ರೈಲ್ವೆಗೆ ₹2.77 ಲಕ್ಷ ಕೋಟಿ ಅನುದಾನ : ದಾಖಲೆ ಪ್ರಮಾಣದ ಹಣ

Published : Feb 02, 2026, 08:54 AM IST
Indian Railways

ಸಾರಾಂಶ

ಪ್ರಸಕ್ತ ಬಜೆಟ್‌ನಲ್ಲಿ ರೈಲ್ವೆಗೆ ಭರ್ಜರಿ 2.77 ಲಕ್ಷ ಕೋಟಿ ರು. ಅನುದಾನ ನೀಡಲಾಗಿದೆ. ಇದು ರೈಲ್ವೆಗೆ ಇದುವರೆಗೆ ನೀಡಿದ ಗರಿಷ್ಠ ನೆರವಾಗಿದೆ. ಈ ಅನುದಾನವು ಹೊಸ ರೈಲ್ವೆ ಮಾರ್ಗ ನಿರ್ಮಾಣ, ಹೊಸ ರೈಲುಗಳ ಖರೀದಿ, ಹೊಸ ಕೋಚ್‌ ಖರೀದಿ ಮತ್ತು ಇನ್ನಿತರೆ ಕೆಲಸಗಳನ್ನು ಒಳಗೊಂಡಿದೆ.

ಪ್ರಸಕ್ತ ಬಜೆಟ್‌ನಲ್ಲಿ ರೈಲ್ವೆಗೆ ಭರ್ಜರಿ 2.77 ಲಕ್ಷ ಕೋಟಿ ರು. ಅನುದಾನ ನೀಡಲಾಗಿದೆ. ಇದು ರೈಲ್ವೆಗೆ ಇದುವರೆಗೆ ನೀಡಿದ ಗರಿಷ್ಠ ನೆರವಾಗಿದೆ. ಈ ಅನುದಾನವು ಹೊಸ ರೈಲ್ವೆ ಮಾರ್ಗ ನಿರ್ಮಾಣ, ಹೊಸ ರೈಲುಗಳ ಖರೀದಿ, ಹೊಸ ಕೋಚ್‌ ಖರೀದಿ ಮತ್ತು ಇನ್ನಿತರೆ ಕೆಲಸಗಳನ್ನು ಒಳಗೊಂಡಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ರೈಲ್ವೆಗೆ 2.52 ಲಕ್ಷ ಕೋಟಿ ರು. ಅನುದಾನ ನೀಡಲಾಗಿತ್ತು. ಪ್ರಸ್ತಕ ವರ್ಷ ಈ ಅನುದಾನದಲ್ಲಿ ಶೇ.10.25ರಷ್ಟು ಹೆಚ್ಚಳ ಮಾಡಲಾಗಿದೆ. ಇದರ ಹೊರತಾಗಿ ರೈಲ್ವೆಗೆ 15000 ಕೋಟಿ ರು. ಅನುದಾನ ಪ್ರಕಟಿಸಲಾಗಿದೆ.

ಬಜೆಟ್‌ ಲೆಕ್ಕಪತ್ರದ ಅನ್ವಯ ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆಯು 3,85,733 ಕೋಟಿ ರು. ಆದಾಯ ಸಂಗ್ರಹಿಸುವ ನಿರೀಕ್ಷೆ ಇದೆ. ಮತ್ತೊಂದೆಡೆ 3,82,186 ಕೋಟಿ ರು. ವೆಚ್ಚದ ಅಂದಾಜು ಮಾಡಲಾಗಿದೆ. ಅಂದರೆ 3547 ಕೋಟಿ ರು. ಮಿಗತೆ ಅಂದಾಜು ಮಾಡಲಾಗಿದೆ.

ಯಾವುದಕ್ಕೆ ಎಷ್ಟು ಹಣ?:

ಹೊಸ ಮಾರ್ಗ ನಿರ್ಮಾಣಕ್ಕೆ 36,721 ಕೋಟಿ ರು., ಗೇಜ್‌ ಪರಿವರ್ತನೆಗೆ 4600 ಕೋಟಿ ರು., ಡಬ್ಲಿಂಗ್‌ಗೆ 37,750 ಕೋಟಿ ರು., ರೈಲು, ಕೋಚ್‌ ಮತ್ತು ಇತರೆ ಖರೀದಿಗೆ 52108 ಕೋಟಿ ರು., ಸಿಗ್ನಲ್‌, ಟೆಲಿಕಾಂ ಮತ್ತು ಇತರೆ ಬಾಬ್ತಿಗೆ 7500 ಕೋಟಿ ರು. ಒದಗಿಸಲಾಗಿದೆ.

ವೇತನ, ಪಿಂಚಣಿಗೆ ಅತಿ ಹೆಚ್ಚು ಹಣ:

ರೈಲ್ವೆಗೆ ನೀಡುವ ಒಟ್ಟು ಅನುದಾನದಲ್ಲಿ ರೈಲ್ವೆಯಲ್ಲಿ 12.18 ಲಕ್ಷ ಸಿಬ್ಬಂದಿಗಳ ವೇತನ ಮತ್ತು ಪಿಂಚಣಿಗೆ 74500 ಕೋಟಿ ರು.ವೆಚ್ಚವಾಗಲಿದೆ. 2024-25ರಲ್ಲಿ ಈ ವೆಚ್ಚ 58844 ಕೋಟಿ ರು.ನಷ್ಟಿತ್ತು.

ಯಾವುದಕ್ಕೆ ಎಷ್ಟು ವೆಚ್ಚ?

₹74500 ಕೋಟಿ ಸಿಬ್ಬಂದಿ ವೇತನ, ಪಿಂಚಣಿ

₹36721 ಕೋಟಿ ಹೊಸ ಮಾರ್ಗ ನಿರ್ಮಾಣ

₹4600 ಕೋಟಿ ಗೇಜ್‌ ಪರಿವರ್ತನೆ

₹37750 ಕೋಟಿ ಡಬ್ಲಿಂಗ್‌

₹52108 ಕೋಟಿ ರೈಲು, ಕೋಚ್‌

₹ 7500 ಕೋಟಿ ಸಿಗ್ನಲ್‌, ಟೆಲಿಕಾಂ, ಇತರೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತೆಂಗು, ಗೋಡಂಬಿ, ಶ್ರೀಗಂಧ ಕೃಷಿಗೆ ಕೇಂದ್ರ ಬಂಪರ್‌-ರೈತರ ಆದಾಯ ಹೆಚ್ಚಿಸಲು ಹಲವು ಕ್ರಮ
ಆಯುರ್ವೇದಕ್ಕೆ ಬಜೆಟ್‌ನಲ್ಲಿ ಬಂಪರ್‌