ಭಾರತ- ಪಾಕ್‌ ಯುದ್ಧ ತಪ್ಪಿದ್ದುಎಂದಾದರೂ ಸಿಗಬಹುದಾದ ಹಿರಿಮೆಗಿಂತ ದೊಡ್ಡದು : ಟ್ರಂಪ್‌

KannadaprabhaNewsNetwork |  
Published : May 18, 2025, 01:54 AM ISTUpdated : May 18, 2025, 04:50 AM IST
US President Donald Trump (Photo/ Reuters)

ಸಾರಾಂಶ

ಭಾರತ ಮತ್ತು ಪಾಕಿಸ್ತಾನವನ್ನು ಮಾತುಕತೆಯ ಹಾದಿಗೆ ತಂದು ಯುದ್ಧವನ್ನು ತಪ್ಪಿಸಿದ್ದು, ಈ ವಿಷಯದಲ್ಲಿ ತಮಗೆ ಎಂದಾದರೂ ಸಿಗಬಹುದಾದ ಶ್ರೇಯಸ್ಸಿಗಿಂತ ದೊಡ್ಡದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನವನ್ನು ಮಾತುಕತೆಯ ಹಾದಿಗೆ ತಂದು ಯುದ್ಧವನ್ನು ತಪ್ಪಿಸಿದ್ದು, ಈ ವಿಷಯದಲ್ಲಿ ತಮಗೆ ಎಂದಾದರೂ ಸಿಗಬಹುದಾದ ಶ್ರೇಯಸ್ಸಿಗಿಂತ ದೊಡ್ಡದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಎರಡೂ ರಾಷ್ಟ್ರಗಳ ನಡುವೆ ದೊಡ್ಡ ದ್ವೇಷ ಇತ್ತು. ಸಂಘರ್ಷವು ಬಹುಶಃ ಪರಮಾಣು ಹಂತಕ್ಕೆ ತಲುಪುವ ಸಾಧ್ಯತೆಯಿತ್ತು. ಎರಡೂ ಪ್ರಮುಖ ಪರಮಾಣು ಶಕ್ತಿಗಳು ಕುಪಿತಗೊಂಡಿದ್ದವು. ಅವುಗಳ ಜತೆ ಮಾತುಕತೆ ನಡೆಸಿ ಸಂಕಷ್ಟದಿಂದ ಮರಳಿ ತಂದಿರುವುದು, ಈ ವಿಷಯದಲ್ಲಿ ನನಗೆ ಎಂದಾದರೂ ಸಿಗಬಹುದಾದ ಶ್ರೇಯಸ್ಸಿಗಿಂತ ದೊಡ್ಡದು ಎಂದಿದ್ದಾರೆ.

ಇದೇ ವೇಳೆ, ಭಾರತದ ಜತೆಗಿನ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿದ ಅವರು, ‘ಭಾರತ ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದು. ಅವರು ವ್ಯಾಪಾರ ಮಾಡುವುದನ್ನು ಅಸಾಧ್ಯವಾಗಿಸುತ್ತಾರೆ. ಆದರೆ ಅಮೆರಿಕದ ವಸ್ತುಗಳಿಗೆ ವಿಧಿಸುತ್ತಿದ್ದ ಸುಂಕವನ್ನು ಶೇ.100ರಷ್ಟು ಕಡಿತ ಮಾಡಲು ಭಾರತ ಸರ್ಕಾರ ಒ್ಪಪಿಕೊಂಡಿದೆ. ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ನಡೆಯಲಿದೆ’ ಎಂದರು.

ಪಾಕ್‌ಗೆ ಐಎಂಎಫ್‌ ಸಾಲ ವಿಚಾರದಲ್ಲಿ ಅಮೆರಿಕ ಒತ್ತಡಕ್ಕೆ ಮಣಿದ ಮೋದಿ: ಕಾಂಗ್ರೆಸ್‌

ನವದೆಹಲಿ: ಉಗ್ರಪೋಷಿತ ಪಾಕಿಸ್ತಾನಕ್ಕೆ ಐಎಂಎಫ್‌ ಸಾಲ ನೀಡಿದ್ದನ್ನು ಮೊದಲೇ ವಿರೋಧಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹೊಸ ಆರೋಪ ಮಾಡಿದ್ದು, ‘ ಈ ವಿಚಾರದಲ್ಲಿ ಕಾಂಗ್ರೆಸ್‌ ಹಿಂದೆಯೇ ಎಚ್ಚರಿಸಿದ್ದರೂ ಎಚ್ಚೆತ್ತುಕೊಳ್ಳ ಲಿಲ್ಲ. ಐಎಂಎಫ್‌ ಸಾಲ ನೀಡುವುದನ್ನು ವಿರೋಧಿಸಿದೆ ಮೋದಿ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿದಿದೆ’ ಎಂದಿದೆ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಈ ಬಗ್ಗೆ ಮಾತನಾಡಿದ್ದು, ‘ ಮೇ 9 ರಂದು ಐಎಂಎಫ್‌ ಪಾಕಿಸ್ತಾನಕ್ಕೆ ಸಾಲ ನೀಡಿದ್ದನ್ನು ಟೀಕಿಸುತ್ತಾರೆ. ಮೋದಿ ಸರ್ಕಾರ ಎಚ್ಚೆತ್ತುಗೊಳ್ಳುವ ಮೊದಲೇ ಏ 29ರಂದು ಕಾಂಗ್ರೆಸ್‌ ಈ ಬಗ್ಗೆ ಹೇಳಿತ್ತು. ಮೇ 9 ರಂದು ಐಎಂಎಫ್ ಕಾರ್ಯಕಾರಿ ಮಂಡಳಿ ಸಭೆ ಸೇರುತ್ತಿದೆ. ಭಾರತ ಇದನ್ನು ಬಲವಾಗಿ ವಿರೋಧಿಸಬೇಕು ಎಂದಿತ್ತು. ಆದರೆ ಭಾರತವು 9 ರಂದು ಮತದಾನದಿಂದ ಮಾತ್ರ ದೂರವಿತ್ತು. ಮೋದಿ ಸರ್ಕಾರದ ಪರ ಡ್ರಮ್ ಬಾರಿಸು ವವರು, ಚಿಯರ್‌ಲೀಡರ್‌ಗಳು ಮತ್ತು ಕ್ಷಮೆಯಾಚಿಸುವವರು ಭಾರತಕ್ಕೆ ಲಭ್ಯವಿರುವ ಏಕೈಕ ಆಯ್ಕೆ ಇದು ಎಂದು ವಾದಿ ಸಿದರು, ಇದು ಸುಳ್ಳು. ಕಾರ್ಯಕಾರಿ ಮಂಡಳಿಯಲ್ಲಿ ಇಲ್ಲ ಎಂದು ಮತ ಚಲಾಯಿಸಲು ನಿಜಕ್ಕೂ ಅವಕಾಶವಿದೆ. ಆದರೆ 9 ರಂದು ಎಐಎಂಎಫ್‌ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮೋದಿ ಅಮೆರಿಕ ಸರ್ಕಾರದ ಒತ್ತಡಕ್ಕೆ ಮಣಿಯಿತು’ ಎಂದಿದ್ದಾರೆ. 

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ