180 ಅಪ್ರಾಪ್ತೆಯರ ಫೋಟೋ ಬಳಸಿ 19ರ ತನ್ವೀರ್‌ನಿಂದ ಬ್ಲ್ಯಾಕ್‌ಮೇಲ್‌

KannadaprabhaNewsNetwork |  
Published : Apr 16, 2026, 01:45 AM IST
Thanveer

ಸಾರಾಂಶ

  180ಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳ ಅಶ್ಲೀಲ ಚಿತ್ರ ಸೆರೆಹಿಡಿದ 19 ವರ್ಷದ ಅಯಾನ್ ಅಹ್ಮದ್ ತನ್ವೀರ್‌ ಎಂಬಾತ ಹೆಣ್ಣುಮಕ್ಕಳನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆತಂಕಕಾರಿ ಪ್ರಕರಣ ಮಹಾರಾಷ್ಟ್ರದ ಅಮರಾವತಿಯಲ್ಲಿ ಬೆಳಕಿಗೆ ಬಂದಿದೆ. 

 ಅಮರಾವತಿ: ಮಹಾರಾಷ್ಟ್ರದ ನಾಸಿಕ್‌ ಟಿಸಿಎಸ್‌ನ ಬಿಪಿಒನಲ್ಲಿ ಬೆಚ್ಚಿಬೀಳಿಸುವ ಕಾರ್ಪೊರೆಟ್‌ ಜಿಹಾದ್‌ ಬೆಳಕಿಗೆ ಬಂದ ಬೆನ್ನಲ್ಲೇ 180ಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳ ಅಶ್ಲೀಲ ಚಿತ್ರ ಸೆರೆಹಿಡಿದ 19 ವರ್ಷದ ಅಯಾನ್ ಅಹ್ಮದ್ ತನ್ವೀರ್‌ ಎಂಬಾತ ಹೆಣ್ಣುಮಕ್ಕಳನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆತಂಕಕಾರಿ ಪ್ರಕರಣ ಮಹಾರಾಷ್ಟ್ರದ ಅಮರಾವತಿಯಲ್ಲಿ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಮನೆಯನ್ನು ಬುಲ್ಡೋಜರ್‌ ಬಳಸಿ ನೆಲಸಮ ಮಾಡಲಾಗಿದೆ.

ಏನಿದು ಪ್ರಕರಣ?:

ವಾಟ್ಸಾಪ್‌, ಸ್ನಾಪ್‌ಚಾಟ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಯರನ್ನು ಸಂಪರ್ಕಿಸುತ್ತಿದ್ದ ಅಮರಾವತಿ ಜಿಲ್ಲೆಯ ಪರತವಾಡಾ ನಿವಾಸಿ ತನ್ವೀರ್‌, ಕ್ರಮೇಣ ಅವರ ಸ್ನೇಹ ಗಳಿಸಿ, ಪ್ರೇಮಪಾಶಕ್ಕೆ ಸಿಲುಕಿಸುತ್ತಿದ್ದ. ಬಳಿಕ ಅವರನ್ನು ಮುಂಬೈ ಪುಣೆಯಂತಹ ನಗರಗಳಿಗೆ ಕರೆದೊಯ್ದು, ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಿಸುತ್ತಿದ್ದ. ಬಳಿಕ ಅವುಗಳನ್ನು ಬಳಸಿ ಬ್ಲ್ಯಾಕ್‌ಮೇಲ್‌ ಮಾಡಿ, ಅವರನ್ನು ವೇಶ್ಯಾವಾಟಿಯಲ್ಲಿ ತೊಡಗುವಂತೆಯೂ ಒತ್ತಾಯಿಸುತ್ತಿದ್ದ. ಕೆಲವರನ್ನು ಮತಾಂತರಕ್ಕೂ ಬಲವಂತ ಮಾಡಿದ್ದ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕೆಲ ಫೋಟೋ ವೈರಲ್‌ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ಅನಿಲ್‌ ಬೊಂಡೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಕೂಡಲೇ ಕ್ರಮ:

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಪೊಲೀಸರು, ತನ್ವೀರ್‌ನನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಏ.21ರ ವರೆಗೆ ಪೊಲೀಸ್‌ ವಶಕ್ಕೆ ನೀಡಲಾಗಿದೆ. ಅತ್ತ ಅವನಿಗೆ ಸೇರಿದ್ದ ಮೊಬೈಲ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 180 ಅಪ್ರಾಪ್ತೆಯರ 350ಕ್ಕೂ ಹೆಚ್ಚು ಅಶ್ಲೀಲ ಚಿತ್ರ ಪತ್ತೆಯಾಗಿದೆ. ಜತೆಗೆ ತನ್ವೀರ್‌ ಒಬ್ಬನೇ ಈ ಕೃತ್ಯಗಳನ್ನು ಮಾಡುತ್ತಿದ್ದನೇ ಅಥವಾ ಇದರ ದೊಡ್ಡ ಜಾಲ ಇದೆಯೇ ಎಂಬುದರ ಪತ್ತೆಯೂ ನಡೆಯುತ್ತಿದೆ. ಕೇಸ್‌ನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಸದ್ಯ 8 ಸಂತ್ರಸ್ತೆಯರನ್ನು ಗುರುತಿಸಲಾಗಿದ್ದು, ಇನ್ಯಾರಾದರೂ ಇದ್ದರೆ ಧೈರ್ಯವಾಗಿ ಮುಂದೆ ಬಂದು ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಬಲಿಪಶುಗಳ ಪರಿವಾರವನ್ನೂ ಸಂಪರ್ಕಿಸಲಾಗುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2 ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ಸೇರಿ 3 ವಿಧೇಯಕ ಮಂಡನೆಗೆ ಕ್ಷಣಗಣನೆ
ಹೋರ್ಮುಜ್‌ನಲ್ಲಿ ಇದೀಗ ಸಂಪೂರ್ಣ ನಿರ್ಬಂಧ ಜಾರಿ