15 ದಿನದಲ್ಲಿ ಅಮರನಾಥಕ್ಕೆ 3 ಲಕ್ಷ ಭಕ್ತರು: ದಾಖಲೆ

KannadaprabhaNewsNetwork |  
Published : Jul 16, 2024, 12:39 AM ISTUpdated : Jul 16, 2024, 05:10 AM IST
ಅಮರನಾಥ | Kannada Prabha

ಸಾರಾಂಶ

ಪುರಾಣ ಪ್ರಸಿದ್ಧ ಅಮರನಾಥ ಯಾತ್ರೆ ಆರಂಭವಾದ 15 ದಿನಗಳಲ್ಲೇ ದಾಖಲೆಯ 3 ಲಕ್ಷ ಭಕ್ತರು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆ ಇನ್ನೂ 37 ದಿನಗಳ ಕಾಲ ಬಾಕಿ ಇದ್ದು, ಇದೇ ಗತಿಯಲ್ಲಿ ಭಕ್ತರಿಗೆ ದರ್ಶನ ಸಾಧ್ಯವಾದರೆ ಹೊಸ ವಾರ್ಷಿಕ ಯಾತ್ರಾ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ.

ಶ್ರೀನಗರ: ಪುರಾಣ ಪ್ರಸಿದ್ಧ ಅಮರನಾಥ ಯಾತ್ರೆ ಆರಂಭವಾದ 15 ದಿನಗಳಲ್ಲೇ ದಾಖಲೆಯ 3 ಲಕ್ಷ ಭಕ್ತರು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆ ಇನ್ನೂ 37 ದಿನಗಳ ಕಾಲ ಬಾಕಿ ಇದ್ದು, ಇದೇ ಗತಿಯಲ್ಲಿ ಭಕ್ತರಿಗೆ ದರ್ಶನ ಸಾಧ್ಯವಾದರೆ ಹೊಸ ವಾರ್ಷಿಕ ಯಾತ್ರಾ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ.

2011ರಲ್ಲಿ 6.30 ಲಕ್ಷ ದರ್ಶನ ಪಡೆದಿದ್ದು ಈವರೆಗಿನ ದಾಖಲೆಯಾಗಿದೆ. ಕಳೆದ ವರ್ಷ 4.50 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಈಗ 15 ದಿನದಲ್ಲೇ 3 ಲಕ್ಷ ಭಕ್ತರು ಭೇಟಿ ನೀಡಿರುವ ಕಾರಣ 2011ರ ದಾಖಲೆ ಅಳಿಯುವ ಎಲ್ಲ ಸಾಧ್ಯತೆಗಳಿವೆ.

ಯಾತ್ರೆಗೆ ಆಡಳಿತ ಕೈಗೊಂಡ ಸಕಲ ಸಿದ್ಧತೆ, ಸೂಕ್ತ ವಾತಾವರಣವು ಈ ಬಾರಿ ದಾಖಲೆ ಪ್ರಮಾಣದಲ್ಲಿ ಭಕ್ತರು ದರ್ಶನಕ್ಕೆ ಅವಕಾಶ ಕಲ್ಪಿಸಿದೆ.

ಹತ ಉಗ್ರರಿಂದ ಅಮರನಾಥ ಯಾತ್ರೆ ಮೇಲೆ ದಾಳಿ ಸಂಚು: ಸೇನೆ 

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿನ ಭಾರತೀಯ ಸೇನೆ ಹತ್ಯೆ ಮಾಡಿದ 3 ಉಗ್ರರು ಅಮರನಾಥ ಯಾತ್ರೆ ಮೇಲೆ ದಾಳಿ ಮಾಡುವ ಉದ್ದೇಶದಿಂದ ಒಳನುಸುಳಿದ್ದರು ಎಂದು ಸೇನೆ ಹೇಳಿದೆ.ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ 2 ದಿನದ ಹಿಂದೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಘಟನೆ ಬಗ್ಗೆ ಮಾತನಾಡಿದ ಕೇರನ್ ಸೆಕ್ಟರ್‌ನ 268ನೇ ಬ್ರಿಗೇಡ್‌ ಕಮಾಂಡರ್ ಎನ್.ಎಲ್.ಕುರ್ಕ್ಣಿ, ‘ಆಪರೇಷನ್ ಧನುಷ್-2 ಎಂಬ ಹೆಸರಿನ ಕಾರ್ಯಾಚರಣೆಯನ್ನು ನಿನ್ನೆ ಸೇನೆಯು ಎಲ್ಒಸಿ ಬೇಲಿ ಬಳಿ ನಡೆಸಿ 3 ಉಗ್ರರ ಹತ್ಯೆ ಮಾಡಿದ್ದೇವೆ. ಇವರು ಅಮರನಾಥ ಯಾತ್ರೆಗೆ ದಾಳಿ ಮಾಡಲು ಬಂದಿದ್ದರು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ