ರಾಮಾಯಣ ಮೊದಲ ಭಾಗದಲ್ಲಿ ರಣಬೀರ್‌ ಕಪೂರ್‌ ಜೊತೆ ನಟಿಸಿಲ್ಲ: ಯಶ್

Published : Apr 16, 2026, 01:02 PM IST
yash-as-ravana-role-in-ramayana-film

ಸಾರಾಂಶ

  ‘ಟಾಕ್ಸಿಕ್‌’, ‘ರಾಮಾಯಣ 1’ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ ಯಶ್‌ ಸಿನಿಮಾದ ಬಗ್ಗೆ ಒಂದೊಂದೇ ಗುಟ್ಟು ಬಿಟ್ಟುಕೊಡಲು ಶುರು ಮಾಡಿದ್ದಾರೆ. ಅವರು ಅಮೆರಿಕಾದ ಲಾಸ್‌ ವೇಗಾಸ್‌ನ ಸಿನಿಮಾಕಾನ್‌ 2026ನಲ್ಲಿ ಕಾಣಿಸಿಕೊಂಡು, ಅಲ್ಲಿ ನಡೆದ ಸರಣಿ ಸಂದರ್ಶನಗಳಲ್ಲಿ ಹೇಳಿದ ಪ್ರಮುಖ 6 ಅಂಶಗಳು

 ಸಿನಿವಾರ್ತೆ

ತನ್ನ ನಟನೆ, ನಿರ್ಮಾಣದ ‘ಟಾಕ್ಸಿಕ್‌’, ‘ರಾಮಾಯಣ 1’ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ ಯಶ್‌ ಸಿನಿಮಾದ ಬಗ್ಗೆ ಒಂದೊಂದೇ ಗುಟ್ಟು ಬಿಟ್ಟುಕೊಡಲು ಶುರು ಮಾಡಿದ್ದಾರೆ. ಅವರು ಅಮೆರಿಕಾದ ಲಾಸ್‌ ವೇಗಾಸ್‌ನ ಸಿನಿಮಾಕಾನ್‌ 2026ನಲ್ಲಿ ಕಾಣಿಸಿಕೊಂಡು, ಅಲ್ಲಿ ನಡೆದ ಸರಣಿ ಸಂದರ್ಶನಗಳಲ್ಲಿ ಹೇಳಿದ ಪ್ರಮುಖ 6 ಅಂಶಗಳು ಇಲ್ಲಿವೆ.

1. ರಾಮಾಯಣ ಮೊದಲ ಭಾಗದಲ್ಲಿ ರಾಮನ ಪಾತ್ರಧಾರಿ ರಣಬೀರ್‌ ಕಪೂರ್‌ ಜೊತೆ ಮುಖಾಮುಖಿಯಾಗಿ ನಟಿಸಿಲ್ಲ.

2. ಒಬ್ಬ ನಟನಾಗಿ ನನಗೆ ಪಾತ್ರ ನಿರ್ವಹಿಸುವಾಗ ಆತಂಕ ಇರೋದಿಲ್ಲ. ಆದರೆ ರಾವಣನ ಪಾತ್ರ ಮಾಡಬೇಕು ಅಂದಾಗ ಕೊಂಚ ಬೆದರಿದೆ. ಭಾರತದ ಮೂಲೆ ಮೂಲೆಯ ಜನರಿಗೂ ರಾವಣ ಗೊತ್ತು. ಎಳೆಯ ಮಕ್ಕಳಿಗೆ ಕಥೆ ಹೇಳಲು ಶುರು ಮಾಡುವುದೇ ರಾಮಾಯಣದಿಂದ. ನೂರಾರು ಕಲಾಪ್ರಕಾರಗಳಲ್ಲಿ ಸಾವಿರಾರು ಬಗೆಯಲ್ಲಿ ರಾವಣನನ್ನು ತೋರಿಸಲಾಗಿದೆ. ಇಂಥಾ ದೈತ್ಯನನ್ನು ನನ್ನೊಳಗೆ ಆವಾಹಿಸಿಕೊಳ್ಳಬೇಕು ಅಂದಾಗ ಅದು ಬಹುದೊಡ್ಡ ಜವಾಬ್ದಾರಿ.

3. ಪ್ರತೀ ಪಾತ್ರಕ್ಕೂ ಅದರದೇ ದೃಷ್ಟಿಕೋನ ಇರುತ್ತದೆ. ಅಹಂಕಾರ ಮತ್ತು ಆತ್ಮವಿಶ್ವಾಸದ ನಡುವೆ ಇರುವುದು ಬಲು ತೆಳುವಾದ ಗೆರೆ. ಆ ಗೆರೆ ದಾಟುವ ಪಾತ್ರವಾಗಿ ನನಗೆ ರಾವಣ ಕಾಣುತ್ತಾನೆ. ಆತನ ಪಾತ್ರ ನಿರ್ವಹಿಸುವಾಗ ಸಣ್ಣ ಪ್ರಮಾದವಾದರೂ ಬಹುದೊಡ್ಡ ತಪ್ಪಾಗುತ್ತದೆ. ಬಹಳ ಎಚ್ಚರಿಕೆಯಿಂದ ಈ ಪಾತ್ರ ನಿರ್ವಹಿಸಿದ್ದೇನೆ.

4. ರಾಮಾಯಣ ಭಾರತದ ಸಿನಿಮಾ ಅಷ್ಟೇ ಅಲ್ಲ. ಇದು ಭಾರತದಿಂದ ಬರುತ್ತಿರುವ ಜಗತ್ತಿನ ಸಿನಿಮಾ. ಭಾರತೀಯ ಸಿನಿಮಾಗಳು ಜಾಗತಿಕ ಸಿನಿಮಾರಂಗದಲ್ಲಿ ನೆಲೆಯೂರಲು ಟಾಕ್ಸಿಕ್‌ ಹಾಗೂ ರಾಮಾಯಣಗಳು ಸೇತುವೆಯಾಗಲಿವೆ.

5. ಟಾಕ್ಸಿಕ್‌ ಒಂದು ಗ್ಯಾಂಗ್‌ಸ್ಟರ್‌ ಸಿನಿಮಾವೇ. ಆದರೆ ಇದು ಟಿಪಿಕಲ್‌ ಗ್ಯಾಂಗ್‌ಸ್ಟರ್‌ ಸಿನಿಮಾಕ್ಕಿಂತ ಸಂಪೂರ್ಣ ಭಿನ್ನ. ಸಮಾಜದ ದೃಷ್ಟಿಯಲ್ಲಿ ವಿಲನ್‌ನಂತಿರುವ ವ್ಯಕ್ತಿಯ ಬದುಕಿನ ಕರಾಳ ಮುಖವನ್ನು ಇದು ಭಾವನಾತ್ಮಕವಾಗಿ, ಆಳವಾಗಿ, ತೀವ್ರವಾಗಿ ಹಾಗೇ ಮಾನವೀಯ ದೃಷ್ಟಿಕೋನದಲ್ಲಿ ಹೊಸ ಬಗೆಯಲ್ಲಿ ಪ್ರಸ್ತುತಪಡಿಸುತ್ತದೆ.

6. ಮನಸ್ಸಿನ ಸೂಕ್ಷ್ಮವನ್ನು ಲೇಯರ್‌ಗಳಾಗಿ ವಿವರಿಸುವ ಕಾರಣ ಟಾಕ್ಸಿಕ್‌ ಚಿತ್ರವನ್ನು ಸೈಕಲಾಜಿಕಲ್‌ ಥ್ರಿಲ್ಲರ್‌ ಥರದಲ್ಲೂ ನೋಡಬಹುದು. ಟಾಕ್ಸಿಕ್‌ನಲ್ಲಿ ಒರಿಜಿನಾಲಿಟಿ ಇದೆ. ಸಿದ್ಧ ಮಾದರಿಯ ಜನಪ್ರಿಯ ಸ್ಟೋರಿ ಟೆಲ್ಲಿಂಗ್‌ ತಂತ್ರಗಳನ್ನು ಮೀರಿದ್ದೇವೆ. ಇದು ಏಕಕಾಲಕ್ಕೆ ವಾಸ್ತವವೂ, ಕಲ್ಪನೆಯೂ ಎರಡೂ ಹೌದು. ದೊಡ್ಡವರ ಫೇರಿಟೇಲ್‌ ಅಂತ ನಾವು ಹೇಳಿದ್ದಕ್ಕೂ ಬಲವಾದ ಕಾರಣವಿದೆ.

 

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸಚ್ಚಿದಾನಂದ ಅಭಿಮಾನಿಗಳಿಂದ ಸಂಭ್ರಮದ ಹುಟ್ಟುಹಬ್ಬ ಆಚರಣೆ
‘ಜನನಾಯಗನ್’ ಲೀಕ್‌ : ಸ್ಟುಡಿಯೋದಿಂದ ರೀಲ್‌ ಕದ್ದಿದ್ದ ಆರೋಪಿ ಬಂಧನ