ಸೇನಾ ನೆಲೆ, ರಾಯಭಾರ ಕಚೇರಿ, ತೈಲ ಡಿಪೋ, ಸರ್ಕಾರಿ ಕಚೇರಿಗಳ ಮೇಲಿನ ದಾಳಿಯ ಬಳಿಕ ಮಧ್ಯಪ್ರಾಚ್ಯದ ಯುದ್ಧವೀಗ ಜಲಯುದ್ಧವಾಗಿ ಮಾರ್ಪಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಪೆಟ್ರೋಲ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ ನೀರಿನ ಘಟಕಗಳ ಮೇಲೆ ಇರಾನ್- ಅಮೆರಿಕ ಪರಸ್ಪರ ದಾಳಿ ನಡೆಸಿದ್ದು ಭಾರೀ ಆತಂಕ ಹುಟ್ಟುಹಾಕಿದೆ.
- ಕೋಟಿಗಟ್ಟಲೆ ಲೀಟರ್ ತೈಲ ಧಗಧಗ । ರಸ್ತೆ, ಚರಂಡಿಯಲ್ಲಿ ಹರಿದ ಆಯಿಲ್‌ಗೂ ಬೆಂಕಿ- ಮುಗಿಲೆತ್ತರಕ್ಕೆ ಜ್ವಾಲೆ, ಹೊಗೆ । ಮೋಡಕ್ಕೂ ಹಬ್ಬಿದ ಧೂಮ । ತೈಲಮಿಶ್ರಿತ ಕಪ್ಪು ಮಳೆ!- ಹಗಲಲ್ಲೂ ದಟ್ಟ ಕಾರ್ಮೋಡ ಕವಿದು ಆತಂಕದ ವಾತಾವರಣ । ಇರಾನ್‌ನಿಂದ ಪ್ರತಿದಾಳಿಕೊಲ್ಲಿ ದೇಶಗಳಲ್ಲಿಈಗ ಜಲಯುದ್ಧ!- ನೀರು ಶುದ್ಧೀಕರಣ ಘಟಕಗಳಿಗೂ ದಾಳಿ- ಕುಡಿಯುವ ನೀರಿಗೂ ತತ್ವಾರದ ಆತಂಕದುಬೈ: ಸೇನಾ ನೆಲೆ, ರಾಯಭಾರ ಕಚೇರಿ, ತೈಲ ಡಿಪೋ, ಸರ್ಕಾರಿ ಕಚೇರಿಗಳ ಮೇಲಿನ ದಾಳಿಯ ಬಳಿಕ ಮಧ್ಯಪ್ರಾಚ್ಯದ ಯುದ್ಧವೀಗ ಜಲಯುದ್ಧವಾಗಿ ಮಾರ್ಪಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಪೆಟ್ರೋಲ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ ನೀರಿನ ಘಟಕಗಳ ಮೇಲೆ ಇರಾನ್- ಅಮೆರಿಕ ಪರಸ್ಪರ ದಾಳಿ ನಡೆಸಿದ್ದು ಭಾರೀ ಆತಂಕ ಹುಟ್ಟುಹಾಕಿದೆ. ಬಹ್ರೇನ್‌ನ ನೀರು ಘಟಕ ಮೇಲೆ ಇರಾನ್, ಇರಾನ್‌ನ ನೀರು ಘಟಕದ ಮೇಲೆ ಅಮೆರಿಕ ದಾಳಿ ಮಾಡಿದೆ.ವಿವರ 7ಇಸ್ರೇಲ್‌ಗೆ 20000ಅಮೆರಿಕದ ಬಾಂಬ್‌ವಾಷಿಂಗ್ಟನ್: ಇರಾನ್ ಜತೆಗಿನ ಸಂಘರ್ಷ 3 ತಿಂಗಳಾದರೂ ನಡೆಯುತ್ತದೆ ಎಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಇದೀಗ ಇಸ್ರೇಲ್‌ಗೆ 6000 ಕೋಟಿ ರು. ಮೌಲ್ಯದ 20,000 ಬಾಂಬ್‌ಗಳನ್ನು ಇಸ್ರೇಲ್‌ಗೆ ರವಾನಿಸುವಂತೆ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ವಿವರ 7--ದುಬೈನಲ್ಲಿ 8 ದಿನಕ್ಕೆಆಗವಷ್ಟೇ ಆಹಾರ!ನವದೆಹಲಿ: ಅಮೆರಿಕ, ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದ ಕೊಲ್ಲಿ ರಾಷ್ಟ್ರಗಳು ಬಲಿಪಶುಗಳಾಗುತ್ತಿದ್ದು, ದುಬೈನಲ್ಲಿ ತಾಜಾ ಆಹಾರಕ್ಕೂ ಸಂಚಕಾರ ಬಂದೊದಗಿದೆ. ಇಲ್ಲಿ ಕೇವಲ 8 ದಿನಗಳಿಗೆ ಆಗುವಷ್ಟು ಮಾತ್ರವೇ ಆಹಾರ ದಾಸ್ತಾನುಗಳಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.ವಿವರ 7--ಸೌದಿ ಮೇಲೆ ಇರಾನ್‌ದಾಳಿ: ಭಾರತೀಯ ಬಲಿರಿಯಾದ್: ಸೌದಿ ಅರೇಬಿಯಾದ ಮೇಲೆ ಭಾನುವಾರ ಇರಾನ್ ನಡೆಸಿದ ವೈಮಾನಿಕ ದಾಳಿಯಲ್ಲಿ ಓರ್ವ ಭಾರತೀಯ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.ವಿವರ 7
--ಟೆಹ್ರಾನ್: 9 ದಿನಗಳಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧ ಶನಿವಾರ ಇರಾನ್‌ನಲ್ಲಿ ‘ಬೆಂಕಿಯ ನದಿ’ಯನ್ನೇ ಹರಿಸಿದೆ. ಇರಾನ್ ರಾಜಧಾನಿ ಟೆಹ್ರಾನ್‌ನ 5 ಬೃಹತ್ ತೈಲ ಸಂಗ್ರಹಾಗಾರ ಗುರಿಯಾಗಿಸಿ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯ ತೀವ್ರತೆಗೆ ತೈಲ ಡಿಪೋಗೆ ಬೆಂಕಿ ಹೊತ್ತಿಕೊಂಡು ಅದರ ಜ್ವಾಲೆ ಮುಗಿಲೆತ್ತರಕ್ಕೆ ಹಬ್ಬಿದೆ. ಭಾರೀ ಬೆಂಕಿಯಿಂದೆದ್ದ ಹೊಗೆ ಇಡೀ ನಗರವನ್ನು ಆವರಿಸಿಕೊಂಡಿದ್ದು, ಹಗಲಲಲ್ಲೇ ಕತ್ತಲು ಕವಿದ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಹೊಗೆ ಮೋಡಕ್ಕೆ ಸೇರಿ ಕಪ್ಪುಮಳೆಯಾಗಿದೆ.
ಮತ್ತೊಂದೆಡೆ ಡಿಪೋದಿಂದ ಹರಿದ ತೈಲ ನಗರದ ರಸ್ತೆ, ಒಳಚರಡಿ ತುಂಬೆಲ್ಲಾ ಹರಿದು ಅದಕ್ಕೂ ಬೆಂಕಿ ತಗುಲಿ ನಗರದ ಹೆದ್ದಾರಿಗಳೆಲ್ಲಾ ‘ಬೆಂಕಿಯ ನದಿ’ಯಂತೆ ಗೋಚರಿಸಿವೆ. ಇದು ಭೀಕರ ದೃಶ್ಯವನ್ನು ಸೃಷ್ಟಿಸಿದೆ. ತನ್ನ 5 ತೈಲ ಡಿಪೋಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್, ಇಸ್ರೇಲ್‌ನ ಅತಿದೊಡ್ಡ ತೈಲ ಸಂಸ್ಕರಣಾ ಘಟಕವಾದ ಹೈಫಾದಲ್ಲಿರುವ ಬಜ಼ನ್ ಗ್ರೂಪ್‌ನ ತೈಲಾಗಾರದ ಮೇಲೆ ದಾಳಿ ಮಾಡಿದೆ. ಜೊತೆಗೆ ಯುಎಇ, ಬಹ್ರೈನ್, ಕುವೈತ್ ಸೇರಿದಂತೆ ಕೊಲ್ಲಿ ದೇಶಗಳ ಮೇಲೆ ಭೀಕರ ಸ್ವರೂಪದ ಡ್ರೋನ್, ಕ್ಷಿಪಣಿ ದಾಳಿ ನಡೆ ನಡೆಸಿದೆ. ಅಲ್ಲದೆ ಇನ್ನೂ 6 ತಿಂಗಳವರೆಗೂ ತಾನು ಸುದೀರ್ಘ ಯುದ್ಧ ನಡೆಸಲು ರೆಡಿ ಎಂದು ಹೇಳುವ ಮೂಲಕ ಅಮೆರಿಕ, ಇಸ್ರೇಲ್‌ಗೆ ಕಠಿಣ ಸಂದೇಶ ರವಾನಿಸಿದೆ.ಡಿಪೋಗೆ ಬೆಂಕಿ:
ಕಳೆದ ಕೆಲ ದಿನಗಳಿಂದ ಇರಾನ್‌ನ ಸೇನಾ ನೆಲೆ, ಕ್ಷಿಪಣಿ ಉತ್ಪಾದನಾ ಕೇಂದ್ರ, ಅಣು ಘಟಕ, ವಿಮಾನ ನಿಲ್ದಾಣ ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಅಮೆರಿಕ - ಇಸ್ರೇಲ್ ಪಡೆಗಳು ಭಾನುವಾರ ಟೆಹ್ರಾನ್‌ನ ಹೊರವಲಯದಲ್ಲಿನ ಬೃಹತ್ ತೈಲ ಡಿಪೋಗಳ ಮೇಲೆ ಭೀಕರ ದಾಳಿ ನಡೆಸಿವೆ.ದಾಳಿಗೊಳಗಾದ ಸ್ಥಳದಲ್ಲಿನ ಶಹರಾನ್ ತೈಲ ಡಿಪೋ ಒಂದರಲ್ಲೇ 26 ಕೋಟಿ ಲೀ. ತೈಲ ತುಂಬಿದ್ದ 11 ಟ್ಯಾಂಕ್‌ಗಳಿದ್ದವು ಎನ್ನಲಾಗಿದೆ. ಇಂಥ 5 ಡಿಪೋಗಳ ಮೇಲೆ ದಾಳಿ ನಡೆದಿರುವ ಕಾರಣ ಭಾರೀ ಪ್ರಮಾಣದ ಇಂಧನ ಬೆಂಕಿಗಾಹುತಿಯಾಗಿರುವ ಅಂದಾಜಿದೆ. ಘಟನೆಯಲ್ಲಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.
ಈ ದಾಳಿಯನ್ನು ಇಸ್ರೇಲ್ ಸಮರ್ಥಿಸಿಕೊಂಡಿದ್ದು, ‘ಇರಾನ್ ಸೇನೆಯು ತೈಲ ಶೇಖರಿಸಿಟ್ಟ ಸ್ಥಳಗಳನ್ನು ಬಳಸಿಕೊಳ್ಳುತ್ತಿತ್ತು. ಆದ್ದರಿಂದಲೇ ಅವುಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದೇವೆ’ ಎಂದು ಹೇಳಿದೆ.ಕರಿ ನೀರ ಮಳೆ:
ಟೆಹ್ರಾನ್ ಮತ್ತು ಕರಜ್ ನಗರದಲ್ಲಿದ್ದ 5 ಸಂಗ್ರಹಾಗಾರಗಳ ಮೇಲಿನ ದಾಳಿಯಿಂದ ಉಂಟಾದ ಮಾಲಿನ್ಯದಿಂದಾಗಿ ಆ್ಯಸಿಡ್ ಮಳೆಯಾಗುವ ಆತಂಕವಿದ್ದು, ಜನರಿಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿತ್ತು. ನಿರೀಕ್ಷೆಯಂತೆ ಮಳೆಯಾಗಿದ್ದು, ಹೊಗೆಯು ಮಳೆನೀರಿನೊಂದಿಗೆ ಬೆರೆತು ಗ್ರೀಸ್ ಸುರಿದಂತೆ ಕಪ್ಪು ಹನಿಗಳು ಉದುರಿವೆ. ಈ ಬಗ್ಗೆ ಟೆಹ್ರಾನ್ ನಿವಾಸಿಯೊಬ್ಬರು ಮಾತನಾಡಿದ್ದು, ‘ಬಿಳಿ ಕಾರಿನ ಮೇಲೆ ಎಣ್ಣೆಯಂತದ ದ್ರವ ಬಿದ್ದಿದೆ’ ಎಂದು ಆತಂಕ ತೋಡಿಕೊಂಡಿದ್ದಾರೆ.--