ಕರಾಚಿ ಅಮೆರಿಕ ದೂತಾವಾಸಕ್ಕೆ ಮುತ್ತಿಗೆ : ಗುಂಡೇಟಿಗೆ 10 ಜನ ಬಲಿ

KannadaprabhaNewsNetwork |  
Published : Mar 02, 2026, 02:15 AM IST
Karachi

ಸಾರಾಂಶ

ಖಮೇನಿ ಹತ್ಯೆ ಖಂಡಿಸಿ ಕರಾಚಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಗೆ ಗುಂಪೊಂದು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹಾರಿಸಿದ ಗುಂಡೇಟಿಗೆ 9 ಮಂದಿ ಸಾವನ್ನಪ್ಪಿದ್ದಾರೆ.

ಕರಾಚಿ: ಖಮೇನಿ ಹತ್ಯೆ ಖಂಡಿಸಿ ಕರಾಚಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಗೆ ಗುಂಪೊಂದು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ. 

ಪರಿಸ್ಥಿತಿ ನಿಯಂತ್ರಣಕ್ಕೆ ಹಾರಿಸಿದ ಗುಂಡೇಟಿಗೆ 9 ಮಂದಿ ಬಲಿ

ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹಾರಿಸಿದ ಗುಂಡೇಟಿಗೆ 9 ಮಂದಿ ಸಾವನ್ನಪ್ಪಿದ್ದಾರೆ.

ದೂತಾವಾಸಕ್ಕೆ ಮುತ್ತಿಗೆ ಹಾಕುವ ವೇಳೆ ಕೆಲ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರೂ ಅದು ಫಲಕೊಡದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 

ಇಸ್ಲಾಮಾಬಾದ್‌, ಲಾಹೋರ್‌ನಲ್ಲಿಯೂ ಪ್ರತಿಭಟನೆ

ಈ ವೇಳೆ 9 ಮಂದಿ ಹತರಾಗಿ, 32 ಮಂದಿ ಗಾಯಗೊಂಡಿದ್ದಾರೆ. ಅತ್ತ ಖಮೇನಿ ಹತ್ಯೆ ಖಂಡಿಸಿ ಇಸ್ಲಾಮಾಬಾದ್‌, ಲಾಹೋರ್‌ನಲ್ಲಿಯೂ ಪ್ರತಿಭಟನೆ ನಡೆದಿವೆ. ಖಮೇನಿ ಭಾವಚಿತ್ರಗಳನ್ನು ಹಿಡಿದು, ಅಮೆರಿಕ ವಿರುದ್ಧ ಘೋಷಣೆ ಕೂಗುತ್ತಾ ಧರಣಿಯನ್ನು ಮುಂದುವರೆಸಲಾಗಿದೆ. ಭದ್ರತೆ ಬಿಗಿಗೊಳಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ನತ್ತ
2ನೇ ದಿನವೂ ದೇಶಾದ್ಯಂತ ಪ್ರತಿಭಟನೆ