ಶಾಲೆಯ 'ಸಮೃದ್ಧಿ'ಗೆ ಬಾಲಕನ ನರಬಲಿ : ಪೈಶಾಚಿಕ ಕೃತ್ಯ ಎಸಗಿದ ಶಾಲಾ ಮಾಲೀಕ ಸೇರಿ ಐವರ ಬಂಧನ

KannadaprabhaNewsNetwork |  
Published : Sep 28, 2024, 01:15 AM ISTUpdated : Sep 28, 2024, 05:27 AM IST
ನರಬಲಿ | Kannada Prabha

ಸಾರಾಂಶ

ಶಾಲೆಯ ಉದ್ದೇಶ ಇರಿಸಿಕೊಂಡು ವಿದ್ಯಾರ್ಥಿಯೊಬ್ಬನನ್ನು ನರಬಲಿ ನೀಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದಿದೆ. ಈ ಪೈಶಾಚಿಕ ಕೃತ್ಯ ಎಸಗಿದ ಶಾಲಾ ಮಾಲೀಕ ಸೇರಿ ಐವರನ್ನು ಬಂಧಿಸಲಾಗಿದೆ.

ಆಗ್ರಾ: ಶಾಲೆಯ ಸಮೃದ್ಧಿಯ ಉದ್ದೇಶ ಇರಿಸಿಕೊಂಡು ವಿದ್ಯಾರ್ಥಿಯೊಬ್ಬನನ್ನು ನರಬಲಿ ನೀಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದಿದೆ. ಈ ಪೈಶಾಚಿಕ ಕೃತ್ಯ ಎಸಗಿದ ಶಾಲಾ ಮಾಲೀಕ ಸೇರಿ ಐವರನ್ನು ಬಂಧಿಸಲಾಗಿದೆ.

ವಾಮಾಚಾರದ ಆಚರಣೆಗಳಲ್ಲಿ ನಂಬಿಕೆ ಇಟ್ಟಿದ್ದ ಡಿಎಲ್‌ ಪಬ್ಲಿಕ್‌ ಶಾಲೆಯ ಮಾಲೀಕ ಜಸೋಧನ್‌ ಸಿಂಗ್‌ ಎಂಬಾತ, ‘ಶಾಲೆ ಹಾಗೂ ಪರಿವಾರದ ಶ್ರೇಯಸ್ಸಿಗಾಗಿ’ ಮಗುವನ್ನು ಬಲಿ ಕೊಡುವಂತೆ ತನ್ನ ಮಗ ಹಾಗೂ ನಿರ್ದೇಶಕ ದಿನೇಶ್ ಭಗೇಲ್‌ಗೆ ಸೂಚಿಸಿದ್ದ. ಅದರ ಪ್ರಕಾರ 2ನೇ ತರಗತಿಯಲ್ಲಿ ಓದುತ್ತಿದ್ದ ಕೃತಾರ್ಥ್‌ ಎಂಬ 11 ವರ್ಷದ ವಿದ್ಯಾರ್ಥಿಯನ್ನು ಶಿಕ್ಷಕ ರಾಮಪ್ರಕಾಶ್‌ ಸೋಲಂಕಿ, ಭಗೇಲ್ ಮತ್ತು ಸಿಂಗ್‌ ಶಾಲೆಯ ವಸತಿಗೃಹದಿಂದ ಅಪಹರಿಸಿದ್ದರು.

‘ಬಾಲಕನನ್ನು ನಿಗದಿತ ಸ್ಥಳಕ್ಕೆ ಕರೆದೊಯ್ದಾಗ ಎಚ್ಚರಗೊಂಡು ಅಳತೊಡಗಿದ್ದ. ಅಲ್ಲಿ ಅವನನ್ನು ಕತ್ತು ಹಿಸುಕಿ ಕೊಂದರು. ಬಳಿಕ ಆತನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಭಗೇಲ್‌ರ ಕಾರಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಪೋಷಕರಿಗೆ ಸುಳ್ಳು ಹೇಳಲಾಗಿತ್ತು. ಈ ನಡುವೆ ಕಾರನ್ನು ಪೋಷಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಕೃತಾರ್ಥ್‌ನನ್ನು ಉಸಿರುಗಟ್ಟಿಸಿ ಕೊಲ್ಲಲಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ’ ಎಂದು ಹಾಥ್ರಸ್‌ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಶಾಲೆಯ ಮಾಲೀಕ, ನಿರ್ದೇಶಕ, ಪ್ರಾಂಶುಪಾಲ ಹಾಗೂ ಅವರಿಗೆ ನೆರವಾದ 2 ಶಿಕ್ಷಕರನ್ನು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 103(1)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 5 ಮಂದಿಗೆ ಜೈಲುಶಿಕ್ಷೆ ವಿಧಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ । ಇಸ್ಲಾಮಿಕ್‌ ನಾಯಕನ ಹತ್ಯೆ ಬೆನ್ನಲ್ಲೇ ಹಿಂಸೆಟಾಪ್‌- ಬಾಂಗ್ಲಾ ಶೇಕ್‌- ಭಾರತೀಯ ರಾಯಭಾರಿಗಳ ಮನೆಗೆ ಕಲ್ಲೆಸೆತ । ಭಾರತ, ಹಿಂದು ವಿರೋಧಿ ಘೋಷಣೆ
ಹೂಡಿಕೆಗೆ ಕರೆ ನೀಡುವ ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌