2025ರಲ್ಲಿ ಭಾರತದ ಟೆಲಿಕಾಮ್ ಕ್ಷೇತ್ರವು ಬದಲಾಗಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿಗೆ ಏರ್‌ಟೆಲ್ ಇದೆ. ಈ ಕುರಿತ ವರದಿ ಇಲ್ಲಿದೆ.
ಕನ್ನಡಪ್ರಭವಾರ್ತೆ ಬೆಂಗಳೂರು
ದೂರಸಂಪರ್ಕ ಉದ್ಯಮಕ್ಕೆ 2025 ಬಹಳ ವಿಶೇಷ ವರ್ಷ. ಯಾಕೆಂದರೆ ಈ ವರ್ಷ ದೂರಸಂಪರ್ಕ ಜಾಲದ ಮೂಲ ಅರ್ಥವೇ ಬದಲಾದ ವರ್ಷ. ಪ್ರಸ್ತುತ ದೂರಸಂಪರ್ಕವನ್ನು ಕೇವಲ ವೇಗ ಮತ್ತು ಕವರೇಜ್‌ನಲ್ಲಿ ಮಾತ್ರ ಅಳೆಯುವುದು ನಿಂತು ಹೋಗಿದೆ. ಬದಲಿಗೆ ಅಸ್ಮಿತೆ, ಬುದ್ಧಿಮತ್ತೆ, ತಕ್ಷಣದ ಲಭ್ಯತೆ ಮತ್ತು ನಂಬಿಕೆ ಮುಂಚೂಣಿಗೆ ಬಂದಿದೆ. ಕಾಲರ್ ನೇಮ್ ಪ್ರೆಸೆಂಟೇಶನ್ (ಸಿಎನ್ಎಪಿ) ಸೌಲಭ್ಯವು ಹೊಸ ದಾರಿ ಹಾಕಿಕೊಟ್ಟಿದೆ. ಸಿಮ್ ಕಾರ್ಡ್‌ಗಳು ಕ್ವಿಕ್ ಕಾಮರ್ಸ್ ಮೂಲಕ ನಿಮಿಷಗಳಲ್ಲಿ ತಲುಪಲಾರಂಭಿಸಿವೆ. ವಿಶೇಷವಾಗಿ ಟವರ್‌ಗಳು ಮತ್ತು ಭೂಪ್ರದೇಶದ ಮಿತಿಗಳನ್ನು ಮೀರಿ ಎಲ್ಲಾ ಕಡೆ ಸಂಪರ್ಕ ದೊರಕುವಂತಾಗಿದೆ.ಲೋ ಅರ್ಥ್ ಆರ್ಬಿಟ್ (ಎಲ್ಇಓ) ಸ್ಯಾಟಲೈಟ್ ಇಂಟರ್ನೆಟ್‌ನ ಆಗಮನವು ಭಾರತೀಯ ದೂರಸಂಪರ್ಕ ಕ್ಷೇತ್ರಕ್ಕೆ ಸಂಪೂರ್ಣವಾಗಿ ಹೊಸತನವನ್ನು ತಂದುಕೊಟ್ಟಿದೆ. ಸ್ಟಾರ್‌ಲಿಂಕ್ ಕೂಡ ಭಾರತಕ್ಕೆ ಪ್ರವೇಶಿಸಲು ಸಿದ್ಧವಾಗುತ್ತಿರುವುದರೊಂದಿಗೆ, ಸಂಪೂರ್ಣ ಬಾಹ್ಯಾಕಾಶವು ದೇಶದ ದೂರಸಂಪರ್ಕ ಯೋಜನೆಯ ಭಾಗವಾದಂತಾಗುತ್ತಿದೆ. ದೂರಸಂಪರ್ಕ ಕ್ಷೇತ್ರವು ಇನ್ನು ಮುಂದೆ ಭೌಗೋಳಿಕ ಕಟ್ಟುಪಾಡುಗಳಿಗೆ ಒಳಗಾಗುವುದಿಲ್ಲ. ಬದಲಿಗೆ ಸಾಗರಗಳು, ಗ್ರಾಮೀಣ ಪ್ರದೇಶಗಳು ಮತ್ತು ಪ್ರಕೃತಿ ವಿಕೋಪದಿಂದ ಸಮಸ್ಯೆಗೊಳಗಾದ ಪ್ರದೇಶಗಳಲ್ಲಿಯೂ ದೊರಕಲಿದೆ ಮತ್ತು ಆ ಮೂಲಕ ನಿಜವಾದ ಸರ್ವವ್ಯಾಪಿ ಸಂಪರ್ಕ ದೊರೆಯಲಿದೆ.ಭಾರತದಲ್ಲಿ ಡಿಜಿಟಲ್ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಈ ಸಂದರ್ಭದಲ್ಲಿ ಸ್ಕ್ಯಾಮ್ ಕಾಲ್‌ಗಳು, ಸ್ಪೂಫಿಂಗ್, ಫಿಶಿಂಗ್ ಮತ್ತು ಹಣಕಾಸು ವಂಚನೆಗಳೂ ಜಾಸ್ತಿಯಾಗಿವೆ. ಇದಕ್ಕೆ ಪರಿಹಾರವಾಗಿ ಭಾರ್ತಿ ಏರ್‌ಟೆಲ್ ಭಾರತದಲ್ಲಿ ಮೊದಲ ಬಾರಿಗೆ ನೆಟ್ ವರ್ಕ್ ಎಟ್ಟದಲ್ಲಿ ಎಐ- ಚಾಲಿತ ಸ್ಕ್ಯಾಮ್ ಮತ್ತು ಸ್ಪ್ಯಾಮ್ ಪ್ರೊಟೆಕ್ಷನ್ ಸೌಲಭ್ಯವನ್ನು ಪರಿಚಯಿಸಿದೆ. ಈ ಮೂಲಕ ಆಪ್ ಗಳಲ್ಲಿ ಮಾತ್ರವೇ ಡಿಜಿಟಲ್ ಸುರಕ್ಷತೆ ಒದಗಿಸುತ್ತಿದ್ದರ ಬದಲಿಗೆ ನೇರವಾಗಿ ದೂರಸಂಪರ್ಕ ನೆಟ್ ವರ್ಕ್ ನಲ್ಲಿ ಸುರಕ್ಷತೆಯನ್ನು ಪರಿಚಯಿಸಿತು. ಸಿಎನ್ಎಪಿ ಮತ್ತು ಉತ್ತಮ ಸಿಮ್ ಸುರಕ್ಷತೆ ಮೂಲಕ ದೂರಸಂಪರ್ಕ ನೆಟ್ ವರ್ಕ್ ಗಳು ಬ್ಯಾಂಕಿಂಗ್, ಪೇಮೆಂಟ್ ಮತ್ತು ಆಡಳಿತ ವ್ಯವಸ್ಥೆಗಳನ್ನು ಬೆಂಬಲಿಸುವ ಮೂಲಕ ಭಾರತದ ಮೊದಲ ಡಿಜಿಟಲ್ ವಿಶ್ವಾಸಾರ್ಹ ಮೂಲಸೌಕರ್ಯವಾಗಿ ಕಾರ್ಯನಿರ್ವಹಿಸಲಾರಂಭಿಸಿದವು.2025ರಲ್ಲಿ ಕೃತಕ ಬುದ್ಧಿಮತ್ತೆಯು ಭಾರತದ ಅಂತಿಮ ಹಂತದ ಬಳಕೆದಾರರಿಗೂ ತಲುಪಿತು. ಪರ್ಪ್ಲೆಕ್ಸಿಟಿ ಮತ್ತು ಗೂಗಲ್ ನಂತಹ ಎಐ ಸೇವೆಗಳ ಸಂಯೋಜನೆಯು ದೂರಸಂಪರ್ಕ ವ್ಯವಸ್ಥೆಗಳಲ್ಲಿ ರಚನಾತ್ಮಕ ಬದಲಾವಣೆ ಉಂಟಾಯಿತು. ಹಾಗಾಗಿ ಮೊಬೈಲ್ ಪ್ಲಾನ್ ಗಳು ಈಗ ಕೇವಲ ಡೇಟಾ ಆಧರಿತವಾಗಿ ಮಾತ್ರವೇ ಉಳಿಯಲಿಲ್ಲ, ಬದಲಿಗೆ ಅವು ಎಐ ಸೌಲಭ್ಯಗಳನ್ನು ನೇರವಾಗಿ ಒದಗಿಸುತ್ತಿವೆ. ಈ ಪರಿವರ್ತನೆಯ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್ ತನ್ನ ವ್ಯವಸ್ಥೆಯಲ್ಲಿ ಪೂರ್ಣ-ಪ್ರಮಾಣದ ಎಐ ಸರ್ಚ್ ಎಂಜಿನ್ ಅನ್ನು ಎಂಬೆಡ್ ಮಾಡಿದ ಭಾರತದ ಮೊದಲ ಆಪರೇಟರ್ ಆಗಿ ಹೊರಹೊಮ್ಮಿದೆ. ಈ ದೂರಸಂಪರ್ಕ ಕ್ರಾಂತಿಯ ಜೊತೆಗೆ ಗ್ರಾಹಕರ ಮಟ್ಟದಲ್ಲಿ, ದೂರಸಂಪರ್ಕ ಮೂಲಸೌಕರ್ಯವೂ ಹೊಸ ಹಂತಕ್ಕೆ ಹೋಗಿದೆ. ವಿಶಾಖಪಟ್ಟಣದಲ್ಲಿ ಮೆಗಾ ಎಐ-ರೆಡಿ ಡೇಟಾ ಸೆಂಟರ್ ಕ್ಯಾಂಪಸ್ ಗಳ ಘೋಷಣೆಯಾಗಿದ್ದು, ಇದು ಭಾರತದ ಪೂರ್ವ ಭಾಗದ ಕರಾವಳಿಯನ್ನು ಭವಿಷ್ಯದ ಜಾಗತಿಕ ಕಂಪ್ಯೂಟ್ ಗೇಟ್‌ವೇ ಆಗಿ ರೂಪಿಸಲಿದೆ. ಜೊತೆಗೆ ಸ್ಮಾರ್ಟ್ ಮೀಟರ್‌ಗಳನ್ನು ವೇಗವಾಗಿ ಅಳವಡಿಸುತ್ತಿರುವುದರಿಂದ ಲಕ್ಷಾಂತರ ಮನೆಗಳನ್ನು ತಕ್ಷಣವೇ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆ ಅಡಿಯಲ್ಲಿ ತರುವುದಕ್ಕೆ ಸಾಧ್ಯವಾಗಲಿದೆ ಮತ್ತು ದೂರಸಂಪರ್ಕ ನೆಟ್ ವರ್ಕ್ ಗಳನ್ನು ಪವರ್ ಗ್ರಿಡ್‌ಗಳು, ನಗರ ಮೂಲಸೌಕರ್ಯ ಮತ್ತು ರಾಷ್ಟ್ರೀಯ ಆಟೋಮೇಶನ್ ವ್ಯವಸ್ಥೆಗಳೊಂದಿಗೆ ಬಿಗಿಯಾಗಿ ಜೋಡಿಸುವುದಕ್ಕೆ ಅನುಕೂಲವಾಗಲಿದೆ.ವರ್ಷಗಳ ಕಾಲ ನಡೆದ ಬೆಲೆ ಯುದ್ಧಗಳ ನಂತರ, 2025ರಲ್ಲಿ ಕ್ರಮಬದ್ಧ ಮಾನಿಟೈಸೇಷನ್, ಎ.ಪಿ.ಆರ್.ಯು ಬೆಳವಣಿಗೆ, ಸುಗಮ ನಗದು ಹರಿವು ಮತ್ತು ಕ್ಯಾಪೆಕ್ಸ್ ದಕ್ಷತೆಯು ತಂತ್ರಗಾರಿಕೆಯ ಆದ್ಯತೆಗಳಾಗಿ ಹೊರಹೊಮ್ಮಿದವು. ಈ ಬದಲಾವಣೆಯು ಎಐ, ಉಪಗ್ರಹ ಸಂಪರ್ಕ ಮತ್ತು ಹೈಪರ್‌ಸ್ಕೇಲ್ ಮೂಲಸೌಕರ್ಯದಲ್ಲಿನ ಹೂಡಿಕೆಗಳಿಗೆ ಆರ್ಥಿಕ ಅಡಿಪಾಯ ಹಾಕಿತು.ವರ್ಷದ ಅಂತ್ಯಕ್ಕೆ, 5ಜಿ ಕೂಡ ಶಾಂತವಾಗಿ ಅಭಿವೃದ್ಧಿ ಹೊಂದಿದೆ. ಈಗ ಸಂವಾದವು ವೇಗದಿಂದ ವಾಸ್ತವ ಜಗತ್ತಿನ ಬಳಕೆ ಕಡೆಗೆ ಬದಲಾಗಿದೆ. ಜೊತೆಗೆ ಫಿಕ್ಸ್ಡ್ ವೈರ್‌ಲೆಸ್ ಲಭ್ಯತೆ, ಖಾಸಗಿ ಎಂಟರ್‌ಪ್ರೈಸ್ ನೆಟ್ ವರ್ಕ್ ಗಳು, ಕೈಗಾರಿಕಾ ಆಟೋಮೇಶನ್, ಬಂದರುಗಳು, ಕಾರ್ಖಾನೆಗಳು ಮತ್ತು ಸ್ಮಾರ್ಟ್ ಕ್ಯಾಂಪಸ್‌ಗಳು ಇತ್ಯಾದಿ ಕುರಿತು ಚರ್ಚೆಗಳು ನಡೆಯುತ್ತಿವೆ. ದೂರಸಂಪರ್ಕವು ಇನ್ನು ಮುಂದೆ ಕೇವಲ ಜನರನ್ನು ಸಂಪರ್ಕಿಸುವ ಕೆಲಸ ಮಾತ್ರವೇ ಮಾಡುವುದಿಲ್ಲ, ಬದಲಿಗೆ ಅದು ಆರ್ಥಿಕತೆಯ ಕೈಗಾರಿಕಾ ನರವ್ಯವಸ್ಥೆಯಾಗಿ ಬದಲಾಗುತ್ತಿದೆ.2025ರಲ್ಲಿ ಭಾರತದ ದೂರಸಂಪರ್ಕ ವ್ಯವಸ್ಥೆಯು ಬುದ್ಧಿವಂತಗೊಂಡಿದ್ದು, 2026ರಲ್ಲಿ ಅದು ಸ್ವಾಯತ್ತವಾಗಿ ಕಾರ್ಯನಿರ್ವಹಿಸಲಾರಂಭಿಸಲಿದೆ. ಕೃತಕ ಬುದ್ಧಿಮತ್ತೆಯು ನೆಟ್ ವರ್ಕ್ ನ ಜೊತೆ ಹೊಂದಿಕೊಂಡು ಮಾನವ ಹಸ್ತಕ್ಷೇಪವಿಲ್ಲದೆ ಬೇಡಿಕೆಯನ್ನು ಮೊದಲೇ ಊಹಿಸುವ, ಟ್ರಾಫಿಕ್ ಅನ್ನು ಸುಲಲಿತಗೊಳಿಸುವ, ಸ್ಪೆಕ್ಟ್ರಮ್ ಅನ್ನು ಸುಗಮವಾಗಿ ಹಂಚುವ, ಮೋಸವು ಸಂಭವಿಸುವ ಮೊದಲೇ ಪತ್ತೆಹಚ್ಚುವ ಮತ್ತು ಡೇಟಾ ಸೆಂಟರ್‌ಗಳಾದ್ಯಂತ ಪವರ್ ಲೋಡ್‌ಗಳನ್ನು ಸಮತೋಲನ ಮಾಡುವ ವ್ಯವಸ್ಥೆಗಳನ್ನು ರೂಪಿಸಲಿದೆ. ನೆಟ್ ವರ್ಕ್ ಗಳು ಇನ್ನು ಕೇವಲ ಪ್ರತಿಕ್ರಿಯಿಸುವುದು ಮಾತ್ರವಲ್ಲ, ಅವು ಮೊದಲೇ ಊಹಿಸುತ್ತವೆ, ರಕ್ಷಣೆ ಒದಗಿಸುತ್ತವೆ ಮತ್ತು ಅತ್ಯುತ್ತಮ ಸೇವೆ ಒದಗಿಸುತ್ತವೆ.ಉಪಗ್ರಹ ಇಂಟರ್ನೆಟ್ ಅಳವಡಿಕೆಯು ಕಾರ್ಯಾಚರಣೆ ಹಂತಕ್ಕೆ ಬರಲಿದ್ದು, ದೂರ ಪ್ರದೇಶಗಳು, ಪ್ರಕೃತಿ ವಿಕೋಪ ನಡೆದ ಪ್ರದೇಶಗಳು, ಸಾಗರಗಳು ಮತ್ತು ಚಲಿಸುವ ವ್ಯವಸ್ಥೆಯಗಳಲ್ಲಿಯೂ ಹೈ-ಸ್ಪೀಡ್ ಸಂಪರ್ಕವನ್ನು ಒದಗಿಸುವುದು ಸಾಧ್ಯವಾಗಲಿದೆ. ನಗರ ಮಟ್ಟದಲ್ಲಿ, ಸ್ಮಾರ್ಟ್ ಮೀಟರ್‌ಗಳು, ಐಓಟಿ ಗ್ರಿಡ್ ಗಳು ಮತ್ತು ಮೆಷಿನ್ ಟು ಮೆಷಿನ್ ಸಂವಹನದಿಂದ ನಗರ ಮತ್ತು ಗ್ರಾಮೀಣ ವ್ಯವಸ್ಥೆಗಳನ್ನು ಡಿಜಿಟಲ್ ವ್ಯವಸ್ಥೆಗಳಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ ವಿದ್ಯುತ್, ಸಾರಿಗೆ, ನೀರು ಮತ್ತು ಸಾರ್ವಜನಿಕ ಸೇವೆಗಳು ವಾಸ್ತವ ಜಗತ್ತಿನ ಸ್ಥಿತಿಗಳಿಗೆ ತಕ್ಕಂತೆ ತಕ್ಷಣವೇ ಪ್ರತಿಕ್ರಿಯಿಸುತ್ತವೆ. ದೂರಸಂಪರ್ಕ ಕ್ಷೇತ್ರವು ಈ ಬದಲಾವಣೆಯ ಕೇಂದ್ರದಲ್ಲಿ ಕುಳಿತಿರುತ್ತದೆ.2026ರಲ್ಲಿ ಆಪರೇಟರ್‌ಗಳು ಗ್ರಾಹಕರನ್ನು ಹೆಚ್ಚಿಸುವುದು ಅಥವಾ ಬಳಕೆಯನ್ನು ಜಾಸ್ತಿ ಮಾಡುವುದರ ಕಡೆಗೆ ಗಮನ ಕೊಡುವುದು ಮಾತ್ರವಲ್ಲ. ಬದಲಿಗೆ ಬುದ್ಧಿಮತ್ತೆ ಹೆಚ್ಚಿಸುವುದು, ರಾಷ್ಟ್ರೀಯ ನಂಬಿಕೆಯನ್ನು ರಕ್ಷಿಸುವುದು ಮತ್ತು ಡೇಟಾ ಸಾರ್ವಭೌಮತ್ವವನ್ನು ಖಾತ್ರಿಪಡಿಸುವುದರತ್ತವೂ ಗಮನ ಹರಿಸಬೇಕಾಗುತ್ತದೆ. ಸ್ಪರ್ಧೆಯು ವೇಗದಿಂದ ಸಾರ್ವಭೌಮತ್ವಕ್ಕೆ, ಕವರೇಜ್‌ನಿಂದ ಕಂಪ್ಯೂಟ್‌ಗೆ ಮತ್ತು ನೆಟ್ ವರ್ಕ್ ಗಳಿಂದ ನ್ಯೂರಲ್ ಮೂಲಸೌಕರ್ಯಕ್ಕೆ ಬದಲಾಗುತ್ತಿದ್ದು, ಮುಂದಿನ ದಿನಗಳು ಬಹಳ ಮಹತ್ವದ್ದಾಗಿದೆ. ಈ ಬದಲಾವಣೆಯು ಸಂಪೂರ್ಣ ಗೋಚರಕ್ಕೆ ಬಂದ ಮೇಲೆ ಭಾರತೀಯ ದೂರಸಂಪರ್ಕ ಕ್ಷೇತ್ರವನ್ನು ಉದ್ಯಮ ಎಂದು ಹೇಳುವುದರ ಬದಲಿಗೆ ಅದು ಭಾರತದ ಡಿಜಿಟಲ್ ಆರ್ಥಿಕತೆಯ ಅಗೋಚರ ಆಪರೇಟಿಂಗ್ ಸಿಸ್ಟಮ್ ಆಗಿ ಕಾರ್ಯನಿರ್ವಹಿಸಲಿದೆ.