ಸಾಮಾನ್ಯ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್‌ ಸೇರಿ 53 ಔಷಧಗಳ ಗುಣಮಟ್ಟ ಕಳಪೆ - ಕೆಲವು ವಿಷಪೂರಿತ

Published : Sep 26, 2024, 06:12 AM IST
Government bans drugs

ಸಾರಾಂಶ

ಸಾಮಾನ್ಯ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್‌, ಮಧುಮೇಹ, ರಕ್ತದೊತ್ತಡ, ವಿಟಮಿನ್‌ ಸೇರಿದಂತೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.

ನವದೆಹಲಿ: ಸಾಮಾನ್ಯ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್‌, ಮಧುಮೇಹ, ರಕ್ತದೊತ್ತಡ, ವಿಟಮಿನ್‌ ಸೇರಿದಂತೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ. ಈ ಪೈಕಿ ಕೆಲವು ಔಷಧಗಳ ವಿಷಪೂರಿತವಾಗಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಘಟನೆ (ಸಿಡಿಎಎಸ್‌ಸಿಒ) ತನ್ನ ಮಾಸಿಕ ವರದಿಯಲ್ಲಿ ಎಚ್ಚರಿಸಿದೆ.

ಇದರಲ್ಲಿ ಪ್ಯಾರಾಸಿಟಮಾಲ್‌ ಮಾತ್ರೆಯನ್ನು ಕರ್ನಾಟಕದ ಆ್ಯಂಟಿಬಯೋಟಿಕ್ಸ್‌ ಆ್ಯಂಡ್‌ ಫಾರ್ಮಸುಟಿಕಲ್ಸ್‌ ಲಿ. ಎಂಬ ಕಂಪನಿ ಸಿದ್ಧಪಡಿಸಿದೆ.

ಸಿಡಿಎಎಸ್‌ಸಿಒ ಪ್ರತಿ ತಿಂಗಳು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಔಷಧಗಳ ಮಾದರಿ ಪರೀಕ್ಷೆ ನಡೆಸಿ ಅವುಗಳ ಗುಣಮಟ್ಟದ ಕುರಿತ ವರದಿ ಬಿಡುಗಡೆ ಮಾಡುತ್ತದೆ.

ಇದೀಗ ಬಿಡುಗಡೆಯಾದ ಹೊಸ ವರದಿ ಅನ್ವಯ, ವಿಟಮಿನ್‌ ಸಿ, ವಿಟಮಿನ್‌ 3 ಗುಳಿಗೆಗಳಾದ ಶೇಲ್‌ಕಾಲ್‌, ವಿಟಮಿನ್ ಬಿ ಕಾಂಪ್ಲೆಕ್ಸ್‌, ವಿಟಮಿನ್‌ ಸಿ ಸಾಫ್ಟ್‌ಜೆಲ್ಸ್‌, ಆ್ಯಂಟಿಆ್ಯಸಿಡ್‌ ಪಾನ್‌ ಡಿ, ಪ್ಯಾರಾಸಿಟಮಾಲ್‌ ಐಪಿ 500 ಎಂಜಿ, ಮಧುಮೇಹ ನಿಯಂತ್ರಣಕ್ಕೆ ಬಳಸುವ ಗ್ಲಿಮ್‌ಪಿರೈಡ್‌, ಅಧಿಕ ರಕ್ತದೊತ್ತಡಕ್ಕೆ ಬಳಸುವ ಟೆಲ್ಮಿಸಾರ್ಟಾನ್‌ ಸೇರಿದಂತೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.

ಈ ಔಷಧಗಳನ್ನು ಹೆಟಿರೋ ಡ್ರಗ್ಸ್‌, ಆಲ್ಕೆಮ್‌ ಲ್ಯಾಬ್‌, ಹಿಂದೂಸ್ತಾನ್‌ ಆ್ಯಂಟಿಬಯಾಟಿಕ್ಸ್‌, ಕರ್ನಾಟಕ ಆ್ಯಂಟಿಬಯಾಟಿಕ್ಸ್‌ ಆ್ಯಂಡ್‌ ಫಾರ್ಮಾ ಲಿ., ಮೇಲ್‌ ಲೈಫ್‌ ಸೈನ್ಸೆಸ್‌, ಪ್ಯೂರ್‌ ಆ್ಯಂಡ್‌ ಕ್ಯೂರ್‌ ಹೆಲ್ತ್‌ಕೇರ್‌ ಮೊದಲಾದ ಸಂಸ್ಥೆಗಳು ಉತ್ಪಾದಿಸುತ್ತಿವೆ ಎಂದು ವರದಿ ಹೇಳಿದೆ.

ಇನ್ನು ಆಲ್ಕೆಂ ಲ್ಯಾಬ್‌ನ ಕ್ಲಾವಂ 625 ಮತ್ತು ಪಾನ್‌ ಡಿ ಔಷಧಗಳು ವಿಷಪೂರಿತವಾಗಿದೆ ಎಂದು ವರದಿ ಹೇಳಿದೆ. ಆದರೆ ವರದಿಯಲ್ಲಿ ವಿಷಪೂರಿತ ಎಂದು ಕಂಡುಬಂದ ಬ್ಯಾಚ್‌ನ ಔಷಧಗಳನ್ನು ತಾನು ಉತ್ಪಾದಿಸಿಲ್ಲ ಎಂದು ಕಂಪನಿ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ