ಕೈ ಬನಿಯನ್‌ ಪ್ರೊಟೆಸ್ಟ್‌ನಿಂದ ಇಂಡಿಯಾ ಕೂಟದಲ್ಲಿ ಒಡಕು!

KannadaprabhaNewsNetwork |  
Published : Feb 24, 2026, 04:30 AM ISTUpdated : Feb 24, 2026, 04:47 AM IST
MARGARET ALVA

ಸಾರಾಂಶ

ಕಳೆದ ವಾರ ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಶರ್ಟ್‌ ಬಿಚ್ಚಿ, ಬನಿಯನ್‌ ಮೂಲಕ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರ ನಡೆಗೆ ಇಂಡಿಯಾ ಕೂಟದಲ್ಲೇ ಅಪಸ್ವರ ಎದ್ದಿದ್ದು, ಮೈತ್ರಿಕೂಟದಲ್ಲಿ ಬಿರುಕು ಮೂಡುವ ಆತಂಕ ಸೃಷ್ಟಿಯಾಗಿದೆ.

 ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಶರ್ಟ್‌ ಬಿಚ್ಚಿ, ಬನಿಯನ್‌ ಮೂಲಕ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರ ನಡೆಗೆ ಇಂಡಿಯಾ ಕೂಟದಲ್ಲೇ ಅಪಸ್ವರ ಎದ್ದಿದ್ದು, ಮೈತ್ರಿಕೂಟದಲ್ಲಿ ಬಿರುಕು ಮೂಡುವ ಆತಂಕ ಸೃಷ್ಟಿಯಾಗಿದೆ.

ಮಾರ್ಗರೇಟ್ ಆಳ್ವಾ ಕಾರ್ಯಕರ್ತರ ನಡೆಯನ್ನು ಖಂಡಿಸಿದರು

ಖುದ್ದು ಕಾಂಗ್ರೆಸ್‌ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಕಾರ್ಯಕರ್ತರ ನಡೆಯನ್ನು ಖಂಡಿಸಿದ್ದು, ‘ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ವಿರುದ್ಧ ಪ್ರತಿಭಟನೆಗಳ ವಿಷಯಕ್ಕೆ ಬಂದಾಗ ಶಿಸ್ತು ಮತ್ತು ಜವಾಬ್ದಾರಿ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ’ ಎಂದಿದ್ದಾರೆ. ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್‌ ಮತ್ತು ಆದಿತ್ಯ ಠಾಕ್ರೆ ಯುವ ಕಾಂಗ್ರೆಸ್ಸಿಗರ ವರ್ತನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದರೆ, ಪಶ್ಚಿಮ ಬಂಗಾಳದ ಐಟಿ ಸಚಿವ ಬಾಬುಲ್‌ ಸುಪ್ರಿಯೊ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು, ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿ ಈ ಮೊದಲೇ ಕಾಂಗ್ರೆಸ್ ನಡೆ ವಿರೋಧಿಸಿವೆ.

ಮತ್ತೆ ಮೂವರು ವಶಕ್ಕೆ:

ಬನಿಯನ್‌ ಪ್ರತಿಭಟನೆಗೆ ಸಂಬಂಧಿಸಿ ಇನ್ನೂ 3 ಯುವ ಕಾಂಗ್ರೆಸ್ಸಿಗರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 7ಕ್ಕೇರಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಉದಯ ಭಾನು ಚಿಬ್‌ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಐತಿಹಾಸಿಕ ರಣಜಿ ಕಿರೀಟ ಮೇಲೆ ಕರ್ನಾಟಕ ಕಣ್ಣು
26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ