಡ ನಿರ್ಮಿಸಿರುವ, ಅವರು ನಾಯಕನಾಗಿ ನಟಿಸಿರುವ, ‘ಮಿಥ್ಯ’ ಖ್ಯಾತಿಯ ಸುಮಂತ್ ಭಟ್ ನಿರ್ದೇಶನದ ‘ಶಂಕರಾಭರಣ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ ಮತ್ತು ಮೆಚ್ಚುಗೆ ಗಳಿಸಿದೆ.

‘ರಿಷಬ್ ಶೆಟ್ಟಿಯವರ ಸಂಸ್ಥೆಯಲ್ಲಿ ನಾನೊಂದು ಸಿನಿಮಾ ಮಾಡಬೇಕಿತ್ತು. ಅದಕ್ಕಾಗಿ ಕತೆ ಮಾಡಿದ್ದಾಗ ಅವರು ಮೆಚ್ಚಿದ್ದರು. ನಾನೂ ಕತೆ ಮಾಡಬಹುದು ಅನ್ನುವ ಧೈರ್ಯ ಬಂದಿತ್ತು. ಆಮೇಲೆ ನಾನೇ ನಿರ್ಮಾಣ ಸಂಸ್ಥೆ ಮಾಡುವ ಧೈರ್ಯ ಮಾಡಿದೆ. ಹಲವು ಸಮಯ ಹೋರಾಟ ಮಾಡಿದರೂ ನಿರ್ಮಾಪಕರು ಸಿಗಲಿಲ್ಲ. ಕೊನೆಗೆ ಅಣ್ಣ ದಿವಾಕರ ಶೆಟ್ಟಿ ಜೊತೆಯಾದರು. ರಂಗಸ್ಥಳ ಸಂಸ್ಥೆ ಕಟ್ಟಿದೆವು. ನನ್ನ ಕತೆಯನ್ನು ಸುಮಂತ್‌ ಭಟ್ರಿಗೆ ಹೇಳಿ ಅವರೂ ಒಪ್ಪಿ ಸಿನಿಮಾ ಆಗಿದೆ.

ಈ ಪಯಣ ನನಗೆ ತೃಪ್ತಿ ಕೊಟ್ಟಿದೆ

ಈ ಪಯಣ ನನಗೆ ತೃಪ್ತಿ ಕೊಟ್ಟಿದೆ. ಒಂದೊಳ್ಳೆ ಸಿನಿಮಾ ಮಾಡಿದ ಸಾರ್ಥಕತೆ ತಂದಿದೆ’ ಎನ್ನುತ್ತಾರೆ ಶೈನ್.ಇದೊಂದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಶೈನ್ ಬಸ್‌ ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ. ಕರಾವಳಿ ಭಾಗದ ಖಾಸಗಿ ಬಸ್‌ಗಳ ಜಗತ್ತು ಈ ಕತೆಯಲ್ಲಿ ಅನಾವರಣಗೊಳ್ಳಲಿದೆ. ತನ್ವಿ ರಾವ್ ಈ ಚಿತ್ರದ ನಾಯಕಿ. ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್‌ರಾಜ್‌ ಸಂಗೀತ ನೀಡಿರುವ ಈ ಚಿತ್ರ ನ.20ರಂದು ಬಿಡುಗಡೆಯಾಗಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಮಣ್ಣಿನ ಕಥೆಗಳಿಗಷ್ಟೇ ಗೆಲುವು
ಕಿಚ್ಚ ಸುದೀಪ್‌ 54ನೇ ಹುಟ್ಟುಹಬ್ಬ ಆಚರಣೆ