ಅಜಿತ್‌ ಪವಾರ್‌ ಪಕ್ಷದಿಂದ 11 ಗ್ಯಾರಂಟಿ

KannadaprabhaNewsNetwork |  
Published : Nov 06, 2024, 11:53 PM IST
ಡಿಸಿಎಂ ಅಜಿತ್‌ ಪವಾರ್‌  | Kannada Prabha

ಸಾರಾಂಶ

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂ ಅಜಿತ್‌ ಪವಾರ್‌ ಬಣದ ಎನ್‌ಸಿಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 11 ಗ್ಯಾರಂಟಿಗಳನ್ನು ಘೋಷಿಸಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂ ಅಜಿತ್‌ ಪವಾರ್‌ ಬಣದ ಎನ್‌ಸಿಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 11 ಗ್ಯಾರಂಟಿಗಳನ್ನು ಘೋಷಿಸಿದೆ.

ಈ ಪ್ರಣಾಳಿಕೆಯನ್ನು ಬಾರಾಮತಿಯಲ್ಲಿ ಅಜಿತ್‌ ಪವಾರ್‌, ಮುಂಬೈನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನಿಲ್‌ ತತ್ಕರೆ, ಗೊಂಡಿಯಾದಲ್ಲಿ ಕಾರ್ಯಾಧ್ಯಕ್ಷ ಪ್ರಫುಲ್‌ ಪಟೇಲ್‌ ಪ್ರತ್ಯೇಕವಾಗಿ ಬಿಡುಗಡೆ ಮಾಡಿದರು. - ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್‌ ಯೋಜನೆಯಡಿ ರಾಜ್ಯದ 2.3 ಕೋಟಿ ಮಹಿಳೆಯರಿಗೆ ಮಾಸಾಶನ ಹಾಲಿ 1500 ರು.ನಿಂದ 2100 ರು.ಗೆ ಏರಿಕೆ

-ಕೇಂದ್ರ ಹಾಗೂ ರಾಜ್ಯದ ನಿಧಿಯನ್ನು ಸಂಯೋಜಿಸಿ, ರೈತ ಸಮ್ಮಾನ್‌ ನಿಧಿಯ ಮೊತ್ತ 12,000 ರು.ನಿಂದ 15,000 ರು.ಗೆ ಹೆಚ್ಚಳ- ಅರ್ಹ ರೈತರ ಸಾಲ ಮನ್ನಾ: ಭತ್ತ ಬೆಳೆಗಾರರಿಗೆ ಪ್ರತಿ ಎಕರೆಗೆ 25,000 ರು. ಬೋನಸ್‌

- ಕನಿಷ್ಠ ಬೆಂಬಲ ಬೆಲೆಯ ಅಡಿ ಮಾರಾಟವಾಗುವ ಬೆಳೆಗಳಿಗೆ ಶೇ.20ರಷ್ಟು ಹೆಚ್ಚುವರಿ ಸಬ್ಸಿಡಿ- ಗ್ರಾಮೀಣ ಕೃಷಿ ಮೂಲಸೌಕರ್ಯ ಬಲವರ್ಧನೆಗೆ 45,000 ಪಕ್ಕಾ ರಸ್ತೆಗಳ ಅಭಿವೃದ್ಧಿ - ರಾಜ್ಯಾದ್ಯಂತ 25 ಲಕ್ಷ ಉದ್ಯೋಗ ಸೃಷ್ಟಿ - ವೃತ್ತಿಪರ ತರಬೇತಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ 10,000 ರು. ಸ್ಟೈಫಂಡ್ - ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರು. ವೇತನ- ವಿದ್ಯುತ್‌ ಬಿಲ್‌ಗಳನ್ನು ಶೇ.30ರಷ್ಟು ಕಡಿಮೆ ಮಾಡಿ, ವಿದ್ಯುತ್‌ ಹಾಗೂ ನವೀಕರಿಸಬಹುದಾದ ಶಕ್ತಿ ಮೂಲಗಳಿಗೆ ಆದ್ಯತೆ- ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ