ಯೋಗ್ಯತೆ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ: ಕಂಗನಾ ರಾಣಾವತ್‌

Published : Jun 04, 2026, 12:58 PM IST
Kangana Ranaut

ಸಾರಾಂಶ

ಬಾಲಿವುಡ್‌ನಲ್ಲಿ ರಣವೀರ್‌ ಸಿಂಗ್‌ ನಿಷೇಧ ಪ್ರಕರಣ ಸುಖಾಂತ್ಯಗೊಂಡಿದೆ. ಈ ನಡುವೆ ಕಂಗನಾ ರಾಣಾವತ್‌, ರಣವೀರ್‌ ಸಿಂಗ್‌ ಪರವಾಗಿ ಮಾತನಾಡಿದ್ದಾರೆ. ‘ಬ್ಯಾನ್‌ ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್‌ ಮಾಡಿದ್ದಾರೆ.

 ಸಿನಿವಾರ್ತೆ

ಬಾಲಿವುಡ್‌ನಲ್ಲಿ ರಣವೀರ್‌ ಸಿಂಗ್‌ ನಿಷೇಧ ಪ್ರಕರಣ ಸುಖಾಂತ್ಯಗೊಂಡಿದೆ. ಈ ನಡುವೆ ಕಂಗನಾ ರಾಣಾವತ್‌, ರಣವೀರ್‌ ಸಿಂಗ್‌ ಪರವಾಗಿ ಮಾತನಾಡಿದ್ದಾರೆ.

‘ಬ್ಯಾನ್‌ ಅನುಭವ ನನಗೂ ಆಗಿದೆ

‘ಬ್ಯಾನ್‌ ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್‌ ಮಾಡಿದ್ದಾರೆ. ನಿಮ್ಮ ಯೋಗ್ಯತೆ ಹೆಚ್ಚಾದಾಗ ನಿಮಗೆ ಶತ್ರುಗಳೂ ಹೆಚ್ಚಾಗುತ್ತಾರೆ. ನಿಮ್ಮ ಸ್ಥಾನಮಾನ ಹೆಚ್ಚಾದಾಗ ಶತ್ರುಗಳು ಬೆಳೆಯದೇ ಇರಲು ಸಾಧ್ಯವಿಲ್ಲ. ಸದ್ಯ ರಣವೀರ್‌ ಅವರು ತನ್ನ ಸ್ಥಾನಮಾನ ಎಷ್ಟು ಎತ್ತರಕ್ಕೇರಿದೆ ಎಂದು ಖುಷಿ ಪಡಬೇಕು. ಏಕೆಂದರೆ ಅವರಿಗೆ ಅಷ್ಟೊಂದು ಜನ ಶತ್ರುಗಳಿದ್ದಾರೆ. ಜೀವನದಲ್ಲಿ ಅಡೆತಡೆಗಳು ಸಾಮಾನ್ಯ. ಯಾವಾಗಲೂ ಎಲ್ಲವೂ ಸುಲಭವಿರುವುದಿಲ್ಲ. ನನ್ನನ್ನು ನೋಡಿ, ಹಿಂದೆ ವಿವಾದಗಳಾಗಿದ್ದರೂ ಇವತ್ತು ಚೆನ್ನಾಗಿಯೇ ಇದ್ದೇನೆ. ಕೊನೆಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ’ ಎಂದು ಕಂಗನಾ ಹೇಳಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಯುವಕರನ್ನು ಸೆಳೆಯಲು ಗೇಮಿಂಗ್‌ ಕ್ಷೇತ್ರಕ್ಕೆ ಬಂದ ಯಶ್
ರಾಮ್‌ಚರಣ್‌ಗೆ ಆಫ್ರಿಕನ್‌ ಕುಸ್ತಿಪಟು ಬಾಡಿಗಾರ್ಡ್‌:ದಿನಕ್ಕೆ ₹4 ಲಕ್ಷ ಸಂಬಳ!