ನನ್ನ ಹೀರೋಗಳಲ್ಲಿ ತಿಮ್ಮಕ್ಕ ಒಬ್ಬರು : ರಾಜೀವ್‌ ಚಂದ್ರಶೇಖರ್‌

Published : Nov 15, 2025, 10:46 AM IST
Rajeev Chandrasekhar

ಸಾರಾಂಶ

ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ಹಿರೋಗಳಲ್ಲಿ ಒಬ್ಬರಾದ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ  ಎಂದರು

 ಬೆಂಗಳೂರು :  ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನನ್ನ ಹಿರೋಗಳಲ್ಲಿ ಒಬ್ಬರಾದ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರು ಪರಿಸರ ಬಗ್ಗೆ ಕಾಳಜಿ ಹೊಂದಿರುವ ನಿಜವಾದ ಯೋಧರಾಗಿದ್ದರು. ಪರಿಸರವನ್ನು ಉಳಿಸಲು ಭಾರತದ ಅನೇಕ ತಲೆಮಾರುಗಳ ಜನರಿಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂದರು.

ವಿಶೇಷ ವ್ಯಕ್ತಿ

ಇಂಥ ವಿಶೇಷ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬ ಸದಸ್ಯರು, ಹಿತೈಷಿಗಳು ಮತ್ತು ಅವರ ಅದ್ಭುತವಾದ ಜೀವನದಿಂದ ಸ್ಪೂರ್ತಿ ಪಡೆದಿರುವ ಎಲ್ಲರಿಗೂ ನನ್ನ ಸಂತಾಪಗಳು. ಓಂ ಶಾಂತಿ ಎಂದು ರಾಜೀವ್ ಚಂದ್ರಶೇಖರ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ನೆರವಿಗೆ ಧಾವಿಸಿದ್ದ ಆರ್‌ಸಿ:

2017ರಲ್ಲಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಾಲು ಮರದ ತಿಮ್ಮಕ್ಕ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದ ರಾಜೀವ್ ಚಂದ್ರಶೇಖರ್ ಅವರು, ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಿದ್ದರು.

ತಿಮ್ಮಕ್ಕ ಅವರು ಆಸ್ಪತ್ರೆಯ ವೈದ್ಯಕೀಯ ಬಿಲ್‌ ಭರಿಸಲು ಪರದಾಡುತ್ತಿದ್ದ ವಿಚಾರ ತಿ‍ಳಿದು, ನೇರವಾಗಿ ಆಸ್ಪತ್ರೆಗೆ ತೆರಳಿ ಬಿಲ್ ಪಾವತಿಸಿದ್ದರು. ಅದಕ್ಕೂ ಮೊದಲು ಒಮ್ಮೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ, ನಿಮ್ಮ ಪರಿಸರ ಕಾಳಜಿ ಮತ್ತು ಸಮಾಜಕ್ಕೆ ನೀಡಿದ ಅಪೂರ್ವ ಕೊಡುಗೆ ಗೌರವಾರ್ಥವಾಗಿ ನಾನೇ ಬಿಲ್‌ ಪಾವತಿಸುತ್ತೇನೆ ಎಂದು ರಾಜೀವ್ ಹೇಳಿದ್ದರು. 

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?
ರಾಕಿಂಗ್‌ ಸ್ಟಾರ್‌ ಮುಂದಿನ ನಿರ್ದೇಶಕರಿಗೆ ಗೀತು ಮೋಹನ್‌ದಾಸ್‌ ಕಿವಿಮಾತು