ಮಗ, ಸೊಸೆಗೆ ಅಂಬಾನಿ ದಂಪತಿ ₹640 ಕೋಟಿ ದುಬೈ ವಿಲ್ಲಾ ಗಿಫ್ಟ್‌!

KannadaprabhaNewsNetwork |  
Published : Jul 08, 2024, 12:36 AM ISTUpdated : Jul 08, 2024, 04:59 AM IST
ದುಬೈ | Kannada Prabha

ಸಾರಾಂಶ

ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದ್ದು, ಅದರ ಬೆನ್ನಲ್ಲೇ ತಮ್ಮ ಮಗ ಮತ್ತು ಸೊಸೆಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ ಉಡುಗೊರೆ ನೀಡಿದ್ದಾರೆ.

ಮುಂಬೈ: ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದ್ದು, ಅದರ ಬೆನ್ನಲ್ಲೇ ತಮ್ಮ ಮಗ ಮತ್ತು ಸೊಸೆಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ ಉಡುಗೊರೆ ನೀಡಿದ್ದಾರೆ.

ಅನಂತ್‌ ಜೋಡಿಗೆ ದುಬೈನ ಪಾಮ್‌ ಜುಮೈರಾದಲ್ಲಿರುವ ಬರೋಬ್ಬರಿ ₹640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆಯಾಗಿ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದು ದುಬೈನ ಅತಿ ದುಬಾರಿ ವಿಲ್ಲಾಗಳ ಪೈಕಿ ಒಂದಾಗಿದ್ದು, ಬರೋಬ್ಬರಿ 3 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. 10 ಬೆಡ್‌ರೂಂ, ಹಲವು ಕೊಠಡಿ, 70 ಮೀ. ಉದ್ದದ ಖಾಸಗಿ ಬೀಚ್‌ ಜೊತೆಗೆ ಅತ್ಯಾಕರ್ಷಕ ಒಳಾಂಗಣ ವಿನ್ಯಾಸವನ್ನು ಈ ವಿಲ್ಲಾ ಹೊಂದಿದೆ ಎನ್ನಲಾಗಿದೆ.

ಅನಂತ್‌ ಮತ್ತು ರಾಧಿಕಾ ಜು.12ರಂದು ಮುಂಬೈನಲ್ಲಿ ವಿವಾಹವಾಗಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ
ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ