ಇಸ್ರೋ ನೌಕೆಯಲ್ಲಿ ಕಳಿಸಿದ್ದ ಪೇಲೋಡ್‌ನಲ್ಲಿಡಲಾದ ಪಾಲಕ್‌ ಗಿಡದ ದಂಟಲ್ಲೂ ಜೀವಕೋಶ ಬೆಳವಣಿಗೆ ಪತ್ತೆ

KannadaprabhaNewsNetwork |  
Published : Jan 14, 2025, 01:00 AM ISTUpdated : Jan 14, 2025, 04:27 AM IST
ಇಸ್ರೋ | Kannada Prabha

ಸಾರಾಂಶ

ಮುಂಬೈನ ಅಮಿಟಿ ವಿವಿಯು, ಇಸ್ರೋದ ನೆರವಿನೊಂದಿಗೆ ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಪೇಲೋಡ್‌ನಲ್ಲಿಡಲಾದ ಪಾಲಕ್‌ ಗಿಡದ ದಂಟಲ್ಲಿ ಜೀವಕೋಶಗಳ ಬೆಳವಣಿಗೆಯ ಲಕ್ಷಣ ಗೋಚರಿಸಿದೆ.

ನವದೆಹಲಿ: ಮುಂಬೈನ ಅಮಿಟಿ ವಿವಿಯು, ಇಸ್ರೋದ ನೆರವಿನೊಂದಿಗೆ ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಪೇಲೋಡ್‌ನಲ್ಲಿಡಲಾದ ಪಾಲಕ್‌ ಗಿಡದ ದಂಟಲ್ಲಿ ಜೀವಕೋಶಗಳ ಬೆಳವಣಿಗೆಯ ಲಕ್ಷಣ ಗೋಚರಿಸಿದೆ. ಇದೇ ಯೋಜನೆಯ ಭಾಗವಾಗಿ ಇಸ್ರೋ ಕಳುಹಿಸಿದ್ದ ಹಲಸಂದೆ ಬೀಜಗಳು ಇತ್ತೀಚೆಗೆ ಮೊಳಕೆಯೊಡೆದು ಎಲೆಯಾಗಿ ಅರಳಿದ ವಿಷಯವನ್ನು ಇಸ್ರೋ ಇತ್ತೀಚೆಗೆ ಹಂಚಿಕೊಂಡಿತ್ತು.

ಇಸ್ರೋ ಮೂಲಕ ಪಡೆದ ಪ್ರಾಥಮಿಕ ಡೇಟಾಗಳ ಪ್ರಕಾರ ಪಾಲಕ್‌ ದಂಟಿನಲ್ಲಿ ಬೆಳವಣಿಗೆಯ ಲಕ್ಷಣಗಳು ಕಾಣಿಸಿವೆ ಎಂದು ವಿವಿಯ ವಿಸಿ, ವಿಜ್ಞಾನಿ ಎ.ಡಬ್ಲ್ಯು. ಸಂತೋಷ್‌ ಕುಮಾರ್‌ ತಿಳಿಸಿದ್ದಾರೆ

ದುರ್ಬಲ ಗುರುತ್ವಾಕರ್ಷಣ ಶಕ್ತಿಯಡಿ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಕ್ರಿಯೆಯು ಬಾಹ್ಯಾಕಾಶ ಜೈವಿಕ ಸಂಶೋಧನೆ ಪಾಲಿಗೆ ಮಹತ್ವದ್ದಾಗಿದೆ. ಅದರಲ್ಲೂ ಪಾರಂಪರಿಕ ಬೀಜಗಳ ಬದಲು ದಂಟುಗಳನ್ನು ಬಾಹ್ಯಾಕಾಶದಲ್ಲಿ ಬೆಳೆಸುವುದರಿಂದ ಸಂಶೋಧಕರಿಗೆ ಕಲರ್‌ ಮಾನಿಟರಿಂಗ್‌ ಮೂಲಕ ಅದರ ಆರೋಗ್ಯದ ಮೇಲೆ ಸುಲಭವಾಗಿ ನಿಗಾ ಇಡಲು ಸಾಧ್ಯವಿದೆ.

ಪಾಲಕ್‌ ಯಾಕೆ?: ಅಲ್ಲದೆ ಪಾಲಕ್‌ ಜೀವಕೋಶಗಳು ಶೀಘ್ರವಾಗಿ ಬೆಳೆಯುತ್ತವೆ ಮತ್ತು ಬೀಜಗಳಿಗೆ ಹೋಲಿಸಿದರೆ ಅದರ ಬೆಳವಣಿಗೆಯನ್ನು ಸುಲಭವಾಗಿ ಅಳೆಯಬಹುದು.

ಸೆನ್ಸೆಕ್ಸ್‌ 1129 ಅಂಕಗಳ ಕುಸಿತ: ಹೂಡಿಕೆದಾರರಿಗೆ 14 ಲಕ್ಷ ಕೋಟಿ ರು.ನಷ್ಟು

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 1129 ಅಂಕಗಳ ಭಾರೀ ಕುಸಿತ ಕಂಡು 76249 ಅಂಕಗಳಲ್ಲಿ ಮುಕ್ತಾಯವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 345 ಅಂಕ ಕುಸಿದು 23085ರಲ್ಲಿ ಕೊನೆಗೊಂಡಿದೆ.

ಸೋಮವಾರ ಷೇರುಪೇಟೆಯ ಭಾರೀ ಕುಸಿತದ ಕಾರಣ ಹೂಡಿಕೆದಾರರಿಗೆ 14 ಲಕ್ಷ ಕೋಟಿ ರು.ನಷ್ಟು ಭಾರೀ ನಷ್ಟವಾಗಿದೆ. ಕಳೆದ 4 ದಿನಗಳಲ್ಲಿ ಸೂಚ್ಯಂಕ ಒಟ್ಟಾರೆ 1869 ಅಂಕ ಕುಸಿದ ಕಾರಣ ಹೂಡಿಕೆದಾರರ 25 ಲಕ್ಷ ಕೋಟಿ ರು.ನಷ್ಟು ಸಂಪತ್ತು ಕರಗಿ ಹೋಗಿದೆ.ಅಮೆರಿಕದಲ್ಲಿ ಬಡ್ಡಿದರ ಕಡಿತ ಸಾಧ್ಯತೆ ದೂರವಾಗಿದ್ದು, ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದ ಹಣ ಹಿಂಪಡೆಯುತ್ತಿರುವುದು, ಕಚ್ಚಾತೈಲದ ಬೆಲೆ ಇಳಿಕೆ, ಕಂಪನಿಗಳ ವಹಿವಾಟು ಮತ್ತು ಲಾಭದ ಪ್ರಮಾಣದಲ್ಲಿ ಇಳಿಕೆ ಮತ್ತು ಜಾಗತಿಕ ಷೇರುಪೇಟೆಯ ಒತ್ತಡವು ಭಾರತೀಯ ಷೇರುಪೇಟೆಯ ಮೇಲೂ ಪ್ರಭಾವ ಬೀರಿ ಭಾರೀ ಕುಸಿತಕ್ಕೆ ನಾಂದಿ ಹಾಡಿತು.

PREV

Recommended Stories

ಬಂಗಾಳದ ಹಿಂದಿ ವಿರೋಧಿ ಪ್ರತಿಭಟನೆಯಲ್ಲಿ ಕುವೆಂಪು
ಬೆಟ್ಟಿಂಗ್‌ ಆ್ಯಪ್‌ ಕೇಸ್‌ : ನಟಿ ಊರ್ವಶಿ, ಮಿಮಿ ಚಕ್ರವರ್ತಿಗೆ ಇಡಿ ಸಮನ್ಸ್‌