ಭಾರತದಲ್ಲಿ 8000 ಟ್ವೀಟರ್‌ ಖಾತೆಗಳಿಗೆ ನಿರ್ಬಂಧ

Follow Us

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಸ್ಕ್‌ ಒಡೆತನದ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್‌ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಭಾರತದಲ್ಲಿ 8,000 ಎಕ್ಸ್‌ (ಟ್ವೀಟರ್) ಖಾತೆಗಳಿಗೆ ನಿರ್ಬಂಧ ಹೇರಿದೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಸ್ಕ್‌ ಒಡೆತನದ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್‌ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಭಾರತದಲ್ಲಿ 8,000 ಎಕ್ಸ್‌ (ಟ್ವೀಟರ್) ಖಾತೆಗಳಿಗೆ ನಿರ್ಬಂಧ ಹೇರಿದೆ.

ಈ ಬಗ್ಗೆ ಎಕ್ಸ್‌ ಮಾಹಿತಿ ನೀಡಿದ್ದು, ‘ಭಾರತದಲ್ಲಿ 8,000 ಕ್ಕೂ ಹೆಚ್ಚು ಎಕ್ಸ್‌ ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರದಿಂದ ಕಾರ್ಯನಿರ್ವಾಹಕ ಆದೇಶಗಳು ಬಂದಿವೆ. ಆದೇಶಗಳನ್ನು ಪಾಲಿಸಲು , ನಾವು ಭಾರತದಲ್ಲಿ ನಿರ್ದಿಷ್ಟ ಖಾತೆಗಳನ್ನು ತಡೆ ಹಿಡಿಯುತ್ತೇವೆ. ಆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ’ ಎಂದಿದೆ.