ಮೊದಲ ಬಾರಿ ಅದಾನಿ-ಅಂಬಾನಿ ಔದ್ಯಮಿಕ ಬೆಸುಗೆ

KannadaprabhaNewsNetwork |  
Published : Mar 29, 2024, 01:02 AM ISTUpdated : Mar 29, 2024, 03:48 PM IST
ಅಂಬಾನಿ - ಅದಾನಿ | Kannada Prabha

ಸಾರಾಂಶ

ಭಾರತೀಯ ಔದ್ಯಮಿಕ ದಿಗ್ಗಜರಾದ ಮುಕೇಶ್‌ ಅಂಬಾನಿ- ಗೌತಮ್‌ ಅದಾನಿ ಮೊದಲ ಬಾರಿಗೆ ಔದ್ಯಮಿಕವಾಗಿ ಬಾಂಧವ್ಯ ಬೆಳೆಸಿದ್ದಾರೆ.

ನವದೆಹಲಿ: ಭಾರತೀಯ ಔದ್ಯಮಿಕ ದಿಗ್ಗಜರಾದ ಮುಕೇಶ್‌ ಅಂಬಾನಿ- ಗೌತಮ್‌ ಅದಾನಿ ಮೊದಲ ಬಾರಿಗೆ ಔದ್ಯಮಿಕವಾಗಿ ಬಾಂಧವ್ಯ ಬೆಳೆಸಿದ್ದಾರೆ. ಅದಾನಿ ಪವರ್‌ ಲಿಮಿಟೆಡ್‌ ಅಂಗಸಂಸ್ಥೆಯಾಗಿರುವ ಮಹಾನ್‌ ಎನರ್ಜೆನ್‌ ಪ್ರಾಜೆಕ್ಟ್‌ನಲ್ಲಿ ಶೇ. 26ರಷ್ಟು ಷೇರುಗಳನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಅಂಬಾನಿ ಖರೀದಿಸಿದ್ದಾರೆ.

ಇದರ ಮೂಲಕ ಅಂಬಾನಿ ಸಮೂಹವು ಮಧ್ಯಪ್ರದೇಶದಲ್ಲಿ ಅದಾನಿ ಸಮೂಹದ ಉಷ್ಣ ಸ್ಥಾವರದಿಂದ 500 ಮೆಗಾವ್ಯಾಟ್‌ ಸಾಮರ್ಥ್ಯದ ಶಕ್ತಿ ಸ್ಥಾವರವನ್ನು ಬಳಸಿಕೊಳ್ಳಬಹುದಾಗಿದೆ. ರಿಲಯನ್ಸ್‌ ಇದರಲ್ಲಿ ತಲಾ 10 ರು. ಮೌಲ್ಯದ 50 ಕೋಟಿ ಷೇರುಗಳನ್ನು ಖರೀದಿಸಿದೆ.

ಇದಕ್ಕೂ ಮೊದಲು ಅದಾನಿಯವರು ಅನಂತ್‌ ಅಂಬಾನಿಯವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.

PREV

Recommended Stories

ಭಾರತದಲ್ಲಿನ ಶೇ.10 ಸಿಬ್ಬಂದಿಗೆ ಒರಾಕಲ್‌ ಕಂಪನಿ ಗೇಟ್‌ಪಾಸ್‌
ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ!