ಇರಾನ್, ಬಹ್ರೈನ್‌ನಲ್ಲಿರುವ ನೀರು ಶುದ್ಧೀಕರಣ ಘಟಕದ ಮೇಲೆ ದಾಳಿದುಬೈ: ಸೇನಾ ನೆಲೆ, ರಾಯಭಾರ ಕಚೇರಿ, ತೈಲ ಡಿಪೋ, ಸರ್ಕಾರಿ ಕಚೇರಿಗಳ ಮೇಲಿನ ದಾಳಿಯ ಬಳಿಕ ಮಧ್ಯಪ್ರಾಚ್ಯದ ಯುದ್ಧವೀಗ ಜಲಯುದ್ಧವಾಗಿ ಮಾರ್ಪಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಪೆಟ್ರೋಲ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ ನೀರಿನ ಘಟಕಗಳ ಮೇಲೆ ಇರಾನ್- ಅಮೆರಿಕ ಪರಸ್ಪರ ದಾಳಿ ನಡೆಸಿದ್ದು ಭಾರೀ ಆತಂಕ ಹುಟ್ಟುಹಾಕಿದೆ.
ಭಾನುವಾರ ಬಹ್ರೈನ್‌ನಲ್ಲಿರುವ ನೀರು ಶುದ್ದೀಕರಣ ಘಟಕ ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ. ಮತ್ತೊಂದೆಡೆ ಖೇಶಮ್ ದ್ವೀಪದಲ್ಲಿರುವ ನೀರು ಶುದ್ಧೀಕರಣ ಘಟಕ ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿದೆ.ಮರುಭೂಮಿ ನಾಡಲ್ಲಿ ಸಮುದ್ರದ ನೀರನ್ನೇ ವಿಶೇಷ ಘಟಕಗಳ ಮೂಲಕ ಶುದ್ಧೀಕರಿಸಿ ಜನರಿಗೆ, ಕೈಗಾರಿಕೆಗಳಿಗೆ ಪೂರೈಸಲಾಗುತ್ತದೆ. ಆದರೆ ಇವುಗಳ ಮೇಲೇ ಈಗ ದಾಳಿ ನಡೆಸುತ್ತಿರುವುದು ಶುದ್ಧ ಕುಡಿಯುವ ನೀರಿನ ಹಕ್ಕನ್ನೇ ಮೊಟಕುಗೊಳಿಸಿದಂತೆ ಆಗಲಿದೆ.
==ದುಬೈನಲ್ಲಿ 8 ದಿನ ಅಗತ್ಯದಷ್ಟು ಮಾತ್ರ ಆಹಾರ ದಾಸ್ತಾನು
ಯುದ್ಧ ಮುಂದುವರೆದರೆ ತಾಜಾ ಆಹಾರಗಳ ಕೊರತೆ ಭೀತಿ
- ಆಹಾರಕ್ಕೆ ವಿದೇಶಗಳನ್ನೇ ಅವಲಂಬಿಸಿರುವ ಕೊಲ್ಲಿ ದೇಶ
ನವದೆಹಲಿ: ಅಮೆರಿಕ, ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದ ಕೊಲ್ಲಿ ರಾಷ್ಟ್ರಗಳು ಬಲಿಪಶುಗಳಾಗುತ್ತಿದ್ದು, ದುಬೈನಲ್ಲಿ ತಾಜಾ ಆಹಾರಕ್ಕೂ ಸಂಚಕಾರ ಬಂದೊದಗಿದೆ. ಇಲ್ಲಿ ಕೇವಲ 8 ದಿನಗಳಿಗೆ ಆಗುವಷ್ಟು ಮಾತ್ರವೇ ಆಹಾರ ದಾಸ್ತಾನುಗಳಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.ದುಬೈನಲ್ಲಿ ಯಾವುದೇ ರೀತಿ ಆಹಾರಗಳನ್ನು ಬೆಳೆಯಲ್ಲ. ಹಾಗಾಗಿ ಯುಎಇ, ಸೌದಿ ಅರೇಬಿಯಾ ಹಾಗೂ ಹೆಚ್ಚಿನ ಅರಬ್ ರಾಷ್ಟ್ರಗಳು ದೈನಂದಿನ ಅಗತ್ಯಗಳಿಗೆ ಬೇಕಾದ ಬಹುತೇಕ ಎಲ್ಲಾ ಸಾಮಗ್ರಿಗಳಿಗೆ ವಿದೇಶಗಳನ್ನು ಅವಲಂಬಿಸಿವೆ. ಆಹಾರ ಮತ್ತು ಪಾನೀಯಗಳಲ್ಲಿ ಸುಮಾರು ಶೇ.80-90ರಷ್ಟನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ಇನ್ನು ಗಲ್ಫ್ ದೇಶಗಳಿಗೆ ಪೂರೈಕೆಯಾಗುವ ಆಹಾರದ ಶೇ.70ರಷ್ಟು ಹಾರ್ಮೋಜ್ ಜಲಸಂಧಿ ಮೂಲಕವೇ ಸರಬರಾಜಾಗುತ್ತಿತ್ತು.
ಸಂಘರ್ಷದಿಂದಾಗಿ ಹಾರ್ಮೋಜ್ ಜಲಸಂಧಿ ಸ್ಥಬ್ಧವಾಗಿರುವುದು ವ್ಯಾಪಾರಕ್ಕೆ ಅಡ್ಡಿಯಾಗಿದೆ. ಈ ಪರಿಸ್ಥಿತಿ ಸುಧಾರಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದೆಗೆಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ವಾಯು ಸರಕು ಸಾಮರ್ಥ್ಯವು ಶೇ.22ರಷ್ಟು ಕಡಿಮೆಯಾಗಿದೆ. ಇದು ಕೂಡ ಆಹಾರ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಹಣ್ಣು ತರಕಾರಿ, ಡೈರಿ ಉತ್ಪನ್ನಗಳ ಕೊರತೆಗೆ ಕಾರಣವಾಗಿದೆ,ಮತ್ತೊಂದೆಡೆ ತಜ್ಞರು ಹೇಳುವ ಪ್ರಕಾರ ತಾಜಾ ಉತ್ಪನ್ನಗಳ ದಾಸ್ತಾನು ಕಡಿಮೆ ಆಗಿದೆ ನಿಜ. ಆದರೆ ಧಾನ್ಯ, ಶೀತಲೀಕೃತ ಆಹಾರ ಸಂಗ್ರಹ ಗಣನೀಯ ಆಗಿರುವುದರಿಂದ ಜನರು ಆತಂಕ ಪಡಬೇಕಾಗಿಲ್ಲ.