ನವದೆಹಲಿ: ದೇಶದ 4092 ಶಾಸಕರ ಪೈಕಿ ಶೇ. 45ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದು, ಶೇ.29ರಷ್ಟು ಶಾಸಕರ ಮೇಲೆ ಗಂಭೀರ ಪ್ರಕರಣಗಳಿವೆ ಎಂದು ಎಡಿಆರ್ ಸಂಸ್ಥೆ ತನ್ನ ವಿಶ್ಲೇಷಣೆಯಲ್ಲಿ ತಿಳಿಸಿದೆ.
ದಿ ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್( ಎಡಿಆರ್) ಸಂಸ್ಥೆಯು 28 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4123 ಶಾಸಕರ ಪೈಕಿ 4092 ಶಾಸಕರು ಸಲ್ಲಿಸಿರುವ ಅಫಿಡವಿಟ್ ಪರಿಶೀಲನೆ ನಡೆಸಿದೆ. ಈ ಪೈಕಿ 1861 ಶಾಸಕರು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ. ಆ ಪೈಕಿ ಶೇ.29ರಷ್ಟು ಅಂದರೆ 1205 ಶಾಸಕರ ಮೇಲೆ ಕೊಲೆ, ಕೊಲೆ ಯತ್ನ ಸೇರಿದಂತೆಹಲವು ಗಂಭೀರ ಅಪರಾಧ ಪ್ರಕರಣಳಿವೆ ಎಂದಿದೆ. ಈ ಪೈಕಿ 54 ಶಾಸಕರು ಕೊಲೆ , 226 ಶಾಸಕರು ಕೊಲೆ ಯತ್ನ, 127 ಶಾಸಕರು ಮಹಿಳಾ ದೌರ್ಜನ್ಯ, 13 ಶಾಸಕರು ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದಾರೆ ಎಂದಿದ್ದಾರೆ..ಆಂಧ್ರ ನಂ.1:
ಇನ್ನು ಬಿಜೆಪಿಯ 1653 ಶಾಸಕರ ಪೈಕಿ 638 ಶಾಸಕರ ಮೇಲೆ ಕ್ರಿಮಿನಲ್ ಕೇಸ್ ಇದ್ದು, 436 ಮಂದಿ ಮೇಲೆ ಗಂಭೀರ ಪ್ರಕರಣವಿದೆ. ಕಾಂಗ್ರೆಸ್‌ನ 646 ಶಾಸಕರ ಪೈಕಿ 339 ಜನರ ಮೇಲೆ ಪ್ರಕರಣವಿದ್ದು, 194 ಶಾಸಕರು ಗಂಭೀರ ಸ್ವರೂಪದ ಪ್ರಕರಣ ಎದುರಿಸುತ್ತಿದ್ದಾರೆ. ಉಳಿದಂತೆ ಟಿಡಿಪಿಯ 115, ಡಿಎಂಕೆಯ 998, ಟಿಎಂಸಿಯ 95, ಆಪ್‌ನ 69, ಎಸ್‌ಪಿಯ 68 ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣವಿದೆ.