ತೆಲಂಗಾಣ ಡಿಎಸ್ಪಿ ಬಳಿ ಭರ್ಜರಿ ₹200 ಕೋಟಿ ಅಕ್ರಮ ಆಸ್ತಿ ಪತ್ತೆ!

KannadaprabhaNewsNetwork |  
Published : Jul 05, 2026, 01:45 AM IST
DSP

ಸಾರಾಂಶ

ಆದಾಯ ಅಲ್ಪವಿದ್ದರೂ 200 ಕೋಟಿ ರು. ಆಸ್ತಿ ಹೊಂದಿದ್ದ ಹೈದರಾಬಾದ್‌  ಪೊಲೀಸ್ ಉಪ ಅಧೀಕ್ಷಕ ಸಂಕಿರೆಡ್ಡಿ ಭೀಮ್ ರೆಡ್ಡಿಯನ್ನು ತೆಲಂಗಾಣ  ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಬೆಳಗಿನ ಜಾವ 5 ಗಂಟೆಗೆ ರೆಡ್ಡಿಯ ಮನೆ ಸೇರಿ ರಾಜ್ಯದ 15 ಜಾಗಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದರು.

ಹೈದರಾಬಾದ್‌: ಆದಾಯ ಅಲ್ಪವಿದ್ದರೂ 200 ಕೋಟಿ ರು. ಆಸ್ತಿ ಹೊಂದಿದ್ದ ಹೈದರಾಬಾದ್‌ನ ಪೊಲೀಸ್ ಉಪ ಅಧೀಕ್ಷಕ ಸಂಕಿರೆಡ್ಡಿ ಭೀಮ್ ರೆಡ್ಡಿಯನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.ಗುರುವಾರ ಬೆಳಗಿನ ಜಾವ 5 ಗಂಟೆಗೆ ರೆಡ್ಡಿಯ ಮನೆ ಸೇರಿ ರಾಜ್ಯದ 15 ಜಾಗಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದರು.  

ಸೇವಾವಧಿಯಲ್ಲಿ ರೆಡ್ಡಿ ಅಕ್ರಮ

ಈ ವೇಳೆ ಸೇವಾವಧಿಯಲ್ಲಿ ರೆಡ್ಡಿ ಅಕ್ರಮವಾಗಿ, ಭ್ರಷ್ಟಾಚಾರದ ಮೂಲಕ ಹಾಗೂ ಸಂಶಯಾಸ್ಪದ ರೀತಿಗಳಲ್ಲಿ ಗಳಿಸಿದ ಆಸ್ತಿಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ 200 ಕೋಟಿ ರು.ಗಿಂತಲೂ ಅಧಿಕ ಎಂದು ತಿಳಿದುಬಂದಿದೆ. 

 ಆಸ್ತಿ ಎಷ್ಟಿತ್ತು?: 

ರೆಡ್ಡಿಯವರ ಮನೆಯಲ್ಲಿ 3.60 ಲಕ್ಷ ರು. ನಗದು, 2 ಕೆ.ಜಿ. ಚಿನ್ನಾಭರಣ, 20 ಕೆ.ಜಿ. ಬೆಳ್ಳಿ, ಪತ್ತೆಯಾಗಿದೆ. ಜತೆಗೆ, 3 ವಿಲ್ಲಾ, 4 ಮಹಡಿಯ 2 ಮನೆಗಳು, 2 ಫ್ಲ್ಯಾಟ್‌, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಹಲವು ಕಟ್ಟಡಗಳ ಮಾಲೀಕರಾಗಿದ್ದಾರೆ. ಕರ್ನಾಟಕದ 2 ಕಡೆಗಳಲ್ಲಿ 46 ಎಕರೆ ಸೇರಿ ತೆಲಂಗಾಣದ ಹಲವು ಕಡೆಗಳಲ್ಲಿ ಕೃಷಿಭೂಮಿಯನ್ನು ಹೊಂದಿದ್ದಾರೆ. ಶ್ರೀ ರಾಘವೇಂದ್ರ ರಾಕ್ ಸ್ಯಾಂಡ್ ಮಿನರಲ್ಸ್ ಮೇಲೆ 75 ಲಕ್ಷ ರು. ಹೂಡಿಕೆ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿರಳೆ ಹೋರಾಟದಿಂದ ರಾಜಸ್ಥಾನ ಹಳ್ಳಿಗೆ ಸಿಕ್ಕಿತು ಹೊಸ ಶಾಲೆ ಕಟ್ಟಡ!
ಮಂಗಳೂರಿಗಾಗಿ ಕೇರಳಂ ಸಂಸದರ ಓಣಂ ನಿರಶನ!