ಪಟನಾ: ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಏಷ್ಯಾದ ಅತಿ ಅಗಲವಾದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.
ರಾಜ್ಯದ ಮೊಕಾಮಾದಲ್ಲಿರುವ ಆಂತಾ ಘಾಟ್ ಎಂಬ ಊರು ಮತ್ತು ಬೇಗುಸರೈನಲ್ಲಿರುವ ಸಿಮಾರಿಯಾ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆ, ರಾಷ್ಟ್ರೀಯ ಹೆದ್ದಾರಿ 31ರ ಭಾಗವಾಗಿದೆ.
34 ಮೀ. ಅಗಲವಾಗಿರುವ ಈ ಸೇತುವೆ, ಸಾಮಾನ್ಯ ಸೇತುವೆಗಳಿಗಿಂತ 4.5 ಮೀ. ಅಧಿಕ ಅಗಲವಾಗಿದೆ. ಇದರ ಎರಡೂ ಬದಿಗಳಲ್ಲಿ ಕೇಬಲ್ ಆಧಾರ ಹೊಂದಿದ್ದು, ಒಟ್ಟು ಉದ್ದ 1.86 ಕಿ.ಮೀ. ಇದೆ. ಈ ಬ್ರಿಡ್ಜ್ ಆಧುನಿಕ ತಂತ್ರಜ್ಞಾನ, ಬಾಳಿಕೆ ಮತ್ತು ಸುಗಮ ಸಂಚಾರವನ್ನು ಖಾತ್ರಿಗೊಳಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನು 1,871 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರಯೋಜನಗಳೇನು?:
ಈ ಮೊದಲಿದ್ದ ಹಳೆಯ ರಾಜೇಂದರಾ ಸೇತುವೆಯಲ್ಲಿ ಭಾರದ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಆದರೆ ಈಗ ಆಂತಾ-ಸಿಮಾರಿಯಾ ಮಾರ್ಗವಾಗಿ ಪ್ರಯಾಣಿಸುವುದರಿಂದ ಭಾರದ ವಾಹನಗಳು 100 ಕಿ.ಮೀ. ಸುತ್ತಿಬಳಸಿ ಬರುವುದನ್ನು ತಪ್ಪುತ್ತದೆ. ಇದರಿಂದಾಗಿ ವ್ಯಾಪಾರಿಗಳಿಗೆ, ರೈತರಿಗೆ, ಕಾರ್ಖಾನೆಗಳಿಗೆ ಅನುಕೂವಕವಾಗಿ ಆರ್ಥಿಕತೆಗೆ ಬಲ ಬರುವ ನಿರೀಕ್ಷೆಯಿದೆ. ಜತೆಗೆ ಇದು ಅಗಲವಾಗಿರುವ ಕಾರಣ, ಇನ್ನುಮುಂದೆ ವಾಹನದಟ್ಟಣೆಯ ಸಮಸ್ಯೆ ಇರುವುದಿಲ್ಲ.
- ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆ
- 34 ಮೀ. ಅಗಲ ಇರುವ 6 ಲೇನ್ ಸೇತುವೆ
- ಸಾಮಾನ್ಯ ಸೇತುವೆಗಿಂತ 4.5 ಮೀ. ಅಗಲ
ಗಂಗಾ ನದಿ ಮೇಲೆ 6 ಸೇತುವೆ ಸೇತುವೆ ನಿರ್ಮಾಣ
ಸೇತುವೆ ನಿರ್ಮಾಣಕ್ಕೆ 1,871 ಕೋಟಿ ರು. ವೆಚ್ಚ
ಸ್ಥಳೀಯ ಆರ್ಥಿಕತೆಗೆ ಬಲ ತುಂಬಲಿದೆ ಈ ಬ್ರಿಡ್ಜ್