ಮಂಗಳವಾರ ತಡರಾತ್ರಿ ಪಾಕಿಸ್ತಾನದ ಉಗ್ರನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಮೃತಪಟ್ಟ ಲಷ್ಕರ್ ಮತ್ತು ಜೈಶ್ ಸಂಘಟನೆಗೆ ಸೇರಿದ 5 ಉಗ್ರರ ಗುರುತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇಸ್ಲಾಮಾಬಾದ್: ಮಂಗಳವಾರ ತಡರಾತ್ರಿ ಪಾಕಿಸ್ತಾನದ ಉಗ್ರನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ಮೃತಪಟ್ಟ ಲಷ್ಕರ್ ಮತ್ತು ಜೈಶ್ ಸಂಘಟನೆಗೆ ಸೇರಿದ 5 ಉಗ್ರರ ಗುರುತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಲಷ್ಕರ್-ಎ-ತೊಯ್ಬಾ ಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನ ಭಾವ ಮುದಾಸರ್ ಖಾದಿಯಾನ್ ಖಾಸ್ ಹತರಲ್ಲಿ ಒಬ್ಬನಾಗಿದ್ದಾನೆ.. ಆತನ ಅಂತ್ಯಕ್ರಿಯೆಯನ್ನು, ಜಾಗತಿಕ ಉಗ್ರ ಅಬ್ದುಲ್ ರೌಫ್ ನೇತೃತ್ವದಲ್ಲಿ, ಯೋಧರ ಉಪಸ್ಥಿತಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿದ್ದು ತಿಳಿದುಬಂದಿದೆ.
ಮಸೂದ್ ಅಜರ್‌ನ ಹಿರಿಯ ಸಹೋದರ ಹಾಗೂ ಲಷ್ಕರ್‌ನ ಬಹಾವಲ್ಪುರ ಉಸ್ತುವಾರಿಯಾಗಿದ್ದ ಹಫೀಜ್ ಮುಹಮ್ಮದ್ ಜಮೀಲ್, ಕಂದಹಾರ್ ವಿಮಾನ ಅಪಹರಣಕಾರರಲ್ಲಿ ಪ್ರಮುಖನಾದ ಮೊಹಮ್ಮದ್ ಯೂಸುಫ್ ಅಜರ್, ಖಾಲಿದ್ ಅಲಿಯಾಸ್ ಅಬು ಆಕಾಶ, ಜೈಶ್‌ನ ಮೊಹಮ್ಮದ್ ಹಸನ್ ಖಾನ್ ಭಾರತದ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಮೂಲಗಳು