ಸಿಡ್ನಿ ಶಾಪಿಂಗ್‌ ಮಾಲ್‌ನಲ್ಲಿ ರಕ್ತದೋಕುಳಿ: ಇರಿತಕ್ಕೆ 5 ಬಲಿ

KannadaprabhaNewsNetwork |  
Published : Apr 14, 2024, 01:52 AM ISTUpdated : Apr 14, 2024, 06:41 AM IST
MURDER in up

ಸಾರಾಂಶ

ಆಸ್ಟ್ರೇಲಿಯಾದ ಸಿಡ್ನಿಯ ಶಾಪಿಂಗ್‌ ಮಾಲ್‌ವೊಂದರಲ್ಲಿ ಚಾಕುವಿನಿಂದ ಇರಿದು 5 ಜನರನ್ನು ಸಾಯಿಸಿದ ಭೀಕರ ಘಟನೆ ಶನಿವಾರ ನಡೆದಿದೆ.

ಸಿಡ್ನಿ: ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಚಾಳಿ ಅಮೆರಿಕ, ಯೂರೋಪ್‌ ಬಳಿಕ ಇದೀಗ ಆಸ್ಟ್ರೇಲಿಯಾಗೂ ಕಾಲಿಟ್ಟಿದ್ದು, ವ್ಯಕ್ತಿಯೊಬ್ಬ ಕಿಕ್ಕಿರಿದ್ದು ತುಂಬಿದ್ದ ಆಸ್ಟ್ರೇಲಿಯಾದ ಸಿಡ್ನಿಯ ಶಾಪಿಂಗ್‌ ಮಾಲ್‌ವೊಂದರಲ್ಲಿ ಚಾಕುವಿನಿಂದ ಇರಿದು 5 ಜನರನ್ನು ಸಾಯಿಸಿದ ಭೀಕರ ಘಟನೆ ಶನಿವಾರ ನಡೆದಿದೆ. ಈ ಘಟನೆ ಆಸ್ಟ್ರೇಲಿಯಾ ಮಾತ್ರವಲ್ಲ ಜಗತ್ತನ್ನು ಬೆಚ್ಚಿ ಬೀಳಿಸಿದೆ.

ಆದರೆ ಆತ ಸುಮಾರು 8-9 ಜನಕ್ಕೆ ಇರಿದು ಮುಂದೆ ಸಾಗುತ್ತಿದ್ದಾಗ ತ್ವರಿತವಾಗಿ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು, ಆತನನ್ನು ಗುಂಡಿಕ್ಕಿ ಸಾಯಿಸಿದ ಪರಿಣಾಮ ಮುಂದೆ ಉಂಟಾಗಬಹುದಾಗಿದ್ದ ಸಂಭವನೀಯ ಭಾರೀ ಅನಾಹುತ ತಪ್ಪಿಸಿದ್ದಾರೆ. ಆದಾಗ್ಯೂ ಆತ ಇರಿದ 9 ಮಂದಿಯಲ್ಲಿ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಉಳಿದವರಿಗೆ ತುರ್ತು ಚಿಕಿತ್ಸಾ ಘಟಕ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿದೆ.

ಸಿಡ್ನಿಯ ಪೂರ್ವ ಭಾಗದಲ್ಲಿರುವ ಬೋಂದಿ ಜಂಕ್ಷನ್‌ನಲ್ಲಿರುವ ವೆಸ್ಟ್‌ಫೀಲ್ಡ್‌ ಶಾಪಿಂಗ್‌ ಸೆಂಟರ್‌ನಲ್ಲಿ ಈ ಕೃತ್ಯ ನಡೆದಿದ್ದು, ಗಾಯಗೊಂಡವರ ಪೈಕಿ ಓರ್ವ ಮಹಿಳೆ ಮತ್ತು ಹಸುಗೂಸು ಸಹ ಸೇರಿದೆ ಎಂಬುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಗುಂಡಿಕ್ಕಿದ ಪೊಲೀಸರು:

ವ್ಯಕ್ತಿಯು ಇರಿತ ಪ್ರಾರಂಭಿಸಿದ ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಆತನತ್ತ ಗುಂಡು ಹಾರಿಸಿದ ಪರಿಣಾಮ ಇರಿದ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ.

ಕೃತ್ಯಕ್ಕೆ ಕಾರಣ ಗೊತ್ತಾಗಿಲ್ಲ:

ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ತಕ್ಷಣಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಇದು ಉಗ್ರ ಕೃತ್ಯವಂತೂ ಖಂಡಿತ ಆಗಿರಲು ಸಾಧ್ಯವಿಲ್ಲ ಎಂಬುದಾಗಿ ಸ್ಥಳೀಯ ನ್ಯೂ ಸೌತ್‌ ವೇಲ್ಸ್‌ನ ಪೊಲೀಸ್‌ ಕಮಿಷನರ್‌ ಅಂಥೋನಿ ಕುಕ್‌ ತಿಳಿಸಿದ್ದಾರೆ.

ಈ ಕೃತ್ಯಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಅಂಥೋಣಿ ಆಲ್ಬನೀಸ್‌ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ‘ಘಟನೆಯಲ್ಲಿ ನೊಂದ ಎಲ್ಲ ಆಸ್ಟ್ರೇಲಿಯನ್ನರ ಪರ ಸರ್ಕಾರ ನಿಲ್ಲುತ್ತದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

PREV

Recommended Stories

ಭಾರತದಲ್ಲಿನ ಶೇ.10 ಸಿಬ್ಬಂದಿಗೆ ಒರಾಕಲ್‌ ಕಂಪನಿ ಗೇಟ್‌ಪಾಸ್‌
ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ!