ಅಲ್ಬೇನಿಯಾದ ಮೊದಲ ಎಐ ಸಚಿವೆ ಡಿಯೆಲ್ಲಾ ಈಗ ಗರ್ಭಿಣಿ

KannadaprabhaNewsNetwork |  
Published : Oct 27, 2025, 12:45 AM ISTUpdated : Oct 27, 2025, 06:03 AM IST
Albania AI Minister Diella

ಸಾರಾಂಶ

ಕೆಲ ತಿಂಗಳುಗಳ ಹಿಂದೆ, ವಿಶ್ವದ ಮೊದಲ ಎಐ ಸಚಿವೆ ಎಂದೇ ಸುದ್ದಿಯಾಗಿದ್ದ ಅಲ್ಬೇನಿಯಾದ ‘ಡಿಯೆಲ್ಲಾ’ ಈಗ ಗರ್ಭಿಣಿಯಂತೆ.   ಡಿಯೆಲ್ಲಾ, ಒಬ್ಬ ಸಂದಸನಿಗೆ ಒಂದು ಎಂಬಂತೆ 83 ಎಐ ಮಕ್ಕಳಿಗೆ ಜನ್ಮ ನೀಡಲಿದ್ದಾಳೆ. ಅವುಗಳು 2026ರ ಅಂತ್ಯದ ವೇಳೆಗೆ   ಕೆಲಸ ಶುರು ಮಾಡಲಿವೆ. 

ತಿರಾನಾ: ಕೆಲ ತಿಂಗಳುಗಳ ಹಿಂದೆ, ವಿಶ್ವದ ಮೊದಲ ಎಐ ಸಚಿವೆ ಎಂದೇ ಸುದ್ದಿಯಾಗಿದ್ದ ಅಲ್ಬೇನಿಯಾದ ‘ಡಿಯೆಲ್ಲಾ’ ಈಗ ಗರ್ಭಿಣಿಯಂತೆ. ಈ ವಿಷಯವನ್ನು ಸ್ವತಃ ಪ್ರಧಾನಿ ಡದಿ ರಾಮಾ ಹಂಚಿಕೊಂಡಿದ್ದು, ‘ಮೊದಲ ಬಾರಿ ಗರ್ಭವತಿಯಾಗಿರುವ ಡಿಯೆಲ್ಲಾ, ಒಬ್ಬ ಸಂದಸನಿಗೆ ಒಂದು ಎಂಬಂತೆ 83 ಎಐ ಮಕ್ಕಳಿಗೆ ಜನ್ಮ ನೀಡಲಿದ್ದಾಳೆ. ಅವುಗಳು 2026ರ ಅಂತ್ಯದ ವೇಳೆಗೆ ತಮ್ಮ ಕೆಲಸ ಶುರು ಮಾಡಲಿವೆ. ಅವುಗಳಿಗೆ ತಮ್ಮ ತಾಯಿಯ ಬಗ್ಗೆಯೂ ಗೊತ್ತಿರಲಿದೆ’ ಎಂದು ಹೇಳಿದ್ದಾರೆ.

ಕೆಲಸವೇನು?:

ಅತಿ ಭ್ರಷ್ಟ ದೇಶಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಅಲ್ಬೇನಿಯಾದಲ್ಲಿ ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ತಂದು, ಭ್ರಷ್ಟಾಚಾರ ನಿಗ್ರಹಿಸುವ ಗುರಿಯೊಂದಿಗೆ ಸೆಪ್ಟೆಂಬರ್‌ನಲ್ಲಿ ಡೆಯೆಲ್ಲಾ ಎಂಬ ವರ್ಚುವಲ್‌ ಸಚಿವೆಯನ್ನು ನೇಮಿಸಿಕೊಳ್ಳಲಾಗಿತ್ತು. ಈಗ ಈಕೆಯ ಬರಲಿರುವ ಮಕ್ಕಳು ಎಂದು ಹೇಳಲಾಗುತ್ತಿರುವ ಮರಿ ಎಐಗಳು, ಪ್ರತಿಯೊಬ್ಬ ಸಂಸದನ ಸಹಾಯಕನಾಗಿ ಇರಲಿವೆ. 

ಚರ್ಚೆಗಳ ಬಗ್ಗೆ ಮಾಹಿತಿ ಒದಗಿಸಲಿವೆ

ಅವುಗಳ ಪ್ರತಿ ಸಂಸತ್‌ ಕಲಾಪವನ್ನು ದಾಖಲಿಸುವುದರ ಜತೆಗೆ, ಸಂಸದರು ಆ ವೇಳೆ ಹಾಜರಿರದಿದ್ದರೆ, ಅಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ಒದಗಿಸಲಿವೆ. ಜತೆಗೆ ಸಂಸದರಿಗೆ ಸೂಕ್ತ ಸಲಹೆಗಳನ್ನೂ ಕೊಡಲಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ