;Resize=(412,232))
ನವದೆಹಲಿ: ‘ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ತ್ವರಿತ ಬೆಳವಣಿಗೆಗಳು ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ 9 ಕೋಟಿ ಉದ್ಯೋಗಕ್ಕೆ ಕುತ್ತು ತರಲಿದೆ. ಆದರೆ ಇದೇ ವೇಳೆ ಎಐ ಆಧರಿತವಾದ 17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಬೆಳವಣಿಗೆಗಳು ಭಾರತದ ಮೇಲೂ ದೊಡ್ಡಮಟ್ಟದಲ್ಲಿ ಪರಿಣಾಮ ಬೀರಲಿದೆ’ ಎಂದು ಇನ್ಫೋಸಿಸ್‌ನ ಸಂಸ್ಥಾಪಕರ ಪೈಕಿ ಒಬ್ಬರಾದ ನಂದನ್ ನಿಲೇಕಣಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಇನ್ಫೋಸಿಸ್ ಎಐ ಹೂಡಿಕೆದಾರರ ದಿನ-2026ರಲ್ಲಿ ಮಾತನಾಡಿದ ಅವರು, ‘ಈ ಹಿಂದೆಯೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳು ಈ ವಲಯವನ್ನು ಅಸ್ತವ್ಯಸ್ಥ ಮಾಡಿದ್ದವು. ಆದರೆ ಇದೀಗ ಎಐ ವಲಯವು ಸೃಷ್ಟಿಸುತ್ತಿರುವ ತಲ್ಲಣವು ಈ ಹಿಂದಿನ ಎಲ್ಲಾ ತಲ್ಲಣಕ್ಕಿಂತಲೂ ಭಾರೀ ಪ್ರಮಾಣದಲ್ಲಿರಲಿದೆ. ಎಐ ವಲಯದಲ್ಲಿನ ಹೊಸ ಅಲೆಯು ಪ್ರತಿಭೆ ಮತ್ತು ತಾಂತ್ರಿಕ ಉದ್ಯೋಗಗಳಲ್ಲಿ ಸಂಪೂರ್ಣ ಕ್ರಾಂತಿ ಮಾಡಲಿದೆ. ಈ ಕ್ರಾಂತಿಯು ಭಾರತದಾದ್ಯಂತ ಅಪಾರ ಪ್ರಮಾಣದಲ್ಲಿ ನೇಮಕಗೊಂಡಿದ್ದ ಅನೇಕ ತಂತ್ರಜ್ಞರನ್ನು ನಿರುದ್ಯೋಗ ಸ್ಥಿತಿಗೆ ಕೊಂಡೊಯ್ಯಲಿದೆ. ಹೊಸ ಎಐ ಆಧರಿತ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಪ್ರಸ್ತುತ 9 ಕೋಟಿಗೂ ಹೆಚ್ಚು ಉದ್ಯೋಗಗಳು ಅಪಾಯದಲ್ಲಿವೆ’ ಎಂದಿದ್ದಾರೆ.
‘ಫ್ರಂಟ್-ಎಂಡ್ ಡೆವಲಪರ್‌ಗಳು, ಕ್ವಾಲಿಟಿ ಎ ಟೆಸ್ಟರ್‌ಗಳು, ಐಟಿ ಸಪೋರ್ಟ್ ಸ್ಪೆಷಲಿಸ್ಟ್‌ಗಳು, ಬ್ಲಾಕ್‌ಚೈನ್ ಡೆವಲಪರ್‌ಗಳಂತಹ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ತರಬೇತಿ ಪಡೆದ ಎಂಜಿನಿಯರ್‌ಗಳು ಇನ್ನು ಮುಂದೆ ಅಪ್ರಸ್ತುತರಾಗುತ್ತಾರೆ. ಎಐ ಫೋರೆನ್ಸಿಕ್ ವಿಶ್ಲೇಷಕರು, ಎಐ ಲೀಡ್‌ಗಳು, ಎಐ ಎಂಜಿನಿಯರ್‌ಗಳಂತಹ ಕನಿಷ್ಠ 17 ಕೋಟಿ ಹೊಸ ಉದ್ಯೋಗಗಳಿಗೆ ಎಐ ಅವಕಾಶವನ್ನು ತೆರೆಯಲಿದೆ’ ಎಂದರು.
- ಫ್ರಂಟ್-ಎಂಡ್ ಡೆವಲಪರ್‌ಗಳು
- ಕ್ವಾಲಿಟಿ ಎ ಟೆಸ್ಟರ್‌ಗಳು
- ಐಟಿ ಸಪೋರ್ಟ್ ಸ್ಪೆಷಲಿಸ್ಟ್‌ಗಳು
- ಬ್ಲಾಕ್‌ಚೈನ್ ಡೆವಲಪರ್‌ಗಳು