ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು

KannadaprabhaNewsNetwork |  
Published : Apr 22, 2026, 03:15 AM IST
Pappu Yadav

ಸಾರಾಂಶ

‘ಶೇ.90ರಷ್ಟು ಮಹಿಳಾ ನಾಯಕಿಯರು ಪುರುಷ ರಾಜಕಾರಣಿಯ ಕೋಣೆಯನ್ನು ಪ್ರವೇಶಿಸದೆ ರಾಜಕಾರಣದಲ್ಲಿ ಯಶಸ್ವಿಯಾಗಲ್ಲ’ ಎಂದು ಬಿಹಾರದ ಪೂರ್ಣಿಯಾ ಸಂಸದ ಪಪ್ಪು ಯಾದವ್‌ ಮಹಿಳಾ ರಾಜಕಾರಣಿಗಳ ಬಗ್ಗೆ ಕೀಳು ಹೇಳಿಕೆ ನೀಡಿದ್ದಾರೆ.

ಪಟನಾ: ‘ಶೇ.90ರಷ್ಟು ಮಹಿಳಾ ನಾಯಕಿಯರು ಪುರುಷ ರಾಜಕಾರಣಿಯ ಕೋಣೆಯನ್ನು ಪ್ರವೇಶಿಸದೆ ರಾಜಕಾರಣದಲ್ಲಿ ಯಶಸ್ವಿಯಾಗಲ್ಲ’ ಎಂದು ಬಿಹಾರದ ಪೂರ್ಣಿಯಾ ಸಂಸದ ಪಪ್ಪು ಯಾದವ್‌ ಮಹಿಳಾ ರಾಜಕಾರಣಿಗಳ ಬಗ್ಗೆ ಕೀಳು ಹೇಳಿಕೆ ನೀಡಿದ್ದಾರೆ.

ಮಹಿಳೆಯರು ರಾಜಕಾರಣಕ್ಕೆ ಬರಬೇಕಾದರೆ ರಾಜಿಯಾಗಬೇಕು

ಮಹಿಳೆಯರಿಗೆ ಸಂಸತ್ತಲ್ಲಿ ಶೇ.33 ಮೀಸಲು ನೀಡುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ‘ಮಹಿಳೆಯರು ರಾಜಕಾರಣಕ್ಕೆ ಬರಬೇಕಾದರೆ ರಾಜಿಯಾಗಬೇಕು. ರಾಜಕಾರಣಿಗಳ ಕೋಣೆಗೆ ಹೋಗದೆ, ಶೇ.90ರಷ್ಟು ಮಹಿಳೆಯರು ರಾಜಕೀಯ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳ ದೈನಂದಿನ ಸಿಸಿಟಿವಿ ದೃಶ್ಯಗಳಲ್ಲಿ ಇದನ್ನು ಕಾಣಬಹುದು. ಇದು ಒಂದು ಸಂಸ್ಕೃತಿಯಾಗಿ ಮಾರ್ಪಟ್ಟಿದೆ’ ಎಂದರು.

ಶೇ. 75 ರಷ್ಟು ನಾಯಕರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ

ಶೇ. 75 ರಷ್ಟು ನಾಯಕರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದು ನಾನು ಸದನದಲ್ಲಿ ಹೇಳಿದ್ದೆ. ಎಲ್ಲರ ಮೊಬೈಲ್ ಪರಿಶೀಲಿಸಿ’ ಎಂದೂ ಪಪ್ಪು ಸವಾಲೆಸೆದರು.

ಇದಕ್ಕೆ ಬಿಜೆಪಿ ವಕ್ತಾರ ಶೆಹಜಾದ್‌ ಪೂನವಾಲಾ ಕಿಡಿಕಾರಿದ್ದು, ‘ದೇಶ ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿರುವಾಗ ಕಾಂಗ್ರೆಸ್‌ ಬೆಂಬಲಿತ ಸಂಸದರು ಇಂತಹ ಹೇಳಿಕೆ ನೀಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಪಪ್ಪು ಇಂಥ ಹೇಳಿಕೆಗಳಿಂದ ಈ ಹಿಂದೆಯೂ ಸುದ್ದಿ ಆಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಮೋದಿ ಉಗ್ರವಾದಿ : ಖರ್ಗೆ,ವಿವಾದವಾದ ಬಳಿಕ ತೇಪೆ