ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ನಕಲಿ ಎನ್‌ಸಿಸಿ ಕ್ಯಾಂಪ್‌ ಬೆನ್ನಲ್ಲೇ ಕರಾಳ ಸತ್ಯ

KannadaprabhaNewsNetwork |  
Published : Aug 20, 2024, 12:47 AM ISTUpdated : Aug 20, 2024, 05:05 AM IST
ಲೈಂಗಿಕ ದೌರ್ಜನ್ಯ  | Kannada Prabha

ಸಾರಾಂಶ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಕಲಿ ಎನ್‌ಸಿಸಿ ಕ್ಯಾಂಪ್‌ ನಡೆಸಿ 13 ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಈ ಘಟನೆ ಶಾಲಾ ಆಡಳಿತ ಮಂಡಳಿ ಗಮನಕ್ಕೆ ಬಂದರೂ, ಅದನ್ನು ಮುಚ್ಚಿಡಲು ಯತ್ನಿಸಲಾಗಿತ್ತು.  

ಚೆನ್ನೈ: ಕೋಲ್ಕತಾದ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವಾಗಲೇ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 13 ಶಾಲಾ ಬಾಲಕಿಯರ ಮೇಲೆ ನಕಲಿ ಎನ್‌ಸಿಸಿ ಕ್ಯಾಂಪ್‌ವೊಂದರಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯ ಶಾಲಾ ಆಡಳಿತ ಮಂಡಳಿ ಗಮನಕ್ಕೆ ಬಂದರೂ, ಅದನ್ನು ಮುಚ್ಚಿಡಲು ಯತ್ನಿಸಿದ ಹೇಯ ಘಟನೆಯೂ ಆಗಿದೆ.

ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲ, ಇಬ್ಬರು ಶಿಕ್ಷಕರು, ಕ್ಯಾಂಪ್‌ ಆಯೋಜಕರು ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಒಬ್ಬಳು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ, 12 ಮಂದಿಯನ್ನು ಲೈಂಗಿಕವಾಗಿ ಶೋಷಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಆಗಿದ್ದೇನು?: ಕೃಷ್ಣಗಿರಿಯ ಖಾಸಗಿ ಶಾಲೆಗೆ ಎನ್‌ಸಿಸಿ ಘಟಕ ನಡೆಸುವ ಅನುಮತಿ ಇರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಗುಂಪೊಂದು ಶಾಲೆಯಲ್ಲಿ ಒಂದು ಶಿಬಿರ ನಡೆಸಿದರೆ ಅರ್ಹತೆ ಸಿಗಲಿದೆ ಎಂದು ಹೇಳಿತ್ತು. ಆ ಗುಂಪಿನ ಪೂರ್ವಾಪರ ಬಗ್ಗೆ ಶಾಲಾ ಆಡಳಿತ ಮಂಡಳಿ ವಿಚಾರಣೆ ನಡೆಸಲು ಹೋಗಲಿಲ್ಲ.

17 ಬಾಲಕಿಯರು ಸೇರಿದಂತೆ 41 ವಿದ್ಯಾರ್ಥಿಗಳು ಮೂರು ದಿವಸಗಳ ಶಿಬಿರಕ್ಕೆ ಹೆಸರು ನೋಂದಣಿ ಮಾಡಿಸಿದ್ದರು. ಬಾಲಕಿಯರನ್ನು ಶಾಲೆಯ ಸಭಾಂಗಣದ ಮೊದಲನೆ ಮಹಡಿಯಲ್ಲಿ ವಾಸ್ತವ್ಯ ಮಾಡಿಸಲಾಗಿತ್ತು. ಶಿಕ್ಷಕರನ್ನು ಶಿಬಿರದಿಂದ ಹೊರಗಿಡಲಾಗಿತ್ತು. ಶಿಬಿರದಲ್ಲಿದ್ದಾಗ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ನಡೆಸಲಾಗಿದೆ ಎಂದು ದೂರಲಾಗಿದೆ. ಎಲ್ಲ ಆರೋಪಿಗಳ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ

ಇದೇ ಗುಂಪು ಬೇರೆ ಕಡೆಯೂ ಇದೇ ರೀತಿ ನಕಲಿ ಶಿಬಿರ ನಡೆಸಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಗಾ ವಿರುದ್ಧ ಸಂಸತ್ತಲ್ಲಿ ಬಿಜೆಪಿಯ ಅನರ್ಹತೆ ಅಸ್ತ್ರ
7 ದಶಕಗಳ ಬಳಿಕಹೊಸ ಕಟ್ಟಡಕ್ಕೆ ಪ್ರಧಾನಿ ಕಚೇರಿ - ಇಂದು ‘ಸೇವಾ ತೀರ್ಥ’ ಉದ್ಘಾಟನೆ