ಮಾಸ್ಕೋ ಸಭಾಂಗಣದ ಮೇಲೆ ಭಾರಿ ದಾಳಿ: 40 ಮಂದಿ ದಾರುಣ ಹತ್ಯೆ

KannadaprabhaNewsNetwork |  
Published : Mar 23, 2024, 01:20 AM ISTUpdated : Mar 23, 2024, 08:11 AM IST
ಬೆಂಕಿ ಅವಗಢ | Kannada Prabha

ಸಾರಾಂಶ

ಬಂದೂಕುಧಾರಿಗಳಿಂದ ಅಂಧಾದುಂಧಿ ಗುಂಡಿನ ಮಳೆ, ಹಾಲ್‌ಗೆ ಬೆಂಕಿ ಹಚ್ಚಲಾಗಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ.

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸಭೆ-ಸಮಾರಂಭಗಳು ನಡೆಯುವ ಸಿಟಿ ಕ್ರಾಕಸ್‌ ಹಾಲ್‌ಗೆ ಹಲವು ಬಂದೂಕುಧಾರಿಗಳು ನುಗ್ಗಿ ಅಂಧಾದುಂಧಿ ದಾಳಿ ನಡೆಸಿ ಬೆಂಕಿ ಹಚ್ಚಿದ್ದು, ಸುಮಾರು 40 ಜನರು ಸಾವನ್ನಪ್ಪಿರುವ ಭೀಕರ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಹಾಲ್‌ನಲ್ಲಿ ಸಮಾರಂಭವೊಂದು ನಡೆಯುತ್ತಿತ್ತು. ಆಗ ಅಲ್ಲಿಗೆ ಸುಮಾರು 3 ಬಂದೂಕುಧಾರಿಗಳು ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿದ್ದಾರೆ. ಅಲ್ಲದೆ, ಹಾಲ್‌ಗೆ ಬೆಂಕಿ ಹಚ್ಚಿದ್ದಾರೆ. 

ಆಗ ಭಯಗ್ರಸ್ತ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ವೇಳೆ ಅನೇಕರು ಅಸುನೀಗಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ. 

ದಾಳಿಕೋರರ ವಿರುದ್ಧ ಕಾರ್ಯಾಚರಣೆಗೆ ರಷ್ಯಾ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿವೆ ಹಾಗೂ ದಾಳಿಕೋರರಿಗೆ ಶೋಧ ಆರಂಭಿಸಿವೆ.

ರಷ್ಯಾ-ಉಕ್ರೇನ್‌ ಯುದ್ಧ ನಡೆದಿರುವಾಗಲೇ ಈ ಘಟನೆ ನಡೆದಿದೆ. ದಾಳಿಕೋರರು ಯಾರೆಂಬ ಮಾಹಿತಿ ಲಭ್ಯವಾಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತ.ನಾಡಲ್ಲಿ ಹುಟ್ಟುವ ಮಕ್ಕಳಿಗೆ 1 ಗ್ರಾಂ ಬಂಗಾರದ ಉಂಗುರ!
ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ