ಜಾಲತಾಣದಲ್ಲಿ ‘ಆಪರೇಷನ್ ಸಿಂದೂರ’ಸಂಭ್ರಮಿಸಿದ ಭಾರತೀಯರು

KannadaprabhaNewsNetwork |  
Published : May 08, 2025, 12:34 AM ISTUpdated : May 08, 2025, 04:32 AM IST
ಸಂಭ್ರಮ  | Kannada Prabha

ಸಾರಾಂಶ

ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಭಾರತೀಯರು ಸಂಭ್ರಮಿಸಿದ್ದು, ಜಾಲತಾಣಗಳಲ್ಲಿ ದೇಶ ಭಕ್ತಿಯ ಸಂದೇಶಗಳು ತುಂಬಿ ಹೋಗಿದ್ದು, ನೆಟ್ಟಿಗರು ‘ಜೈ ಹಿಂದ್‌’, ‘ನಾರಿ ಶಕ್ತಿ’ ಎನ್ನುತ್ತಾ ಸೇನೆಯನ್ನು ಕೊಂಡಾಡುತ್ತಿದ್ದಾರೆ.

ನವೆದಹಲಿ: ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಭಾರತೀಯರು ಸಂಭ್ರಮಿಸಿದ್ದು, ಜಾಲತಾಣಗಳಲ್ಲಿ ದೇಶ ಭಕ್ತಿಯ ಸಂದೇಶಗಳು ತುಂಬಿ ಹೋಗಿದ್ದು, ನೆಟ್ಟಿಗರು ‘ಜೈ ಹಿಂದ್‌’, ‘ನಾರಿ ಶಕ್ತಿ’ ಎನ್ನುತ್ತಾ ಸೇನೆಯನ್ನು ಕೊಂಡಾಡುತ್ತಿದ್ದಾರೆ.

ಎಕ್ಸ್‌ನಲ್ಲಿ ‘ಆಪರೇಷನ್ ಸಿಂದೂರ’, ‘ಭಯೋತ್ಪಾದಕತೆ’, ‘ಕರ್ನಲ್ ಸೋಫಿಯಾ ಖುರೇಷಿ’, ‘ನಾರಿ ಶಕ್ತಿ’ ಹೆಸರಿನಲ್ಲಿ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್‌ ಸೃಷ್ಟಿಸಿವೆ. ‘ ಆಪರೇಷನ್ ಸಿಂಧೂರ ಎಂಬ ಹೆಸರು, ಇಬ್ಬರು ಮಹಿಳಾ ಅಧಿಕಾರಿಗಳ ಸುದ್ದಿಗೋಷ್ಠಿ ಉತ್ತಮ ವಿಷಯ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ‘ ನ್ಯಾಯ ನೆರವೇರಿದೆ ಜೈ ಹಿಂದ್‌’ ಎಂದು ಸಂಭ್ರಮಿಸಿದ್ದಾರೆ.

‘ಆಪರೇಷನ್ ಸಿಂಧೂರ ಭಾರತದ ವಜ್ರವಾಗಿತ್ತು. ನೆತ್ತಿಯ ನಿಖರತೆಯಿಂದ ಭಯೋತ್ಪಾದನೆಯ ಹೃದಯವನ್ನು ಹೊಡೆದುರುಳಿಸಿತು. ನಮ್ಮ ರಾಷ್ಟ್ರವನ್ನು ರಕ್ತಸ್ರಾವ ಮಾಡಲು ಧೈರ್ಯ ಮಾಡುವವರ ವಿರುದ್ಧ ದೊಡ್ಡ ಕೆಂಪು ರೇಖೆಯನ್ನು ಚಿತ್ರಿಸಿದೆ’ ಎಂದು ದಾಳಿ ಬಣ್ಣಿಸಿದ್ದಾರೆ.

‘ಇದು ಭಾರತೀಯ ಮಹಿಳೆಯರ ಶಕ್ತಿ ಮತ್ತು ತ್ಯಾಗಕ್ಕೆ ಗೌರವ’ ಎಂದು ಕೆಲವರು ವ್ಯಾಖ್ಯಾನಿಸಿದ್ದರೆ, ಇನ್ನು ಕೆಲವರು ‘ ಭಾರತೀಯ ಸೇನೆ ಮತ್ತು ಮೋದಿ ಸರ್ಕಾರದ ನಿಜವಾದ ಮಾಸ್ಟರ್‌ ಸ್ಟ್ರೋಕ್‌’ ಎಂದು ಕೊಂಡಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!