ಜಿಮಿನಿ ಕೈಲಿ ಸೀರೆ ಉಡಿಸಿಕೊಂಡೀರಿ, ಹುಷಾರ್!ತಮ್ಮದೊಂದು ಫೋಟೋ ಕೊಟ್ಟರೆ ಅದಕ್ಕೆ ಚಂದದ ಸೀರೆ ಉಡಿಸಿ, ಆಭರಣ ತೊಡಿಸಿ, ಹೂ ಮುಡಿಸಿ ಸಿಂಗರಿಸುವ ಜಿಮಿನಿ ಎಐ ಅನ್ನು ಬಳಸದ ಸ್ತ್ರೀಯರೇ ಇಲ್ಲ ಎಂಬಂತಾಗಿರುವ ಹೊತ್ತಿನಲ್ಲಿ, ಹಾಗೆ ಮಾಡುವುದು ಅಪಾಯಕಾರಿಯಾದೀತು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ತಾವು ರೆಟ್ರೋ ಲುಕ್ನಲ್ಲಿ ನೋಡಬಯಸುವ ಹುಡುಗರಿಗೂ ಇದು ಅನ್ವಯಿಸಲಿದೆ.