ಸೋದರಿ ಸುಪ್ರಿಯಾ ವಿರುದ್ಧ ಪತ್ನಿ ಸುನೇತ್ರಾ ಕಣಕ್ಕಿಳಿಸಲು ಅಜಿತ್ ಪವಾರ್‌ ಯೋಜನೆ

KannadaprabhaNewsNetwork |  
Published : Feb 18, 2024, 01:36 AM ISTUpdated : Feb 18, 2024, 02:29 PM IST
ಸುನೇತ್ರಾ | Kannada Prabha

ಸಾರಾಂಶ

ಬಾರಾಮತಿಯಲ್ಲಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಅವರನ್ನು ನಿಲ್ಲಿಸುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಘೋಷಿಸಿದ್ದಾರೆ.

ಬಾರಾಮತಿ: ಮಹಾರಾಷ್ಟ್ರದಲ್ಲಿ ಚುನಾವಣಾ ಕಣ ರಂಗೇರುತ್ತಿರುವ ನಡುವೆಯೇ ಎನ್‌ಸಿಪಿ (ಶರಚ್ಚಂದ್ರ ಪವಾರ್‌ ಬಣ) ನಾಯಕ ಶರದ್‌ ಪವಾರ್‌ರ ಪುತ್ರಿ ಮತ್ತು ಸೋದರ ಸಂಬಂಧಿಯೂ ಆದ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಅವರನ್ನೇ ಅವರನ್ನು ಲೋಕಸಭೆಯಲ್ಲಿ ಕಣಕ್ಕಿಳಿಸುವುದಾಗಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಘೋಷಿಸಿದ್ದಾರೆ.

ಈ ಕುರಿತು ನಗರದಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡುತ್ತಾ, ‘ಈ ಬಾರಿ ಚುನಾವಣೆಯಲ್ಲಿ ತನ್ನ ಪತ್ನಿ ಸುನೇತ್ರಾ ಅವರನ್ನು ಕಣಕ್ಕಿಳಿಸಲಿದ್ದು, ಅವರನ್ನು ಗೆಲ್ಲಿಸುವ ಮೂಲಕ ನೀವೆಲ್ಲರೂ ನನಗೆ ಆಶೀರ್ವದಿಸಬೇಕು.

ಲೋಕಸಭೆಯಲ್ಲಿ ಸುನೇತ್ರಾ ಗೆಲ್ಲದಿದ್ದರೆ ಮುಂದೆ ನಾನು ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ’ ಎಂದು ಜನತೆಯ ಮುಂದೆ ಶಪಥ ಮಾಡಿದ್ದಾರೆ.

ಅಜಿತ್ ಪವಾರ್‌ ಅವರ ಹೇಳಿಕೆಯನ್ನು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಸ್ವಾಗತಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !