ಸಾರಾಂಶ
‘ಭಾರತೀಯ ಸೇನೆಯ ಮೇಲೆ ದೇಶದ ಒಟ್ಟು ಜನಸಂಖ್ಯೆಯಲ್ಲಿನ ಶೇ.10ರಷ್ಟು ಜನರು ಮಾತ್ರ ನಿಯಂತ್ರಣ ಹೊಂದಿದ್ದಾರೆ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ, ಸೇನೆಯಲ್ಲಿ ಅವರು ಮೀಸಲಾತಿಗೆ ಕರೆ ನೀಡುತ್ತಿದ್ದಾರೆಯೇ ಎಂದು ವಿಶ್ಲೇಷಿಸಲಾಗುತ್ತಿದೆ.
--
ಕುಟುಂಬಾ (ಬಿಹಾರ): ‘ಭಾರತೀಯ ಸೇನೆಯ ಮೇಲೆ ದೇಶದ ಒಟ್ಟು ಜನಸಂಖ್ಯೆಯಲ್ಲಿನ ಶೇ.10ರಷ್ಟು ಜನರು ಮಾತ್ರ ನಿಯಂತ್ರಣ ಹೊಂದಿದ್ದಾರೆ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ, ಸೇನೆಯಲ್ಲಿ ಅವರು ಮೀಸಲಾತಿಗೆ ಕರೆ ನೀಡುತ್ತಿದ್ದಾರೆಯೇ ಎಂದು ವಿಶ್ಲೇಷಿಸಲಾಗುತ್ತಿದೆ. ರಾಹುಲ್ ಮಾತಿನ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳವಾರ ಬಿಹಾರ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ‘ಸಮಾಜದ ಶೇ.90ರಷ್ಟು ಜನ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳೇ ಆಗಿದ್ದಾರೆ. ಆದರೆ ದೇಶದ ಅತಿದೊಡ್ಡ 500 ಕಂಪನಿಗಳ ಪಟ್ಟಿಯಲ್ಲಿ ಈ ವರ್ಗಗಳಿಗೆ ಸೇರಿದ ಒಬ್ಬರೂ ಸಿಗುವುದಿಲ್ಲ. ಬದಲಿಗೆ, ಈ ಸ್ಥಾನಗಳಲ್ಲಿ ಭಾರತದ ಜನಸಂಖ್ಯೆಯ ಕೇವಲ ಶೇ.10ರಷ್ಟಿರುವ (ಮೇಲ್ವರ್ಗದ) ಜನರೇ ಇದ್ದಾರೆ. ಬ್ಯಾಂಕಿನ ಹಣ, ಉದ್ಯೋಗ, ನ್ಯಾಯಾಂಗ ಹಾಗೂ ಸರ್ಕಾರದಲ್ಲೂ ಇವರದ್ದೇ ಪ್ರಾಬಲ್ಯವಿದೆ’ ಎಂದು ಆರೋಪಿಸಿದರು.
ಜನಸಂಖ್ಯೆಯಲ್ಲಿ ಶೇ.10 ಪಾಲು ಹೊಂದಿರುವ ಜನರೇ
ಇದೇ ವೇಳೆ, ‘ಭಾರತೀಯ ಸೇನೆಯಲ್ಲೂ ಉನ್ನತ ಹುದ್ದೆಗಳಲ್ಲಿ ಇರುವವರು ಕೂಡ ಜನಸಂಖ್ಯೆಯಲ್ಲಿ ಶೇ.10 ಪಾಲು ಹೊಂದಿರುವ ಜನರೇ ಆಗಿದ್ದಾರೆ’ ಎಂದು ಮೇಲ್ವರ್ಗದ ಹೆಸರೆತ್ತದೇ ಪರೋಕ್ಷವಾಗಿ ಹೇಳಿದರು.ಈ ಮೊದಲು ಸಹ ರಾಹುಲ್, ‘ಭಾರತೀಯ ಸೈನಿಕರು ಚೀನಾ ಯೋಧರಿಂದ ಹೊಡೆಸಿಕೊಂಡರು’ ಎಂದು ಹೇಳಿ ಭಾರೀ ಟೀಕೆಗೆ ಗುರಿಯಾಗಿದ್ದರು. ಈಗ ಸೇನೆಯಲ್ಲಿ ಜಾತಿಯ ಬಗ್ಗೆ ಮಾತನಾಡಿದ್ದಾರೆ.
ಸೇನೆಯಲ್ಲೂ ಜಾತಿಹುಡುಕಬೇಡಿ
: ಬಿಜೆಪಿರಾಹುಲ್ ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕ ಸುರೇಶ್ ನಾಖುವಾ ಪ್ರತಿಕ್ರಿಯಿಸಿ, ‘ರಾಹುಲ್ ಈಗ ಸೇನೆಯಲ್ಲೂ ಜಾತಿಯನ್ನು ಹುಡುಕುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ದ್ವೇಷಿಸುವ ಭರದಲ್ಲಿ ಅವರು ಈಗಾಗಲೇ ದೇಶವನ್ನೂ ದ್ವೇಷ ಮಾಡುವ ಮಿತಿಯನ್ನು ದಾಟಿಬಿಟ್ಟಿದ್ದಾರೆ’ ಎಂದು ಕಿಡಿಕಾರಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))