ಕಳೆದ 25 ವರ್ಷಗಳಲ್ಲಿ ಬೆಂಗಳೂರು ಪರಿಸ್ಥಿತಿ ಗಂಭೀರ
ಅಮೆರಿಕದ ಷಿಕಾಗೋ ವಿವಿಯ ‘ವಾಯುಗುಣಮಟ್ಟ ಜೀವನ ಸೂಚ್ಯಂಕ’ವರದಿಯಲ್ಲಿ ಈ ಆತಂಕಕಾರಿ ಅಂಶಗಳಿವೆ. ವರದಿ ಅನ್ವಯ, 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದ್ದ ವಾಯುಮಾಲಿನ್ಯವು ಜನರ ಆಯುಷ್ಯವನ್ನು ಸರಾಸರಿ 8 ತಿಂಗಳು ಕಡಿಮೆ ಮಾಡುತ್ತಿತ್ತು. ಆದರೆ ಆ ಪ್ರಮಾಣ ಇದೀಗ 2 ವರ್ಷಕ್ಕೆ ಏರಿಕೆ ಕಂಡಿದೆ.
ಮಾಹಿತಿ ತಂತ್ರಜ್ಞಾನ ಭಾರೀ ಅಭಿವೃದ್ಧಿ ಕಾಣಲು ಆರಂಭಕ್ಕಿಂತ ಮೊದಲಿನ ಸಮಯವಾದ 1998ರಲ್ಲಿ ಬೆಂಗಳೂರಿನಲ್ಲಿ ಪಿಎಂ 2.5 ಪ್ರಮಾಣವು ಪ್ರತಿ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ 13.1 ಮೈಕ್ರೋ ಗ್ರಾಂ ಇತ್ತು. 2023ರಲ್ಲಿ ಅದು 26.21 ಮೈಕ್ರೋಗ್ರಾಂಗೆ ಏರಿದೆ. ಅಂದರೆ 25 ವರ್ಷದಲ್ಲಿ ವಾಯುಮಾಲಿನ್ಯ ದ್ವಿಗುಣವಾಗಿದೆ. ಬೆಂಗಳೂರು ಮಾತ್ರವಲ್ಲದೇ ಇತರೆ ಹಲವು ಜಿಲ್ಲೆಗಳಲ್ಲೂ ಮಾಲಿನ್ಯ ಗಂಭೀರ ಪ್ರಮಾಣದಲ್ಲಿ ಏರಿದೆ. ಉದಾಹರಣೆಗೆ ಕಲಬುರಗಿಯಲ್ಲಿ 26.31, ಬೀದರ್‌ನಲ್ಲಿ 25.01, ಬೆಳಗಾವಿಯಲ್ಲಿ 23.72 ಮೈಕ್ರೋಗ್ರಾಂ ದಾಖಲಾಗಿದೆ ಎಂದು ವರದಿ ಹೇಳಿದೆ.ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲೂ ಪಿಎಂ 2.5 ಪ್ರಮಾಣವು ದ್ವಿಗುಣಗೊಂಡಿದೆ ಎಂದು ವರದಿ ಎಚ್ಚರಿಸಿದೆ.