ರಾಮ ಜನ್ಮಭೂಮಿ, ಬಾಂಡ್‌ ತೀರ್ಪು ನೀಡಿದ್ದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ನಿವೃತ್ತಿ

KannadaprabhaNewsNetwork |  
Published : Nov 09, 2024, 01:01 AM ISTUpdated : Nov 09, 2024, 04:55 AM IST
ಚಂದ್ರಚೂಡ್‌ | Kannada Prabha

ಸಾರಾಂಶ

2016ರಿಂದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ, 2022ರಿಂದ ಮುಖ್ಯ ನ್ಯಾಯಮೂರ್ತಿಯಾಗಿ ಹಲವು ಮಹತ್ವದ ಪ್ರಕರಣಗಳ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಶುಕ್ರವಾರ ನಿವೃತ್ತಿಯಾದರು.

ನವದೆಹಲಿ: 2016ರಿಂದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ, 2022ರಿಂದ ಮುಖ್ಯ ನ್ಯಾಯಮೂರ್ತಿಯಾಗಿ ಹಲವು ಮಹತ್ವದ ಪ್ರಕರಣಗಳ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಶುಕ್ರವಾರ ನಿವೃತ್ತಿಯಾದರು.

ಈ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಜೊಡುಗೆ ನೀಡಲಾಯಿತು. ಈ ವೇಳೆ ಮಾತನಾಡಿದ ನ್ಯಾ.ಚಂದ್ರಚೂಡ್‌, ನಾಳೆಯಿಂದ ನಾನು ನ್ಯಾಯದಾನ ಮಾಡಲಾರೆ. ಸುದೀರ್ಘ ಅವಧಿಗೆ ನ್ಯಾಯಪೀಠ ಕುಳಿತು ಅಗತ್ಯವಿರುವವರಿಗೆ ನ್ಯಾಯದಾನ ನೀಡಿದ ಸಂತಸ ನನ್ನಲ್ಲಿದೆ. ಇದಕ್ಕಿಂತ ಹೆಚ್ಚೇನೂ ಬೇಕಾಗಿಲ್ಲ. ಈ ಅವಧಿಯಲ್ಲಿ ನನ್ನಿಂದ ಯಾರಿಗಾದರೂ ನೋವಾದರೆ ಕ್ಷಮಿಸಿ ಎಂದು ಹೇಳಿದರು.

ಸುದೀರ್ಘ ಅವಧಿಗೆ ಈ ಹುದ್ದೆಯಲ್ಲಿ ಮುಂದುವರೆದಿದ್ದ ನ್ಯಾ.ಚಂದ್ರಚೂಡ್‌, ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳಿಗೆ ಕಾರಣವಾಗುವುದರ ಜೊತೆಗೆ ಈ 2 ವರ್ಷದಲ್ಲೀ 500ಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ಇತರೆ ತೀರ್ಪುಗಳಿಗೆ ಮಾರ್ಗದರ್ಶನವಾಗಬಲ್ಲ ಹಲವು ತೀರ್ಪುಗಳಿಗೂ ಕಾರಣಕರ್ತರಾಗಿದ್ದರು.

ಪ್ರಮುಖ ತೀರ್ಪುಗಳು:

ರಾಮಜನ್ಮಭೂಮಿ ವಿವಾದ, 370ನೇ ವಿಧಿ ರದ್ದು ನಿರ್ಧಾರ ಎತ್ತಿಹಿಡಿದಿದ್ದು, ಚುನಾವಣಾ ಬಾಂಡ್‌ನ್ನು ಅಸಂವಿಧಾನಿಕ ಎಂದ ತೀರ್ಪು, ಸಲಿಂಗ ವಿವಾಹ ಕ್ರಿಮಿನಲ್‌ ಅಲ್ಲ, ಆಧಾರ್ ಗೌಪ್ಯತೆ, ಲೀವಿಂಗ್‌ ವಿಲ್‌ಗೆ ಮಾನ್ಯತೆ, ಸೇರಿದಂತೆ ಇನ್ನು ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ಲೈಬ್ರರಿಯಲ್ಲಿನ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿರುವ ನ್ಯಾಯದೇವತೆಗೆ ಬದಲಾಗಿ ಕೈಯಲ್ಲಿ ಖಡ್ಗ, ಸಂವಿಧಾನ ಹಿಡಿದ ಪ್ರತಿಮೆ ಅನಾವರಣ ಮೂಲಕವೂ ಗಮನ ಸೆಳೆದಿದ್ದರು. ಡಿ.ವೈ.ಚಂದ್ರಚೂಡ್‌ ಅವರ ತಂದೆ ವೈ.ವಿ.ಚಂದ್ರಚೂಡ್‌ ಕೂಡಾ 1978ರಿಂದ 1985ರವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು.

ನ.11ರಿಂದ ಜಸ್ಟೀಸ್‌ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಚಂದ್ರಚೂಡ್‌ ಬಗ್ಗೆ ಕೆಲ ಅಪರೂಪದ ಸಂಗತಿಗಳು

ಡಿ.ವೈ.ಚಂದ್ರಚೂಡ್‌ ಅವರು ಸಮೋಸಾವನ್ನು ಬಹುವಾಗಿ ಇಷ್ಟ ಪಡುತ್ತಿದ್ದರು. ಆದರೆ ಅವರು ಮೀಟಿಂಗ್‌ಗಳಲ್ಲಿ ಎಂದಿಗೂ ಸಮೋಸಾ ತಿನ್ನುತ್ತಿರಲಿಲ್ಲ.ಸಸ್ಯಹಾರಿ ಆಗಿದ್ದ ಚಂದ್ರಚೂಡ್‌ ಬಹಳ ಶಿಸ್ತಿನ ಜೀವನ ನಡೆಸುತ್ತಿದ್ದರು. ಮುಂಜಾನೆ 4 ಗಂಟೆಗೆ ಎದ್ದೇಳುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು.

ಚಂದ್ರಚೂಡ್‌ ಕ್ರಿಕೆಟ್, ಟ್ರಕ್ಕಿಂಗ್, ಸಂಗೀತ ಕೇಳುವ ಅಭ್ಯಾಸಗಳನ್ನು ಹೊಂದಿದ್ದರು. ಮಾತ್ರವಲ್ಲದೇ ಸಮಯ ಸಿಕ್ಕಾಗೆಲ್ಲ ಬರೆಯುವ ಹವ್ಯಾಸವೂ ಅವರಿಗಿತ್ತು.ಸಣ್ಣ ಮಕ್ಕಳು ಕಳುಹಿಸಿದ್ದ ಹಲವು ವಿದಾಯದ ಕಾರ್ಡ್‌ಗಳನ್ನು ಡಿ.ವೈ.ಚಂದ್ರಚೂಡ್‌ ಅವರು ತಮ್ಮ ಚೇಂಬರ್‌ನಲ್ಲಿ ಇರಿಸಿಕೊಂಡಿದ್ದರು.

ಸಂಜೆ 4 ಗಂಟೆಗೂ ವಕೀಲರು ಕಿಕ್ಕಿರಿದು ಸೇರಿದಾಗಲೂ ವಿಚಾರಣೆ ಆಲಿಸುತ್ತಿದ್ದರು. ವಿಚಾರಣೆ ಸಮಯದಲ್ಲಿ ವಕೀಲರಿಗೆ ಐ ಪ್ಯಾಡ್‌ಗಳನ್ನು ಹೇಗೆ ಬಳಸಬೇಕು ಎಂದು ತಂತ್ರಜ್ಞಾನದ ಬಗ್ಗೆ ಕಲಿಸಿಕೊಟ್ಟಿದ್ದರು.

PREV

Recommended Stories

ಇಡೀ ವಕ್ಫ್‌ ಕಾಯ್ದೆ ಬದಲು 2 ಅಂಶಕ್ಕಷ್ಟೆ ಸುಪ್ರೀಂ ತಡೆ
30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಸಾರ್ಥಕತೆ