ವಿಶ್ವದ ಪ್ರವಾಸೋದ್ಯಮದಲ್ಲಿ ಕೃಷಿ, ಧಾರ್ಮಿಕ, ಆರೋಗ್ಯ, ಪರಿಸರ, ಕಡಲ ಪ್ರವಾಸೋದ್ಯಮ ಹೀಗೆ ಹಲವು ಪ್ರವಾಸೋದ್ಯಮ ಆಯ್ಕೆಗಳಿವೆ. ಆದರೆ, ಗಡಿಯನ್ನೇ ಪ್ರವಾಸದ ರೋಚಕ ಅನುಭವವನ್ನಾಗಿ ಉಣಬಡಿಸುವ ರಮಣೀಯ ಹಾಗೂ ರೋಮಾಂಚನ ಪ್ರವಾಸಿ ತಾಣಗಳು ವಿರಳ. ಅಂತಹ ಅಪರೂಪದ ಗಡಿ ಪ್ರವಾಸೋದ್ಯಮ ಸ್ಥಳವೇ ಸಿಕ್ಕಿಂನ ‘ನಾಥೂ ಲಾ ಪಾಸ್’.