ವಿಷಕಾರಿ ಆಹಾರ ಸೇವಿಸಿ ಒಂದೇ ಗುಂಪಿಗೆ ಸೇರಿದ 9 ಆನೆ 3 ದಿನಗಳಲ್ಲಿ ಸಾವು : ದೇಶದಲ್ಲೇ ಇದೇ ಮೊದಲು

KannadaprabhaNewsNetwork |  
Published : Nov 01, 2024, 12:05 AM ISTUpdated : Nov 01, 2024, 06:27 AM IST
ಆನೆ | Kannada Prabha

ಸಾರಾಂಶ

ಮಧ್ಯಪ್ರದೇಶ ಬಾಂಧವಗಢ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ವಿಷಕಾರಿ ಆಹಾರ ಸೇವಿಸಿ ಆನೆಗಳ ಸಾವಿನ ಸರಣಿ ಮುಂದುವರೆದಿದೆ. ಗುರುವಾರ ಮತ್ತೆ 2 ಆನೆಗಳು ಸಾವನ್ನಪ್ಪಿದ್ದು, ಮತ್ತೊಂದು ಆನೆ ಗಂಭೀರವಾಗಿದೆ. ಈ ಮೂಲಕ ಒಂದು ವಾರದಲ್ಲಿ ಸಾವನ್ನಪ್ಪಿದ ಆನೆಗಳ ಸಂಖ್ಯೆ 9ಕ್ಕೇರಿಕೆಯಾಗಿದೆ.

ಉಮಾರಿಯಾ: ಮಧ್ಯಪ್ರದೇಶ ಬಾಂಧವಗಢ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ವಿಷಕಾರಿ ಆಹಾರ ಸೇವಿಸಿ ಆನೆಗಳ ಸಾವಿನ ಸರಣಿ ಮುಂದುವರೆದಿದೆ. ಗುರುವಾರ ಮತ್ತೆ 2 ಆನೆಗಳು ಸಾವನ್ನಪ್ಪಿದ್ದು, ಮತ್ತೊಂದು ಆನೆ ಗಂಭೀರವಾಗಿದೆ. ಈ ಮೂಲಕ ಒಂದು ವಾರದಲ್ಲಿ ಸಾವನ್ನಪ್ಪಿದ ಆನೆಗಳ ಸಂಖ್ಯೆ 9ಕ್ಕೇರಿಕೆಯಾಗಿದೆ.

ವನ್ಯಜೀವಿ ತಜ್ಞರ ಪ್ರಕಾರ ಮೂರು ದಿನದಲ್ಲಿ 9 ಆನೆಗಳು ಸಾವನ್ನಪ್ಪಿರುವುದು ದೇಶದಲ್ಲಿ ಇದೇ ಮೊದಲು. ಸಾವನ್ನಪ್ಪಿರುವ ಎಲ್ಲ ಆನೆಗಳು ಒಂದೇ ಗುಂಪಿನವು ಎನ್ನಲಾಗಿದೆ. ಮಂಗಳವಾರ ಸಲ್ಖಾನಿಯಾ ಮತ್ತು ಬಕೇಲಿ ಪ್ರದೇಶದಲ್ಲಿ ನಾಲ್ಕು ಆನೆಗಳು ಶವವಾಗಿ ಪತ್ತೆಯಾಗಿದ್ದವು. ಬಳಿಕ ಬಾಂಧವಗಢದಲ್ಲಿ ಮೂರು ಆನೆಗಳ ಶವ ಪತ್ತೆಯಾಗಿತ್ತು. ಇದೀಗ ಮತ್ತೆ 2 ಆನೆಗಳು ಸಾವನ್ನಪ್ಪಿವೆ.

ಆನೆಗಳ ಸರಣಿ ಸಾವಿನ ಹಿನ್ನೆಲೆ ಸರ್ಕಾರ ತನಿಖೆಗೆ ಆದೇಶಿಸಿದ್ದು, 10 ವಾರದೊಳಗೆ ವರದಿ ನೀಡುವಂತೆ ಸೂಚಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ