ನಾಳೆ ಹೆಡೆಮುರಿ ಚಲನಚಿತ್ರದ ಟ್ರೈಲರ್ ಬಿಡುಗಡೆ

KannadaprabhaNewsNetwork |  
Published : Sep 16, 2025, 12:03 AM IST
ನಾಳೆ ಹೆಡೆಮುರಿ ಚಿತ್ರದ ಟ್ರೈಲರ್ ಬಿಡುಗಡೆ | Kannada Prabha

ಸಾರಾಂಶ

ಜ್ಞಾನವರ್ಷ ಕ್ರಿಯೇಷನ್ಸ್ ವತಿಯಿಂದ ನಿರ್ಮಿಸಲಾಗಿರುವ ಹೆಡೆಮುರಿ ಚಿತ್ರ ಸುಮಾರು ೨೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಚಿತ್ರವನ್ನು ಭ್ರೂಣ ಹತ್ಯೆ, ಶಿಶು ಮರಣದ ಕಥಾನಕವನ್ನು ಇಟ್ಟುಕೊಂಡು ಚಿತ್ರವನ್ನು ಕಲಾತ್ಮಕವಾಗಿ ನಿರ್ಮಾಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜ್ಞಾನವರ್ಷ ಕ್ರಿಯೇಷನ್ಸ್ ವತಿಯಿಂದ ನಿರ್ಮಿಸಲಾಗಿರುವ ಹೆಡೆಮುರಿ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಸೆ.೧೭ರಂದು ಸಂಜೆ ೪ ಗಂಟೆಗೆ ನಗರದಲ್ಲಿನ ನೆಹರು ನಗರದ ಚಲುವಯ್ಯ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಚಿತ್ರನಿರ್ದೇಶಕ ಯೋಗಾನಂದ ಡಿ.ಎ. ಕೆರೆ ತಿಳಿಸಿದರು.

ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಚಾಮರಾಜನಗರ ನಳಂದ ವಿಶ್ವವಿದ್ಯಾಲಯದ ಬೌದ್ದ ಉಪನ್ಯಾಸಕ ಬೋ ದತ್ತ ಬಂತೇಜಿ ದಿವ್ಯ ಸಾನ್ನಿಧ್ಯ ವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಸಕ ಡಿ.ಎಸ್.ವೀರಯ್ಯ, ಆಹಾರ ನಿಗಮದ ಅಧ್ಯಕ್ಷ ಡಾ.ಕೃಷ್ಣ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಆರ್‌ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ವೆಂಕಟಸ್ವಾಮಿ, ಚಲನಚಿತ್ರ ನಟ, ನಿರ್ಮಾಪಕ ಮಹದೇವಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವರು ಭಾಗವಹಿಸುವರು ಎಂದರು.

ಮನ್‌ಮುಲ್ ಅಧ್ಯಕ್ಷ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಉಪನಿರ್ದೇಶಕ ರಾಜಮೂರ್ತಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಲಿಂಗೇಗೌಡ, ಜಿ.ಆರ್.ಎಂಟರ್ ಪ್ರೈಸಸ್‌ನ ವೆಂಕಟೇಶ್, ಹೊಸ ಜೀವನ ಫೌಂಡೇಷನ್ ಅಧ್ಯಕ್ಷ ಗಣೇಶ್ ಪಿಂಚೇಗೌಡ, ರೈತಪರ ಹೋರಾಟಗಾರ ಹೆಮ್ಮಿಗೆ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.

ಸುಮಾರು ೨೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಚಿತ್ರವನ್ನು ಭ್ರೂಣ ಹತ್ಯೆ, ಶಿಶು ಮರಣದ ಕಥಾನಕವನ್ನು ಇಟ್ಟುಕೊಂಡು ಚಿತ್ರವನ್ನು ಕಲಾತ್ಮಕವಾಗಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಗೋಷ್ಠಿಯಲ್ಲಿ ಚಲನಚಿತ್ರದ ನಿರ್ದೇಶಕ ಚಿತ್ರ ನಿರ್ಮಾಪಕ ಎಂ.ಪಿ. ವಿಶ್ವ, ನಟರಾದ ಜೂನಿಯರ್ ಅಂಬರೀಶ್ ಖ್ಯಾತಿಯ ಪುಟ್ಟಸ್ವಾಮಿ, ಜೂನಿಯರ್ ನರಸಿಂಹರಾಜು ಗೋಷ್ಠಿಯಲ್ಲಿದ್ದರು.

PREV

Recommended Stories

ಕೆಡಿ ಸಿನಿಮಾದಲ್ಲಿ ಸುದೀಪ್
ಸೀರೆ ಮೇಲೆ ಜಾಕೆಟ್‌ ಬಂತು! ಜಾನ್ವಿ ಕಪೂರ್‌ ಹೊಸ ಸ್ಟೈಲು