ಉಗ್ರ ಕೃತ್ಯದ ಹಿಂದೆ 6 ಡಾಕ್ಟರ್‌ಗಳು

KannadaprabhaNewsNetwork |  
Published : Nov 12, 2025, 03:15 AM IST
ಬಾಂಬ್ | Kannada Prabha

ಸಾರಾಂಶ

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದಿರುವ ಉಗ್ರರ ಬೇಟೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ತಂಡ, ಫರೀದಾಬಾದ್‌ನ ಅಲ್‌ ಫಲಾ ವಿವಿಯಿಂದ ಮತ್ತೆ ಇಬ್ಬರು ವೈದ್ಯರನ್ನು ಬಂಧಿಸಿದೆ.

- ಫರೀದಾಬಾದ್‌ ಅಲ್‌ಫಲಾ ವಿವಿಯಲ್ಲಿ ಐವರ ಕೆಲಸ

- ಇನ್ನೊಬ್ಬ ವೈದ್ಯ ಗುಜರಾತ್‌ನಲ್ಲಿ ಬಂಧಿತನಾಗಿದ್ದ

- ವೈದ್ಯರ ವೇಷ ತೊಟ್ಟು ಉಗ್ರ ಚಟುವಟಿಕೆಯಲ್ಲಿ ಭಾಗಿ

- ಇವರಲ್ಲಿ ಒಬ್ಬಳು ಮಹಿಳಾ ಶಂಕಿತ ಉಗ್ರಗಾಮಿ

- ದೇಶದಲ್ಲಿ ಜೈಶ್‌ ಮಹಿಳಾ ಘಟಕ ಸ್ಥಾಪನೆಗೆ ಮುಂದಾಗಿದ್ದ ಶಂಕಿತೆನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದಿರುವ ಉಗ್ರರ ಬೇಟೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ತಂಡ, ಫರೀದಾಬಾದ್‌ನ ಅಲ್‌ ಫಲಾ ವಿವಿಯಿಂದ ಮತ್ತೆ ಇಬ್ಬರು ವೈದ್ಯರನ್ನು ಬಂಧಿಸಿದೆ.

ಇದರೊಂದಿಗೆ ಉಗ್ರ ಕೃತ್ಯಗಳ ಹಿಂದೆ ಇರುವ ವೈದ್ಯರ ಸಂಖ್ಯೆ 10ಕ್ಕೇರಿದಂತಾಗಿದೆ. ಈ ಮುಂಚೆ ಗುಜರಾತ್‌ನಲ್ಲಿ ಒಬ್ಬ ಹಾಗೂ ಫರೀದಾಬಾದಲ್ಲಿ 3 ವೈದ್ಯರನ್ನು ಬಂಧಿಸಲಾಗಿತ್ತು. ಮಂಗಳವಾರ ಇನ್ನಿಬ್ಬರ ಬಂಧನದೊಂದಿಗೆ ಬಂಧಿತ ಉಗ್ರ ವೈದ್ಯರ ಸಂಖ್ಯೆ 6ಕ್ಕೇರಿದೆ.ನಿನ್ನೆ ಇಬ್ಬರ ಸೆರೆ:

ಫರೀದಾಬಾದ್‌ನಲ್ಲಿ ಮಂಗಳವಾರ ಮತ್ತಿಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಮುಜಮ್ಮಿಲ್‌ ಶಕೀಲ್‌, ಉಮರ್‌ ಮೊಹಮ್ಮದ್‌ ತನಿಖಾಧಿಕಾರಿಗಳು ಬಂಧಿಸಿರುವ ಶಂಕಿತ ಉಗ್ರರು ಎಂದು ಗೊತ್ತಾಗಿದೆ. ಸೋಮವಾರ ಭಾರತದಲ್ಲಿ ಮಹಿಳಾ ಉಗ್ರರನ್ನು ಸಂಘಟಿಸುವ ಹೊಣೆ ಹೊತ್ತಿದ್ದ ಶಂಕಿತಾ ಮಹಿಳಾ ಭಯೋತ್ಪಾದಕಿ ಶಹೀನಾ ಶಾಹಿದ್‌ ಸೇರಿ 8 ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.

12 ಮಂದಿ ಬಲಿಪಡೆದ ಕೆಂಪುಕೋಟೆ ಸ್ಫೋಟದ ಬೆನ್ನಲ್ಲೇ ಅಲ್‌ ಫಲಾ ವಿವಿಯ ವೈದ್ಯರ ಮೇಲೆ ತನಿಖಾಧಿಕಾರಿಗಳ ಕಣ್ಣುನೆಟ್ಟಿದೆ. ಈ ವಿವಿಯಲ್ಲಿ ಕಾಶ್ಮೀರ ಮೂಲದ ಶೇ.40 ವೈದ್ಯರಿದ್ದಾರೆ. ಇವರಲ್ಲಿ ಹಲವು ವೈದ್ಯರು ಉಗ್ರಚಟುವಟಿಕೆಗಳಲ್ಲಿ ತೊಡಗಿರುವುದು ಖಚಿತವಾಗುತ್ತಿದ್ದಂತೆ ಇದೀಗ ತನಿಖಾಧಿಕಾರಿಗಳು ಅವರು ಹಾಗೂ ಅವರ ಜತೆಗೆ ಸಂಪರ್ಕದಲ್ಲಿರುವ ಇತರ ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.

ದೆಹಲಿ ಕ್ರೈಂ ಬ್ರಾಂಚ್‌ನ ಪೊಲೀಸರು ವಿವಿಯ ಕ್ಯಾಂಪಸ್‌ನ ಸಿಸಿಟೀವಿ ಫುಟೇಜ್‌ ಅನ್ನು ಪರಿಶೀಲಿಸಿದ್ದಾರೆ. ತನಿಖೆ ವೇಳೆ ಕೇಳಿ ಬಂದ ಇಬ್ಬರೂ ವೈದ್ಯರ ಕುರಿತು ವಿವಿಯಲ್ಲಿ ಮಾಹಿತಿ ಕಲೆಹಾಕಿದ್ದಾರೆ.

ಕೆಂಪುಕೋಟೆ ಸ್ಫೋಟಕ್ಕೂ ಮುನ್ನ ಫರೀದಾಬಾದ್‌ನ ಎರಡು ಮನೆಯಲ್ಲಿ 2,900 ಕೆ.ಜಿ. ಸ್ಫೋಟಕ ವಶಕ್ಕೆ ಪಡೆದ ಪ್ರಕರಣದ ತನಿಖೆ ವೇಳೆ ಮುಜಮ್ಮಿಲ್‌ ಹೆಸರು ಕೇಳಿಬಂದಿತ್ತು. ಈ ಮನೆಯನ್ನು ಮುಜಮ್ಮಿಲ್‌ ಬಾಡಿಗೆಗೆ ಪಡೆದಿದ್ದ. ಅಚ್ಚರಿಯ ವಿಚಾರವೆಂದರೆ ಮುಜಮ್ಮಿಲ್‌ ವಿವಿಯ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿದ್ದರೂ ಈ ರೂಮ್‌ ಬಾಡಿಗೆಗೆ ಪಡೆದಿದ್ದ. ಈ ರೂಮ್‌ಗಳನ್ನು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲೆಂದೇ ಬಾಡಿಗೆಗೆ ಪಡೆಯಲಾಗಿತ್ತು.

ಇನ್ನು ಈ ಎರಡು ರೂಮ್‌ಗಳಲ್ಲದೆ ಅಲ್‌ ಫಲಾ ವಿವಿಯಲ್ಲಿ ಮುಜಮ್ಮಿಲ್‌ನ ಸಹೋದ್ಯೋಗಿ ಶಹೀನಾ ಶಹೀದ್‌ ಕಾರಿನಲ್ಲಿ ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ.

ಫರೀದಾಬಾದ್‌ನಲ್ಲಿ ಭಾರೀ ಸ್ಫೋಟಕಗಳನ್ನು ವಶಕ್ಕೆ ಪಡೆದ ಬಳಿಕ ಕೆಂಪು ಕೋಟೆ ಬಳಿ ಸ್ಫೋಟ ನಡೆಸಲಾಯಿತು. ತನಿಖೆ ವೇಳೆ ಉಗ್ರ ಉಮರ್‌ ಮೊಹಮ್ಮದ್‌ ಹೆಸರು ಬೆಳಕಿಗೆ ಬಂತು. ಅಲ್‌ ಫಲಾ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಉಮರ್‌ ಸದ್ಯ ವಶಕ್ಕೆ ಪಡೆದಿರುವ ಮುಜಾಮಿಲ್‌ನ ಆತ್ಮೀಯನಾಗಿದ್ದಾನೆ. ಕೆಂಪುಕೋಟೆ ಬಳಿ ಸ್ಫೋಟಕ್ಕೆ ಬಳಸಿದ ಹುಂಡೈ ಐ20 ಕಾರನ್ನು ಉಗ್ರ ಉಮರ್‌ನೇ ಚಲಾಯಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಫರೀದಾಬಾದ್‌ನ ಮನೆ ಮೇಲೆ ದಾಳಿ ನಡೆಸಿದ ಬಳಿಕ ಉಗ್ರ ಉಮರ್‌ ಈ ಸ್ಫೋಟದ ಸಂಚು ರೂಪಿಸಿದ ಎಂದು ಹೇಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ : ಭಾರೀ ಮಳೆ ಎಚ್ಚರಿಕೆ
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು