ನವದೆಹಲಿ: ರಾಷ್ಟ್ರಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ಸೋಮವಾರ ಮಧ್ಯಂತರ ತೀರ್ಪು ಪ್ರಕಟಿಸಿದೆ. ಇಡೀ ಕಾಯ್ದೆಗೆ ತಡೆ ನೀಡಲು ಯಾವುದೇ ಕಾರಣಗಳಿಲ್ಲ ಎಂದು ಆ ಕುರಿತ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಅರ್ಜಿದಾರರ ಹಿತಾಸಕ್ತಿ ಮತ್ತು ಸಮಾನತೆಯ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಕೆಲವೊಂದು ಅಂಶಗಳಿಗಷ್ಟೇ ತಡೆ ನೀಡುವುದಾಗಿ ಹೇಳಿದೆ.
ಜೊತೆಗೆ ತಾನು ಪ್ರಸಕ್ತ ನೀಡಿರುವ ತಡೆ ಮಧ್ಯಂತರದ ಕ್ರಮ. ಈ ಪ್ರಕರಣದ ಕುರಿತ ಮುಂದಿನ ವಿಚಾರಣೆಗಳ ವೇಳೆ ಪ್ರಕರಣದ ಉಭಯ ಪಕ್ಷಗಳಿಗೆ ತಮ್ಮ ವಾದ ಮಂಡನೆಗೆ ಯಾವುದೇ ಅಡ್ಡಿ ಇಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ನಡುವೆ ವಕ್ಫ್ ಕಾಯ್ದೆ ಕುರಿತ ಮಧ್ಯಂತರ ಆದೇಶ ಬಿಜೆಪಿ ಸರ್ಕಾರಕ್ಕಾದ ಕಪಾಳ ಮೋಕ್ಷ ಎಂದು ಕಾಂಗ್ರೆಸ್ ಟೀಕಿಸಿದ್ದರೆ, ಮುಸ್ಲಿಂ ಸಂಘಟನೆಗಳು ತೀರ್ಪನ್ನು ಸ್ವಾಗತಿಸಿವೆ. ಇನ್ನೊಂದೆಡೆ ಬಿಜೆಪಿ ಕೂಡ ತೀರ್ಪು ಪ್ರಜಾಪ್ರಭುತ್ವದ ಪಾಲಿಗೆ ಉತ್ತಮ ಸೂಚನೆಯಾಗಿದೆ ಎಂದು ಹೇಳಿದೆ.
ಯಾವ ಅಂಶಗಳಿಗೆ ತಡೆ?:
1. ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ, ಕಳೆದ 5 ವರ್ಷಗಳಿಂದ ಇಸ್ಲಾಂ ಧರ್ಮ ಪಾಲನೆ ಮಾಡುತ್ತಿದ್ದವರು ಮಾತ್ರವೇ ವಕ್ಫ್ ರಚಿಸಬಹುದು (ಆಸ್ತಿ ದಾನದ ಘೋಷಣೆ) ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ವಕ್ಫ್ ರಚಿಸುವ ವ್ಯಕ್ತಿ ಕಳೆದ 5 ವರ್ಷಗಳಿಂದ ಇಸ್ಲಾಂ ಧರ್ಮ ಪಾಲಿಸುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನು ಪತ್ತೆ ಮಾಡಲು ರಾಜ್ಯ ಸರ್ಕಾರಗಳು ಸೂಕ್ತ ವ್ಯವಸ್ಥೆ ರಚಿಸುವವರೆಗೂ ಈ ಅಂಶಗಳಿಗೆ ತಡೆ ಇರಲಿದೆ ಎಂದು ನ್ಯಾಯಾಲಯ ಹೇಳಿದೆ.
2. ವಕ್ಫ್ ಆಸ್ತಿಗಳ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಆದೇಶವೇ ಅಂತಿಮ ಎಂಬ ಅಂಶಗಳಿಗೂ ನ್ಯಾಯಾಲಯ ತಡೆ ನೀಡಿದೆ. ಆಸ್ತಿ ಕುರಿತ ಹಕ್ಕನ್ನು ನಿರ್ಧರಿಸುವ ಅವಕಾಶವನ್ನು ಜಿಲ್ಲಾಧಿಕಾರಿಗೆ ನೀಡುವುದು ಅಧಿಕಾರದ ವಿಂಗಡಣೆಯ ನಿಯಮಕ್ಕೆ ವಿರುದ್ಧವಾಗಿದೆ. ವಕ್ಫ್ ಆಸ್ತಿ ಕುರಿತ ವ್ಯಾಜ್ಯದ ಕುರಿತು ಅಂತಿಮ ನಿರ್ಧಾರವಾಗದ ಹೊರತು ವೈಯಕ್ತಿಕ ಆಸ್ತಿಯ ಹಕ್ಕು ನಿರ್ಧರಿಸುವ ಅನುಮತಿ ಅಧಿಕಾರಿಗಳಿಗೆ ಇಲ್ಲ. ಹೀಗಾಗಿ ವಕ್ಫ್ ಆಸ್ತಿ ಹೌದೋ, ಅಲ್ಲವೋ ಎಂದು ಸರ್ಕಾರಿ ಅಧಿಕಾರಿ (ಜಿಲ್ಲಾಧಿಕಾರಿ) ನಿರ್ಧರಿಸಿ ವರದಿ ನೀಡುವುದು ಹಾಗೂ ಈ ವರದಿ ಆಧಾರದ ಮೇಲೆ ರಾಜ್ಯ ಸರ್ಕಾರ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡುವಂತೆ ವಕ್ಫ್ ಬೋರ್ಡ್‌ಗೆ ಸೂಚಿಸುವ ಅಂಶಗಳಿಗೆ ಕೋರ್ಟ್ ತಡೆ ನೀಡಿದೆ
ಮಿತಿ ನಿಗದಿ: ಕೇಂದ್ರ ವಕ್ಫ್ ಬೋರ್ಡ್‌ನ 20 ಸದಸ್ಯರ ಪೈಕಿ ಗರಿಷ್ಠ 4 ಮಂದಿ ಮುಸ್ಲಿಮೇತರರು ಮತ್ತು ರಾಜ್ಯದ ವಕ್ಫ್ ಬೋರ್ಡ್‌ನ 11 ಸದಸ್ಯರ ಗರಿಷ್ಠ ಮೂವರು ಮುಸ್ಲಿಮೇತರ ಸದಸ್ಯರು ಇರಬಹುದು ಎಂದು ನ್ಯಾಯಾಲಯ ಮಿತಿ ಹೇರಿದೆ. ಆದರೆ, ಮುಸ್ಲಿಮರೇತರರೂ ವಕ್ಫ್ ಬೋರ್ಡ್ ಸಿಇಒ ಆಗಬಹುದು ಎಂಬ ನಿಯಮಕ್ಕೆ ತಡೆ ನೀಡಲು ನಿರಾಕರಿಸಿದೆ.
ತಿದ್ದುಪಡಿ ಪರ ಬ್ಯಾಟಿಂಗ್:
ಯಾವುದೇ ಲಿಖಿತ ದಾಖಲೆ ಇಲ್ಲದೇ ಇದ್ದರೂ, ಯಾವುದೇ ಘೋಷಣೆ ಇಲ್ಲದಿದ್ದರೂ ಬಳಕೆ ಮಾಡಿಕೊಂಡು ಬಂದ ಕಾರಣಕ್ಕೇ ಅದು ವಕ್ಫ್ ಆಸ್ತಿ ಎಂಬ ನಿಯಮ ರದ್ದುಪಡಿಸುವ ಕೇಂದ್ರ ಸರ್ಕಾರದ ಕ್ರಮ ಮೇಲ್ನೋಟಕ್ಕೆ ಏಕಪಕ್ಷೀಯವಲ್ಲ ಎಂದು ಕಂಡುಬರುತ್ತಿದೆ. ಇಂಥ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರ ವಕ್ಫ್ ಜಾಗ ಕಬಳಿಕೆಗೆ ಮುಂದಾಗಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ವಕ್ಫ್ ಬೈ ಯೂಸರ್ ನಿಯಮಗಳ ದುರ್ಬಳಕೆಯನ್ನು ಗಮನಿಸಿಯೇ ಸರ್ಕಾರ ಈ ನಿಯಮ ರದ್ದುಪಡಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
- ವಕ್ಫ್ ಆಸ್ತಿ ದುರ್ಬಳಕೆ ಗಮನಿಸಿಯೇ ಸರ್ಕಾರ ಕಾಯ್ದೆ ರೂಪಿಸಿದೆ- ವಕ್ಫ್ ಜಾಗ ಕಬಳಿಕೆಗೆ ಸರ್ಕಾರ ಮುಂದಾಗಿಲ್ಲ: ಸುಪ್ರೀಂಕೋರ್ಟ್
ಯಾವ್ಯಾವುದಕ್ಕೆ ತಡೆ?
1. 5 ವರ್ಷ ಇಸ್ಲಾಂನಲ್ಲಿದ್ದರಷ್ಟೇ ದಾನ5 ವರ್ಷಗಳಿಂದ ಇಸ್ಲಾಂ ಪಾಲಿಸುತ್ತಿರುವವರು ಮಾತ್ರವೇ ವಕ್ಫ್ ರಚಿಸಬಹುದು (ಆಸ್ತಿ ದಾನದ ಘೋಷಣೆ) ಎಂದು ಕಾಯ್ದೆಯಲ್ಲಿದೆ. ಇದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಏಕೆ?: 5 ವರ್ಷಗಳಿಂದ ಇಸ್ಲಾಂ ಧರ್ಮ ಪಾಲಿಸುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನು ಪತ್ತೆ ಮಾಡಲು ರಾಜ್ಯ ಸರ್ಕಾರಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು.
2. ಡೀಸಿಗಳ ಸೂಪರ್‌ಪವರ್‌ವಕ್ಫ್ ಆಸ್ತಿಗಳ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಹೊರಡಿಸುವ ಆದೇಶವೇ ಅಂತಿಮ ಎಂಬ ಅಂಶಕ್ಕೂ ಕೋರ್ಟ್ ತಡೆ ಕೊಟ್ಟಿದೆ.ಏಕೆ?: ಆಸ್ತಿ ಕುರಿತ ಹಕ್ಕನ್ನು ನಿರ್ಧರಿಸುವ ಅವಕಾಶವನ್ನು ಜಿಲ್ಲಾಧಿಕಾರಿಗೆ ನೀಡುವುದು ಅಧಿಕಾರದ ವಿಂಗಡಣೆಯ ನಿಯಮಕ್ಕೆ ವಿರುದ್ಧ ಎಂಬ ಕಾರಣ.
ಮಿತಿ ನಿಗದಿ
ಕೇಂದ್ರ ವಕ್ಫ್ ಬೋರ್ಡ್‌ನ 20 ಸದಸ್ಯರ ಪೈಕಿ ಗರಿಷ್ಠ 4 ಮಂದಿ ಮುಸ್ಲಿಮೇತರರು ಮತ್ತು ರಾಜ್ಯದ ವಕ್ಫ್ ಬೋರ್ಡ್‌ನ 11 ಸದಸ್ಯರ ಗರಿಷ್ಠ ಮೂವರು ಮುಸ್ಲಿಮೇತರ ಸದಸ್ಯರು ಇರಬಹುದು ಎಂದು ನ್ಯಾಯಾಲಯ ಮಿತಿ ಹೇರಿದೆ. ಆದರೆ, ಮುಸ್ಲಿಮರೇತರರೂ ವಕ್ಫ್ ಬೋರ್ಡ್ ಸಿಇಒ ಆಗಬಹುದು ಎಂಬ ನಿಯಮಕ್ಕೆ ತಡೆ ನೀಡಲು ನಿರಾಕರಿಸಿದೆ.
ಇಡೀ ಕಾಯ್ದೆಗೇ ತಡೆನೀಡುವ ಅಗತ್ಯವಿಲ್ಲಇಡೀ ಕಾಯ್ದೆಗೇ ತಡೆ ನೀಡಬೇಕೆಂಬುದಕ್ಕೆ ಸಕಾರಣ ನಮಗೆ ಕಂಡಿಲ್ಲ. ಹೀಗಾಗಿ ಒಟ್ಟಾರೆ ವಕ್ಫ್ ಕಾಯ್ದೆಗೇ ತಡೆ ನೀಡಬೇಕೆಂಬ ಕೋರಿಕೆಯನ್ನು ತಿರಸ್ಕರಿಸುತ್ತಿದ್ದೇವೆ. ಕಕ್ಷಿದಾರರ ಹಿತಾಸಕ್ತಿಯನ್ನು ರಕ್ಷಿಸಲು ಹಾಗೂ ಸಮತೋಲನ ಕಾಯ್ದುಕೊಳ್ಳಲು ಕೆಲವು ಅಂಶಗಳಿಗಷ್ಟೇ ತಡೆ ನೀಡುತ್ತಿದ್ದೇವೆ.- ಸುಪ್ರೀಂಕೋರ್ಟ್
ಸರ್ಕಾರದ ಕ್ರಮ ಏಕಪಕ್ಷೀಯ ಅಲ್ಲ
ಯಾವುದೇ ಲಿಖಿತ ದಾಖಲೆ ಇಲ್ಲದೇ ಇದ್ದರೂ, ಯಾವುದೇ ಘೋಷಣೆ ಇಲ್ಲದಿದ್ದರೂ ಬಳಕೆ ಮಾಡಿಕೊಂಡು ಬಂದ ಕಾರಣಕ್ಕೇ ಅದು ವಕ್ಫ್ ಆಸ್ತಿ ಎಂಬ ನಿಯಮ ರದ್ದುಪಡಿಸುವ ಕೇಂದ್ರ ಸರ್ಕಾರದ ಕ್ರಮ ಮೇಲ್ನೋಟಕ್ಕೆ ಏಕಪಕ್ಷೀಯವಲ್ಲ ಎಂದು ಕಂಡುಬರುತ್ತಿದೆ. ಇಂಥ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರ ವಕ್ಫ್ ಜಾಗ ಕಬಳಿಕೆಗೆ ಮುಂದಾಗಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ವಕ್ಫ್ ಬೈ ಯೂಸರ್ ನಿಯಮಗಳ ದುರ್ಬಳಕೆಯನ್ನು ಗಮನಿಸಿಯೇ ಸರ್ಕಾರ ಈ ನಿಯಮ ರದ್ದುಪಡಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.