;Resize=(412,232))
ದೀಪಾವಳಿ ಹಬ್ಬದ ಅಂಗವಾಗಿ ಅದ್ದೂರಿಯಾಗಿ ತೆರೆಗೆ ಬಂದಿದ್ದ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಚಿತ್ರವು 800 ಕೋಟಿ ಗಳಿಕೆ ಮಾಡುವ ಮೂಲಕ ದಾಖಲೆ ಮಾಡಿದೆ. ಆರನೇ ದಿನ ದೇಶಾದ್ಯಂತ ಒಟ್ಟು 24,344 ಶೋಗಳ ಮೂಲಕ ಸುಮಾರು 526.50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ವಿಶ್ವವ್ಯಾಪಿಯಾಗಿ 823.50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಸದ್ಯದಲ್ಲೇ 1000 ಕೋಟಿ ಗುರಿ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಭಾರತದಲ್ಲಿ ಭಾಷವಾರು ಆವೃತ್ತಿಗಳ ಪೈಕಿ ಕನ್ನಡ 7.75, ಹಿಂದಿ 76 ಕೋಟಿ, ಕನ್ನಡದಲ್ಲಿ 7.75 ಕೋಟಿ, ತೆಲುಗು 4 ಕೋಟಿ, ತಮಿಳು 3.60 ಕೋಟಿ ಹಾಗೂ ಮಲಯಾಳಂನಲ್ಲಿ 2.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಸಿನಿಮಾ ಬಿಡುಗಡೆಯಾದ ಆರನೇ ದಿನದಂದು ಪ್ರತಿ ಶೋಗೆ ಸರಾಸರಿ 38,726 ಸಾವಿರ ರು. ಕಲೆಕ್ಷನ್ ಆಗುತ್ತಿದ್ದು, ಶೇ. 55.3 ರಷ್ಟು ಆಕ್ಯುಪೆನ್ಸಿ ಪಡೆಯುವ ಮೂಲಕ ದಾಖಲೆ ಮಾಡಿದೆ.
ಇನ್ನು ವಿದೇಶಗಳಲ್ಲೂ ‘ರಾಮಾಯಣ’ ಅಬ್ಬರ ಜೋರಾಗಿದ್ದು, ಮಂಗಳವಾರ ಒಂದೇ ದಿನ 35 ಕೋಟಿ ವಸೂಲಿ ಮಾಡಿದ್ದು, ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಇಲ್ಲಿವರೆಗೂ 297 ಕೋಟಿಗೆ ಏರಿದೆ. ದೇಶ- ವಿದೇಶಗಳಲ್ಲಿ ‘ರಾಮಾಯಣ’ ಚಿತ್ರವು 823.50 ಕೋಟಿ ಕಲೆಕ್ಷನ್ ಮಾಡಿದೆ.
ಈ ನಡುವೆ ಮುಂಬೈ, ಪುಣೆ, ಅಹಮದಾಬಾದ್ ಸೇರಿದಂತೆ ಹಲವು ಕಡೆ ಹಬ್ಬದ ಹಿನ್ನೆಲೆಯಲ್ಲಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ನಗರಗಳಲ್ಲೂ ಇದೇ ರೀತಿ ಶೋಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಬ್ಬದ ರಜೆಗಳು ಇರುವುದರಿಂದ ಇದೇ ರೀತಿ ಗಳಿಕೆ ಮುಂದುವರಿದ ಸದ್ಯದಲ್ಲೇ ಯಶ್ ‘ರಾಮಾಯಣ’ 1000 ಕೋಟಿ ಗಳಿಕೆಯ ಗುರಿ ಮುಟ್ಟಲಿದೆ.