;Resize=(412,232))
‘ಶೃಂಗಾರ, ಬಯಕೆ, ಗ್ಯಾಂಗ್‌ಸ್ಟರ್ ಕತೆಯನ್ನು ಒಬ್ಬ ಮಹಿಳೆ ಹೇಗೆ ತೋರಿಸಬಹುದೆಂದು ಗೀತು ಮೋಹನ್ ದಾಸ್ ಅವರಿಂದ ತಿಳಿದುಕೊಂಡೆ’.
- ಹೀಗೆ ಹೇಳಿದ್ದು ನಟ ಯಶ್ ಅವರು. ‘ಟಾಕ್ಸಿಕ್’ ಚಿತ್ರದ ಬೋಲ್ಡ್ ಸೀನ್‌ಗಳು, ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಬಗ್ಗೆ ಯಶ್ ಹೇಳಿರುವ ಮಾತುಗಳು ಇಲ್ಲಿವೆ.
1. ಸಾಹಸದಿಂದ ಕೂಡಿರುವ ಗ್ಯಾಂಗ್‌ಸ್ಟರ್ ಕತೆಗಳನ್ನು ಪುರುಷ ನಿರ್ದೇಶಕರು ಮಾತ್ರ ಮಾಡುತ್ತಾರೆ ಎಂಬುದು ಭಾರತೀಯ ಚಿತ್ರರಂಗದಲ್ಲಿರುವ ಅಭಿಪ್ರಾಯ. ‘ಟಾಕ್ಸಿಕ್’ ಚಿತ್ರದ ಮೂಲಕ ಈ ಅಭಿಪ್ರಾಯವನ್ನು ನಿರ್ದೇಶಕಿ ಗೀತು ಮೋಹನ್ ದಾಸ್ ಸುಳ್ಳು ಮಾಡಿದ್ದಾರೆ. ಮಹಿಳಾ ನಿರ್ದೇಶಕಿಯ ದೃಷ್ಟಿಯಲ್ಲಿ ದೊಡ್ಡ ಮಟ್ಟದ ಗ್ಯಾಂಗ್‌ಸ್ಟರ್ ಕತೆಯನ್ನು ನೋಡುವುದು ಹೊಸತು, ವಿಶಿಷ್ಟವೂ ಹೌದು.
2. ಚಿತ್ರದ ಬೋಲ್ಡ್ ಸೀನ್‌ಗಳ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಗೀತು ಮೋಹನ್ ದಾಸ್ ಅವರಿಗೆ ತಮ್ಮ ಕತೆಯ ಬಗ್ಗೆ ತುಂಬಾ ನಂಬಿಕೆ ಇದೆ. ಪ್ರೇಮ, ಬಯಕೆ ಅಥವಾ ಶೃಂಗಾರವನ್ನು ಒಬ್ಬ ಮಹಿಳೆ ತೆರೆಯ ಮೇಲೆ ಎಷ್ಟು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಪ್ರೆಸೆಂಟ್ ಮಾಡಬಹುದು ಎಂಬುದನ್ನು ಚಿತ್ರದ ಶೂಟಿಂಗ್ ಸಮಯದಲ್ಲಿ ನಾನು ಅರಿತುಕೊಂಡೆ. ಪುರುಷ ನಿರ್ದೇಶಕರಿಗಿಂತಲೂ ಮಹಿಳೆಯೊಬ್ಬಳು ಆ ರೀತಿಯ ಭಾವನೆ, ದೃಶ್ಯಗಳನ್ನು ಕಟ್ಟಿಕೊಡುವ ರೀತಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ.
3. ಗೀತು ಅವರು ಒಬ್ಬ ಅದ್ಭುತ ಲೇಖಕಿ ಕೂಡ. ನಾನು ಅವರಿಂದ ಬಹಳಷ್ಟು ಕಲಿಯುತ್ತಿದ್ದೇನೆ. ಈಗ ‘ಟಾಕ್ಸಿಕ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಹಂತದಲ್ಲಿದೆ.